
ಬಂಟ್ವಾಳದ ಬಿ.ಸಿ.ರೋಡ್ ಲಯನ್ಸ್ ಕ್ಲಬ್ ನವರು ಸತತ 1170 ನೇ ಬಾರಿಗೆ ಮದ್ಯವರ್ಜನ ಶಿಬಿರ ವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಬಂಟ್ವಾಳ ಭಂಡಾರಿ ಸಮಾಜ ಸಂಘ ಮತ್ತು ಭಂಡಾರಿ ಯುವ ವೇದಿಕೆ ಯ ಬಂಧುಗಳು ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಉಚಿತವಾಗಿ ಕೇಶಕರ್ತನ ಮಾಡುವ ಮೂಲಕ ತಮ್ಮ ಅಳಿಲುಸೇವೆ ಸಲ್ಲಿಸಿದರು.

ಬಂಟ್ವಾಳದ ನಮ್ಮ ವೃತ್ತಿಬಾಂಧವರಾದ ಶ್ರೀಕಾಂತ್ ಪಾಣೆಮಂಗಳೂರು, ವಸಂತ್ ಕಲಾಯರ್,ದೀಪಕ್ ಕಲಾಯರ್, ರಾಜೇಶ್ ಮಾರ್ನಬೈಲು,ಕೇಶವ ಬಂಟ್ವಾಳ, ಲೋಕೇಶ್ ಬಂಟ್ವಾಳ, ವಾಸುದೇವ ಬಂಟ್ವಾಳ, ಪ್ರಕಾಶ್ ಬಂಟ್ವಾಳ, ಜಯರಾಮ್ ಮೆಲ್ಕಾರ್,ಸದಾಶಿವ ಕಬ್ಬಿನಹಿತ್ಲು ಮತ್ತು ದೀಕ್ಷಿತ್ ಕಬ್ಬಿನಹಿತ್ಲು ಮುಂತಾದವರು ಈ ಸೇವಾಕಾರ್ಯದಲ್ಲಿ ಕೈಜೋಡಿಸಿದರು. ಭಂಡಾರಿ ಬಂಧುಗಳ ಈ ಸಮಾಜಸೇವಾ ಕಾರ್ಯವನ್ನು ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸಿದರು.
ಸಮಾಜ ಸೇವೆಯೇ ಪರಮ ಗುರಿಯೆಂದು ನಂಬಿರುವ ಭಂಡಾರಿ ಸಮಾಜದ ಯುವಕರ ಈ ಸೇವೆಯನ್ನು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಬೆಂಬಲಿಸುತ್ತದೆ ಮತ್ತು ಅವರನ್ನು ಮನಃಪೂರ್ವಕವಾಗಿ ಅಭಿನಂದಿಸುತ್ತದೆ.
—ಭಂಡಾರಿವಾರ್ತೆ
Good job