
ಕಾವೂರು ಆಯುಮಲ ಗಾಂಧಿನಗರದ ಶ್ರೀ ಮಿಥುನ್ ಭಂಡಾರಿ ಮತ್ತು ಶ್ರೀಮತಿ ದಿವ್ಯಾ ಮಿಥುನ್ ಭಂಡಾರಿ ದಂಪತಿಯು ಅಕ್ಟೋಬರ್ 19 ರ ಶುಕ್ರವಾರ ತಮ್ಮ ವೈವಾಹಿಕ ಜೀವನದ ಹತ್ತನೇ ವರ್ಷದ ವಾರ್ಷಿಕೋತ್ಸವವನ್ನು ಸಡಗರದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಬೇಬಿ ಆಯುಷಿ
ಯ ಜನ್ಮದಿನವಾಗಿರುವುದು ವಿಶೇಷ. ಆಯುಷಿಯ ಆರನೇ ವರ್ಷದ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಬೇಬಿ ಆಯುಷಿಗೆ ತಮ್ಮ ಅದ್ವಿತ್ ನ ಪರವಾಗಿ ತಂದೆ, ತಾಯಿ ಮತ್ತು ಬಂಧುಗಳು ಶುಭ ಕೋರುತ್ತಿದ್ದಾರೆ.
ವಿವಾಹ ವಾರ್ಷಿಕೋತ್ಸವದ ದಶಮಾನೋತ್ಸವದ ಸಂಭ್ರಮದಲ್ಲಿರುವ ದಂಪತಿಗೆ
ಶ್ರೀ ಶೇಖರ್ ಭಂಡಾರಿ,ಶ್ರೀಮತಿ ವಾರಿಜ ಭಂಡಾರಿ,
ಶ್ರೀ ಕಿರಣ್ ಭಂಡಾರಿ,ಶ್ರೀಮತಿ ಲೈಲಾ ಭಂಡಾರಿ,
ಶ್ರೀ ಆದಿತ್ಯ ಭಂಡಾರಿ,ಶ್ರೀಮತಿ ಅನುಷ್ಕಾ ಭಂಡಾರಿ,
ಶ್ರೀ ಅಕ್ಷಯ್ ಭಂಡಾರಿ ಮತ್ತು ಬಂಧುಗಳು,
ಆತ್ಮೀಯರು,ಸ್ನೇಹಿತರು ಶುಭ ಹಾರೈಸುತ್ತಿದ್ದಾರೆ.
ಹುಟ್ಟು ಹಬ್ಬದ ಖುಷಿಯಲ್ಲಿರುವ ಬೇಬಿ ಆಯುಷಿಗೆ ಶ್ರೀ ದೇವರು ಆಯುರಾರೋಗ್ಯವನ್ನು ನೀಡಿ ಕಾಪಾಡಲಿ,ವಿವಾಹ ವಾರ್ಷಿಕೋತ್ಸವದ ಸಡಗರದಲ್ಲಿರುವ ಮಿಥುನ್ ಮತ್ತು ದಿವ್ಯಾರಿಗೆ ಭಗವಂತನು ಆಯುರಾರೋಗ್ಯ,ಐಶ್ವರ್ಯಗಳನ್ನಿತ್ತು, ಸುಖ ಶಾಂತಿ ನೆಮ್ಮದಿಯುತ ಜೀವನವನ್ನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ.
-ಭಂಡಾರಿವಾರ್ತೆ.