November 24, 2024
Subbanna Bhandary Kesagadde
ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸಮಾಜ ಸೇವಕ ಕೊಡುಗೈ ದಾನಿ ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ನಿವಾಸಿ ಶ್ರೀ ಸುಬ್ಬ ಭಂಡಾರಿ ಅವರು ಮೇ 7 ನೇ ಗುರುವಾರದಂದು   ತಮ್ಮ 85 ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಗಳಿಂದ ನಿಧನರಾದರು.
 
 
  ಸುಬ್ಬಣ್ಣ ಎಂದೇ ಪರಿಚಿತ ಅವರು 1935 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡ್ಡಕಟ್ಟೆಯಲ್ಲಿ ನಾರಾಯಣ ಭಂಡಾರಿ ಮತ್ತು ಪುಟ್ಟಕ್ಕ ಅವರಿಗೆ ಮೂರನೆಯ ಮಗನಾಗಿ ಜನಿಸಿದರು. ಸಣ್ಣ ವಯಸ್ಸಿನಲ್ಲಿಯೇ ತಂದೆ ತಾಯಿ ಕಳೆದುಕೊಂಡ ಸುಬ್ಬ ಅವರ ದೊಡ್ಡಪ್ಪನ ಆಶ್ರಯದಲ್ಲಿ ಬೆಳೆದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಅವರಿಗೆ 12 ವರ್ಷ. ತಂದೆ ತಾಯಿ  ಕಳೆದುಕೊಂಡ ಅವರು ಎರಡನೆಯ ತರಗತಿಯ ನಂತರ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ.  ಯುವಕನಾಗುತ್ತಲೇ ಮನೆಯನ್ನು ಬಿಟ್ಟು ಪುತ್ತೂರು, ಕಾಂಜ್ಞಾಗಾಡ್ , ಕಾರ್ಕಳ ಮುಂತಾದ ಊರುಗಳಲ್ಲಿ ಬೀಡಿ ಕಟ್ಟುವ ಕೆಲಸ ಮಾಡಿ ಕೊನೆಗೆ ಬಂಟ್ವಾಳದ ಅಮ್ಟಾಡಿಯಲ್ಲಿ ನೆಲೆಯೂರುತ್ತಾರೆ.  1958 ರಲ್ಲಿ ಬೀಡಿ ಆಂಡ್ ಜನರಲ್ ಲೇಬರ್ ಯೂನಿಯನ್ ಸದಸ್ಯರಾಗುತ್ತಾರೆ. ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇತ್ತು. ಆದರೆ ಕುಟುಂಬದ ಬೆಂಬಲ ಸಿಗಲಿಲ್ಲ.  
 
1965 ರಲ್ಲಿ ಅವರ 30 ನೇ ವಯಸ್ಸಿನಲ್ಲಿ ಕಾರ್ಕಳ ತಾಲೂಕಿನ ಕೆಸರಗದ್ದೆಯ ರಮೇಶ ಭಂಡಾರಿ ಅವರ ಸಹೋದರಿ ರತಿ ಅವರನ್ನು ವಿವಾಹವಾಗುತ್ತಾರೆ.  ವಿವಾಹದ ನಂತರ ಬೀಡಿ ಕೆಲಸವನ್ನು ಮುಂದುವರೆಸಿ ನಂತರ ಬೀಡಿ ಬ್ರಾಂಚಿನಲ್ಲಿ ಚಕ್ಕರ್ ಆಗಿ ದುಡಿಯಲು ಸಾಧ್ಯವಾಗುವ ವಯಸ್ಸಿನವರೆಗೂ ದುಡಿಯುತ್ತಾರೆ.  ವೃತ್ತಿಯ ಜೊತೆಗೆ ಭಾರತ ಕಮುನಿಸ್ಟ್ ಪಕ್ಷದ ಸದಸ್ಯರಾಗಿ, ಕಾರ್ಮಿಕ ಸಂಘದ ಸದಸ್ಯರಾಗಿ ದುಡಿಯುವವರ ಪರವಾದ ಹೋರಾಟಗಳಲ್ಲಿ ಭಾಗವಹಿಸುತ್ತಾರೆ. ದುರ್ಗಾಪರಮೇಶ್ವರಿ ಭಜನಾ ಮಂಡಳಿ ಹೊಳ್ಳರಬೈಲ್ ಅಮ್ಟಾಡಿ ಇದರ ಅಧ್ಯಕ್ಷರಾಗಿ ಮತ್ತು ಅಮ್ಟಾಡಿ ಮುಂಡೆಗುರಿ ಸ್ಮಶಾನ ಸಮಿತಿಯ ಅಧ್ಯಕ್ಷರಾಗಿ  ಸೇವೆ ಸಲ್ಲಿಸಿದ್ದಾರೆ.
 
