January 18, 2025
Charvi1

ಬಂಟ್ವಾಳ ಕಬ್ಬಿನಹಿತ್ಲು ಮನೆಯ ಶ್ರೀ ಸಂತೋಷ್ ಭಂಡಾರಿ ಮತ್ತು ಮೂಡಬಿದಿರೆ ನಾಗರಕಟ್ಟೆಯ ಶ್ರೀಮತಿ ನಾಗಶ್ರೀ ಭಂಡಾರಿ ದಂಪತಿಗಳ ಮುದ್ದಿನ ಮಗಳು ಬೇಬಿ.‌ಚಾರ್ವಿ ಯ ಮೊದಲ ವರ್ಷದ ಹುಟ್ಟುಹಬ್ಬವನ್ನು ದಿನಾಂಕ 16ನೇ ಏಪ್ರಿಲ್ 2019 ರಂದು ಮಂಗಳವಾರ ವಿಜೃಂಬಣೆಯಿಂದ ಸ್ವಗೃಹದಲ್ಲಿ ಬಂಧುಮಿತ್ರರ ಉಪಸ್ಥಿತಿಯಲ್ಲಿ ಆಚರಿಸಲಾಯಿತು.

ಈ ಶುಭ ಸಮಾರಂಭಕ್ಕೆ ಬಂಧು ಮಿತ್ರರು, ಅತಿಥಿಗಳು ಆಗಮಿಸಿ ಬೇಬಿ. ಚಾರ್ವಿಗೆ ಶುಭಹಾರೈಸಿದರು. ಆಗಮಿಸಿದ ಅತಿಥಿಗಳಿಗೆ, ಮಕ್ಕಳಿಗೆ ಕೆಲವು ಅದೃಷ್ಟ ಆಟೋಟ ಸ್ಫರ್ದೆಗಳನ್ನು ಏರ್ಪಡಿಸಿ ಬಹುಮಾನ ನೀಡುವುದರ ಮೂಲಕ ಹುಟ್ಟುಹಬ್ಬವನ್ನು ಇನ್ನಷ್ಟು ಮನೋರಂಜನೀಯವಾಗಿ ಆಚರಿಸಲಾಯಿತು. 

ಈ ಶುಭ ಸಂದರ್ಭದಲ್ಲಿ ಬೇಬಿ. ಚಾರ್ವಿ ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಾ , ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿವಾರ್ತೆ ಹಾರೈಸುತ್ತದೆ.

ಭಂಡಾರಿವಾರ್ತೆ

Leave a Reply

Your email address will not be published. Required fields are marked *