ಅಣ್ಣ-ತಂಗಿಯ,ಅಕ್ಕ-ತಮ್ಮನ ಬಾಂಧವ್ಯವನ್ನು ಬೆಸೆಯುವ ಪವಿತ್ರ ಹಬ್ಬವೇ ರಕ್ಷಾಬಂಧನ.ಈ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆ ದಿನದಂದು ಆಚರಿಸಲಾಗುತ್ತದೆ.ಈ ವರುಷ ಆಗಸ್ಟ್ 22 ರ ತಾರೀಖು ಆದಿತ್ಯವಾರ ರಾಖಿ ಹಬ್ಬವನ್ನು ಸಂಭ್ರಮಿಸಲಾಗುತ್ತಿದೆ.
ಅದೇಷ್ಟೇ ಇಬ್ಬರ ನಡುವೆ ಕಿತ್ತಾಡವಿರಲಿ,ಕೋಪವಿರಲಿ,ವರುಷಗಟ್ಟಲೇ ಮಾತಿಲ್ಲದೇ ಇದ್ದರೂ ಮೂರನೇ ವ್ಯಕ್ತಿಯೊಡನೆ ಒಬ್ಬರೊನೊಬ್ಬರು ಬಿಟ್ಟು ಕೊಡುವುದಿಲ್ಲ.ಒಂಥರ ಅವರಿಬ್ಬರ ಸಂಬಂಧ ರಕ್ಷೆಯಲ್ಲಿ ಬೆಸೆದ ದಾರದ ಹಾಗೆ.
ರಕ್ಷಾಬಂಧನದ ಆಚರಣೆಯ ಹಿಂದೆ ಹಲವಾರು ಐತಿಹಾಸಿಕ ಹಿನ್ನೆಲೆ ಇದೆ.ಅದರಲ್ಲೊಂದು ಮಹಾಭಾರತದ ಇತಿಹಾಸದ ಕತೆಯೂ ಇದೆ.ಶಿಶುಪಾಲನನ್ನು ಕೊಲ್ಲಲು ಶ್ರೀಕೃಷ್ಣ ಸುದರ್ಶನ ಚಕ್ರ ಬಳಸಲು ಹೋದಾಗ ಅವರ ಕೈ ಬೆರಳಿಗೆ ತಗುಲಿ ಗಾಯವಾಯಿತು.ತಕ್ಷಣ ದ್ರೌಪದಿ ತನ್ನ ಸೀರೆಯ ತುಂಡನ್ನು ಹರಿದು ಗಾಯದ ಸ್ಥಳಕ್ಕೆ ಕಟ್ಟಿದಳು.ಅದೇ ಅಂದು ರಾಖಿಯಾಯಿತು.ಅವರಿಬ್ಬರ ನಡುವೆ ಅಣ್ಣ ತಂಗಿಯ ಬಾಂಧವ್ಯ ಆರಂಭವಾಯಿತು.ಮುಂದೆ ದುಶ್ಯಾಶನ ದ್ರೌಪದಿ ಸೀರೆ ಎಳೆದಾಗ ಕೃಷ್ಣ ರಕ್ಷಣೆ ನೀಡಿದನೆಂದು ಉಲ್ಲೇಖವಾಗಿದೆ.
ಅಣ್ಣ ಇಲ್ಲದವರು ತಮ್ಮನನ್ನೇ ಅಣ್ಣನ ಸ್ಥಾನದಲ್ಲಿಟ್ಟು ಗೌರವವನ್ನು ನೀಡುತ್ತಾರೆ ಹಾಗೆ ತಪ್ಪು ಮಾಡಿದಾಗ ಅಕ್ಕ ಆದವಳು ತಾಯಿಯ ಹಾಗೆ ತಿದ್ದಿ ಬುದ್ಧಿಯನ್ನು ಹೇಳುತ್ತಾರೆ
ರಕ್ತಸಂಬಂಧ ಹಂಚಿಕೊಂಡು ಹುಟ್ಟಿದವರು ಮಾತ್ರ ಅಣ್ಣ ತಂಗಿನಾ?ಅಥವಾ ಅಕ್ಕ ತಮ್ಮನಾ?…ಖಂಡಿತವಾಗಿ ಅಲ್ಲ.ಅ ಭಾವನೆಯನ್ನು ಹೊಂದಿದ ಪ್ರತಿಯೊಬ್ಬರು ಸಹೋದರ ಸಹೋದರಿ.ಒಂದೆಡೆ ತನ್ನ ತಂಗಿ,ಅಕ್ಕನನ್ನು ತಾಯಿಯಂತೆ ಆರಾಧಿಸುವವರು ಇದ್ದಾರೆ.ಮತ್ತೊಂದೆಡೆ ಕೆಟ್ಟ ದೃಷ್ಟಿಯಿಂದ ನೋಡುವವರು ಇದ್ದಾರೆ.
ಇಂದು ಮಾರುಕಟ್ಟೆಗೆ ವಿಭಿನ್ನವಾಗಿರುವ ಒಂದು ರೂಪಾಯಿಯಿಂದ ಹಿಡಿದು ಲಕ್ಷಗಟ್ಟಲೆ ತನಕ ಇರುವ ರಾಖಿಯೂ ಇದೆ.ಎಲ್ಲವೂ ಅವರವರ ಅನುಕೂಲಕ್ಕೆ ಬಿಟ್ಟದ್ದು.ಆದರೂ ದುಬಾರಿ ತೋರ್ಪಡಿಕೆಗಿಂತ ಶುದ್ಧ ಮನಸ್ಸಿನಿಂದ,ಪ್ರೀತಿಯಿಂದ ಕಟ್ಟುವ ಸರಳ ದಾರಕ್ಕೂ ವಿಶಿಷ್ಟ ಅರ್ಥವಿದೆ.
ಸಹೋದರ ಸಹೋದರಿಯರಿಗೆ ಒಂದು ಕಿರುಮಾತು.ಇವತ್ತೂ ಇದ್ದವರು ನಾಳೆ ಇರುತ್ತಾರೆಂದು ಹೇಳಲು ಸಾಧ್ಯ ಇಲ್ಲದಿರುವಾಗ ಯಾವುದೋ ಕೆಟ್ಟ ಘಳಿಗೆಯಲ್ಲಿ ನಡೆದುಹೋದ ಸಂಧರ್ಭವನ್ನು ನೆನೆದು ಕೋಪ ಸಾಧಿಸುವುದಕ್ಕಿಂತ ಮತ್ತೆ ಒಂದಾಗಿ ಪ್ರೀತಿಯಿಂದ ಬದುಕುವುದು ಮುಖ್ಯವಲ್ಲವೇ…….
ಗ್ರೀಷ್ಮಾ ಭಂಡಾರಿ
ಪ್ರಥಮ ಎಂ.ಎ
ಅರ್ಥಶಾಸ್ತ್ರ ವಿಭಾಗ
ವಿಶ್ವವಿದ್ಯಾನಿಲಯ ಕಾಲೇಜು
ಮಂಗಳೂರು