


ಬಂಟ್ವಾಳ ತಾಲೂಕು ನಾವೂರ ಭಂಡಾರಿ ಪಾಲ್ ಶ್ರೀ ಶಿವಪ್ಪ ಭಂಡಾರಿ ಮತ್ತು ಶ್ರೀಮತಿ ಯಶೋಧ ಶಿವಪ್ಪ ಭಂಡಾರಿ ದಂಪತಿಯ ಪುತ್ರ…
ಚಿ|| ಪ್ರಕಾಶ್.
ಹಾಗೂ ಕಾರ್ಕಳ ತಾಲೂಕು ಕಾಬೆಟ್ಟು ಶ್ರೀ ಚಂದ್ರಶೇಖರ್ ಭಂಡಾರಿ ಮತ್ತು ಶ್ರೀಮತಿ ಭಾರತಿ ಚಂದ್ರಶೇಖರ್ ಭಂಡಾರಿ ದಂಪತಿಯ ಪುತ್ರಿ…
ಚಿ||ಸೌ|| ಚೈತ್ರಾ.
ಇವರ ವಿವಾಹವು ಡಿಸೆಂಬರ್ 17,2018 ರ ಸೋಮವಾರ ಬಂಟ್ವಾಳದ “ಬಂಟರ ಭವನ” ದಲ್ಲಿ ಗುರುಹಿರಿಯರು, ಬಂಧು ಮಿತ್ರರು,ಕುಟುಂಬಸ್ಥರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ನೂತನ ದಂಪತಿಗಳಿಗೆ ಭಗವಂತನು ಆರೋಗ್ಯ, ಆಯುಷ್ಯ,ಸಕಲ ಐಶ್ವರ್ಯವನ್ನು ಕರುಣಿಸಿ ಚಿರಕಾಲ ಪ್ರೀತಿಯಿಂದ ಬಾಳಿ ಬದುಕುವಂತೆ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
ವರದಿ : ಶ್ರೀಕಾಂತ್ ಭಂಡಾರಿ ಪಾಣೆಮಂಗಳೂರು.