January 18, 2025
keshav bhandary

                     ಬಂಟ್ವಾಳದ ನಿತ್ಯಾನಂದ ನಗರ ವಾಸಿಯಾಗಿರುವ ಶ್ರೀ ಕೇಶವ ಭಂಡಾರಿಯವರು ಬಂಟ್ವಾಳದ ಅಜೆಕಲ, ಬೈಪಾಸ್ ರೋಡ್ ನ ನಿತ್ಯಾನಂದ ಸ್ಟೀಲ್ಸ್ ಎದುರುಗಡೆ ಇರುವ ಸ್ಮೃತಿ ಕಾಂಪ್ಲೆಕ್ಸ್ ನಲ್ಲಿ ತಾವು ನೂತನವಾಗಿ ಆರಂಭಿಸಿರುವ “ರಾಯಲ್ ಮೆನ್ಸ್ ಪಾರ್ಲರ್” ನ ಉದ್ಘಾಟನೆಯನ್ನು ನವೆಂಬರ್ 15, 2018 ರ ಗುರುವಾರ ಶ್ರೀ ಮಹಾಲಕ್ಷ್ಮಿ ಶ್ರೀ ಮಹಾಗಣಪತಿ ಪೂಜೆಯೊಂದಿಗೆ ನೆರವೇರಿಸಿದರು.
         ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಂಧುಗಳು,ಆತ್ಮೀಯರು, ಹಿತೈಷಿಗಳು ಶುಭ ಕೋರಿದರು. ಕಚ್ಚೂರು ಕೋ ಆಪರೇಟಿವ್ ಸೊಸೈಟಿಯ ಬಿ.ಸಿ ರೋಡ್ ಶಾಖೆಯಲ್ಲಿ ಉದ್ಯೋಗಿಯಾಗಿರುವ ಕೇಶವ ಭಂಡಾರಿಯವರ ಪತ್ನಿ ಶ್ರೀಮತಿ ಬಬಿತಾ ಮತ್ತು ಪುತ್ರಿ ದಿಪಂಚಾ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

          ಬಂಟ್ವಾಳ ಭಂಡಾರಿ ಸಮಾಜ ಸಂಘದ ಸಕ್ರಿಯ ಸದಸ್ಯರಾಗಿರುವ ಶ್ರೀ ಕೇಶವ ಭಂಡಾರಿಯವರ ನೂತನ ಉದ್ಯಮ ಅವರಿಗೆ ಸಕಲಷ್ಠೈಶ್ವರ್ಯಗಳನ್ನೂ ಒದಗಿಸಲಿ,ಅವರ ಬಾಳಲ್ಲಿ ಸುಖ ಶಾಂತಿ ನೆಮ್ಮದಿ ತುಂಬಿರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

ವರದಿ : ಜಗದೀಶ್ ಭಂಡಾರಿ ಕುರಿಯಾಳ.

Leave a Reply

Your email address will not be published. Required fields are marked *