
ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ತಿಕ್ಕೆಗುಡ್ಡೆ ಹೌಸ್ ನಲ್ಲಿ ಶ್ರೀ ಶ್ರೀಕಾಂತ್ ಭಂಡಾರಿ ಮತ್ತು ಶ್ರೀಮತಿ ಕಾವ್ಯ ಶ್ರೀಕಾಂತ್ ಭಂಡಾರಿ ದಂಪತಿಗಳ ಪುತ್ರಿ ಬೇಬಿ ತನ್ವಿತ ಶ್ರೀಕಾಂತ್ ಭಂಡಾರಿಯವರ ಏಳನೇ ವರ್ಷದ ಹುಟ್ಟು ಹಬ್ಬವನ್ನು ಜನವರಿ 27 ರ ಶನಿವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಂದೆ ಶ್ರೀಕಾಂತ್ ಭಂಡಾರಿ, ತಾಯಿ ಕಾವ್ಯ ಶ್ರೀಕಾಂತ್ ಭಂಡಾರಿ, ಮಾವ ಶ್ರೀ ಆದಿತ್ಯ ಭಂಡಾರಿ,ಅಜ್ಜಿಯಂದಿರಾದ ಲತಾ ಭಂಡಾರಿ, ಕಮಲಾಕ್ಷಿ ಭಂಡಾರಿ ಮತ್ತು ಬಂಧುಮಿತ್ರರು,ಕುಟುಂಬಸ್ಥರು ಶುಭಹಾರೈಸಿದರು.

ಬೇಬಿ ತನ್ವಿತ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಈ ಸುಸಂದರ್ಭದಲ್ಲಿ ಭಗವಂತನು ಆಕೆಗೆ ಆರೋಗ್ಯ, ಐಶ್ವರ್ಯ, ವಿದ್ಯಾಬುದ್ದಿಗಳನ್ನು ದಯಪಾಲಿಸಿ,ಹರಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
–ಭಂಡಾರಿವಾರ್ತೆ