ಶ್ರೀ ಸುಬ್ಬ ಭಂಡಾರಿಯವರ ಧರ್ಮಪತ್ನಿ ಶ್ರೀಮತಿ ರತಿ ಸುಬ್ಬ ಭಂಡಾರಿ  ಅಮ್ಟಾಡಿ ಗ್ರಾಮ ಪಂಚಾಯತ್ ಹಾಲಿ ಸದಸ್ಯರಾಗಿರತ್ತಾರೆ ಇವರಿಗೆ ನಾಲ್ಕು ಮಂದಿ ಪುತ್ರರು, ಮತ್ತು ಇಬ್ಬರು ಪುತ್ರಿಯರು  ಹಿರಿಯ ಮಗಳು ಶ್ರೀಮತಿ ಶಕುಂತಲಾ ಮಂಜುನಾಥ್ ಭಂಡಾರಿ ಕೆಸರಗದ್ದೆ ಕಾರ್ಕಳ , ಶ್ರೀ ಜನಾರ್ದನ ಭಂಡಾರಿ  ಯಲಹಂಕ ಬೆಂಗಳೂರು ಶ್ರೀ  ಶ್ರೀನಿವಾಸ  ಭಂಡಾರಿ ಅಮ್ಟಾಡಿ ಶ್ರೀ ರಾಮ್ ದಾಸ್ ಭಂಡಾರಿ ದುಬೈ  ಮಂಚಿ ಇರಾ ಶಾಲೆ ಶಿಕ್ಷಕಿ ಶ್ರೀಮತಿ ಶೈಲಾಜ ಕೇಶವ ಕುಕ್ಕಾಜೆ ಮಂಚಿ ಶ್ರೀ ಕೇಶವ ಭಂಡಾರಿ ದುಬೈ  ಮತ್ತು  ಅಳಿಯಂದಿರು , ಸೊಸೆಯಂದಿರು ಹನ್ನೆರಡು  ಮಂದಿ ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
 
  ಬಿ.ಸಿ.ರೋಡಿನಲ್ಲಿ ಬ್ಯೂಟಿ ಪಾರ್ಲರ್ ಮತ್ತು ಸೆಲೂನ್ ನಡೆಸುತ್ತಿರುವ ಶ್ರೀನಿವಾಸ ಭಂಡಾರಿ ಸವಿತಾ ಸಮಾಜದ ಉಪಾಧ್ಯಕ್ಷರಾಗಿ ಪ್ರಸ್ತುತ ಕೋಶಾಧಿಕಾರಿಯಾಗಿದ್ದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರುತ್ತಾರೆ. ಶ್ರೀ ಜನಾರ್ದನ್ ಬೆಂಗಳೂರು ನಲ್ಲಿ  ಉದ್ಯೋಗದಲ್ಲಿ ಇದ್ದಾರೆ ಶ್ರೀ ರಾಮ್ ದಾಸ್ ಭಂಡಾರಿ  ಮತ್ತು  ಶ್ರೀ ಕೇಶವ ಭಂಡಾರಿ ದುಬೈ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
 
  ಶ್ರೀ ಸುಬ್ಬ ಭಂಡಾರಿ ಯವರ ಪತ್ನಿ  ಮಕ್ಕಳಿಗೆ ಹಾಗೂ ಕುಟುಂಬಸ್ಥರಿಗೆ ನಿಧನದ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ  ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.
 
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *