January 18, 2025
rajeevi Bhandary Bantval
ಮಾರಿಪಳ್ಳದ ಕೇಶವ ಭಂಡಾರಿಯವರ ಪತ್ನಿ ಶ್ರೀಮತಿ ರಾಜೀವಿ ಭಂಡಾರಿ  ಅಲ್ಪ ಕಾಲದ ಅಸೌಖ್ಯದಿಂದ  20 ಅಕ್ಟೋಬರ್ ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ ಸುಮಾರು 55 ವರ್ಷ ವಯಸ್ಸಾಗಿತ್ತು .
 
 
ದಿವಂಗತ ರಾಜೀವಿಯವರು ಗಂಡ ಶ್ರೀ ಕೇಶವ ಭಂಡಾರಿ, ಒಬ್ಬನೇ ಮಗ ಸಂದೇಶ್  ಭಂಡಾರಿ, ಕುಟುಂಬಸ್ಥರು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ . ಮಗ ಸಂದೇಶ್ ಬೆಂಗಳೂರಿನಲ್ಲಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 
 
ಇತ್ತೀಚಿಗೆ ಉದ್ಯೋಗಕ್ಕಾಗಿ ಕುವೈಟ್ ಗೆ ತೆರಳಿದ್ದರು . ಕೆಲವೇ ದಿನದ ಹಿಂದೆ ಕುವೈಟ್ ನಲ್ಲಿ  ಕೆಲಸಕ್ಕೆ ಸೇರಿರುವ ಕಾರಣ ತಾಯಿಯನ್ನು ನೋಡಲು ತುರ್ತಾಗಿ ಊರಿಗೆ ಬರಲು ಕಾನೂನಿನ ತೊಡಕಿತ್ತು . ಕುವೈಟ್ ನಲ್ಲಿರುವ ಭಂಡಾರಿ ಬಂಧು ರಾಜ್ ಭಂಡಾರಿ ತಿರುಮಲೆಗುತ್ತು ಆತನ ಸಂಸ್ಥೆಯ ಮುಖ್ಯಸ್ಥರನ್ನು ಸಂಪರ್ಕಿಸಿ ಎಲ್ಲಾ ತೊಡಕನ್ನು ನಿವಾರಿಸಿ ಸಂಸ್ಥೆಯ ಮುಖಾಂತರವೇ ಊರಿಗೆ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ .
 
ರಾಜ್ ಭಂಡಾರಿ ತಿರುಮಲೆಗುತ್ತು ಮತ್ತು ಕುವೈಟ್ ನಲ್ಲಿರುವ ಇತರ ಬಂಧುಗಳ ಮತ್ತು ಸಂದೇಶ್ ನ ಸಂಸ್ಥೆಯ ಮುಖ್ಯಸ್ಥರ  ಸಮಯೋಚಿತ ಸಹಾಯವನ್ನು ಭಂಡಾರಿ ವಾರ್ತೆ ಶ್ಲಾಘಿಸುತ್ತದೆ .
 
ಮೃತರ ಅಂತ್ಯಕ್ರಿಯೆಯು ಅಕ್ಟೋಬರ್ 23 ಬುಧವಾರ ಮಧ್ಯಾಹ್ನ ನಡೆಯಲಿದೆಯೆಂದು ಕುಟುಂಬದ ಮೂಲಗಳು ತಿಳಿಸಿವೆ .
 
ದಿವಂಗತ ರಾಜೀವಿ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ,  ಕುಟುಂಬಕ್ಕೆ ಆಕೆಯ ಅಗಲಿಕೆಯ ದುಃಖವನ್ನು ಸಹಿಸುವ ಸ್ಥೈರ್ಯವನ್ನು ದಯಪಾಲಿಸಲೆಂದು ಭಂಡಾರಿವಾರ್ತೆ ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತದೆ.
 
ಭಂಡಾರಿವಾರ್ತೆ

Leave a Reply

Your email address will not be published. Required fields are marked *