
ಗರಡಿಮಜಲು, ಕೊಜಕುಲ ಶ್ರೀ ಪ್ರದೀಪ್ ಕುಮಾರ್ ಭಂಡಾರಿಯವರ ಧರ್ಮಪತ್ನಿ ಶ್ರೀಮತಿ ಹೇಮಾವತಿ ಪ್ರದೀಪ್ ಕುಮಾರ್ ಭಂಡಾರಿಯವರ ಸೀಮಂತ ಶಾಸ್ತ್ರ ಕಾರ್ಯಕ್ರಮ ಉಡುಪಿಯ ಶಾರದಾ ಇಂಟರ್ನ್ಯಾಶನಲ್ ಹೋಟೆಲ್ ನ ಸಭಾಂಗಣದಲ್ಲಿ ನವೆಂಬರ್ 28,2018 ರ ಬುಧವಾರ ವೈಭವದಿಂದ ನೆರವೇರಿತು.
ಈ ಶುಭ ಸಂದರ್ಭದಲ್ಲಿ ಅವರಿಗೆ ಅವರ ಪತಿ,ಮಾವ ಶ್ರೀ ಸದಾಶಿವ ಭಂಡಾರಿ, ಮಾಮಿ ಶ್ರೀಮತಿ ಶಾಂಭವಿ ಸದಾಶಿವ ಭಂಡಾರಿ, ಅವರ ನಾದಿನಿ ಶ್ರೀಮತಿ ಪ್ರತಿಭಾ ವಿನಯ್ ಟೀಕಪ್ಪ, ಬಾವ ಶ್ರೀ ವಿನಯ್ ಟೀಕಪ್ಪ, ಬೆಂಗಳೂರು ಮತ್ತು ಪುಟಾಣಿ ಧೃತಿ ವಿನಯ್ ಟೀಕಪ್ಪ ಮತ್ತು ಬಂಧುಮಿತ್ರರು ಶುಭ ಹಾರೈಸಿದ್ದಾರೆ.
ಸೀಮಂತ ಶಾಸ್ತ್ರದ ಸಂಭ್ರಮದಲ್ಲಿರುವ ಶ್ರೀಮತಿ ಹೇಮಾವತಿಯವರಿಗೆ ಶ್ರೀ ದೇವರು ಸುಖಪ್ರಸವವಾಗುವಂತೆ ಆಶೀರ್ವದಿಸಿ, ಕಾಪಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಮನಃಪೂರ್ವಕವಾಗಿ ಶುಭ ಹಾರೈಸುತ್ತದೆ.