
ಬಂಟ್ವಾಳ ಪುರಸಭೆಗೆ ಅಗಸ್ಟ್ 31 ರಂದು ನಡೆಯುವ ಚುನಾವಣೆಗೆ ಏಳನೇ ವಾಡ್೯ಗೆ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಯಾಗಿ ಬಂಟ್ವಾಳ ಕಬ್ಬಿನ ಹಿತ್ಲು ಶಶಿಕಲಾ ಬಿ. ಬಂಟ್ವಾಳ ಪುರಸಭೆಯ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಬಂಟ್ವಾಳ ಕಾಮತ್ ಲೇನ್ ನ ಕಬ್ಬಿನ ಹಿತ್ಲು ಪ್ರಭಾಕರ್ ಭಂಡಾರಿಯವರ ಪತ್ನಿ ಶಶಿಕಲಾ ಬಿ. ಧರ್ಮಸ್ಥಳ ಸ್ವಸಹಾಯ ಸಂಘದ ಬಂಟ್ವಾಳದ ಸುರಭಿ ತಂಡದ ಅಧ್ಯಕ್ಷೆಯಾಗಿಯೂ ಹಾಗೂ ಬಂಟ್ವಾಳ ಭಂಡಾರಿ ಸಮಾಜ ಸಂಘದ ಮಹಿಳಾ ಘಟಕದ ಅಧ್ಯಕ್ಷೆಯಾಗಿಯೂ ಅಲ್ಲದೇ ಇನ್ನಿತರ ಸಂಘ ಸಂಸ್ಥೆಯ ಮೂಲಕ ಸಮಾಜ ಸೇವೆ ಮಾಡುವ ಮುಖಾಂತರ ತನ್ನನ್ನು ತೊಡಗಿಸಿಕೊಂಡಿದ್ದಾರೆ.
ಬಂಟ್ವಾಳ ಕಸಬಾ ಏಳನೇ ವಾಡ್೯ ಹಿಂದುಳಿದ ಮಹಿಳಾ ವಗ೯ (ಎ) ಮೀಸಲಾತಿ ಕ್ಷೇತ್ರವಾಗಿದೆ. 457 ಪುರುಷರು ಮತ್ತು 461 ಮಹಿಳೆಯರು ಸೇರಿ 918 ಮತದಾರರು ಇಲ್ಲಿದ್ದಾರೆ. ರಾಜಕೀಯ ಮುಖೇನ ಸಾಮಾನ್ಯ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಬಂಟ್ವಾಳವನ್ನು ಮಾದರಿ ನಗರವಾಗಿ ಮಾಡಬೇಕೆನ್ನುವ ಮಹಾ ಹಂಬಲದಿಂದ ಚುನಾವಣೆಗೆ ಸ್ಪಧಿ೯ಸುತ್ತಿದ್ದಾರೆ ಶಶಿಕಲಾ ಬಿ.
ಶಶಿಕಲಾ ಬಿ. ಇವರ ಮೊಬೈಲ್ ಸಂಖ್ಯೆ
9980185836.
-ಭಂಡಾರಿ ವಾರ್ತೆ