November 22, 2024
1

ಬಟಾಣಿ ಕುರ್ಮ- ರುಚಿಕರವಾದ ಬಟಾಣಿ ಕುರ್ಮ ಮಾಡುವ ವಿಧಾನ…

ಬೇಕಾಗುವ ಪದಾರ್ಥಗಳು

  • ಒಣಗಿದ ಬಟಾಣಿ- 2 ಬಟ್ಟಲು (8 ಗಂಟೆಗಳ ಕಾಲ ನೆನೆಸಿದ್ದು)
  • ಉಪ್ಪು- ರುಚಿಗೆ ತಕ್ಕಷ್ಟು
  • ತೆಂಗಿನ ಕಾಯಿ ತುರಿ- 1 ಬಟ್ಟಲು
  • ಗಸಗಸೆ- 1 ಚಮಚ (15 ನಿಮಿಷ ನೀರಿನಲ್ಲಿ ನೆನೆಸಿದ್ದು)
  • ಗೋಡಂಬಿ- ಸ್ವಲ್ಪ (15 ನಿಮಿಷ ನೀರಿನಲ್ಲಿ ನೆನೆಸಿದ್ದು)
  • ಎಣ್ಣೆ – ಸ್ವಲ್ಪ
  • ಚಕ್ಕೆ, ಲವಂಗ- ಸ್ವಲ್ಪ
  • ಕರಿಬೇವು- ಸ್ವಲ್ಪ
  • ಈರುಳ್ಳಿ- 2 ಸಣ್ಣಗೆ ಹೆಚ್ಚಿದ್ದು
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
  • ಹಸಿ ಮೆಣಸಿನ ಕಾಯಿ- 2
  • ಟೊಮೆಟೋ- 3 ಸಣ್ಣಗೆ ಹೆಚ್ಚಿದ್ದು
  • ಅರಿಶಿಣದ ಪುಡಿ- ಕಾಲು ಚಮಚ
  • ಜೀರಿಗೆ ಪುಡಿ- ಕಾಲು ಚಮಚ
  • ಅಚ್ಚ ಖಾರದ ಪುಡಿ- 1 ಚಮಚ
  • ದನಿಯಾ ಪುಡಿ- 1/3 ಚಮಚ
  • ತೆಂಗಿನಕಾಯಿ ಹಾಲು – 1 ಬಟ್ಟಲು
  • ಕೊತ್ತಂಬರಿ ಸೊಪ್ಪ- ಸಣ್ಣಗೆ ಹೆಚ್ಚಿದ್ದು
  • ನಿಂಬೆ ರಸ- ಸವಲ್ಪ
  • ತುಪ್ಪ- ಸ್ವಲ್ಪ
  • ಗರಂ ಮಸಾಲಾ ಪುಡಿ- ಅರ್ಧ ಚಮಚ
  • ಕಾಶ್ಮೀರಿ ಚಿಲ್ಲಿ ಪೌಡರ್- ಅರ್ಧ ಚಮಚ

ಮಾಡುವ ವಿಧಾನ…

  • ಮೊದಲಿಗೆ ನೆನೆಸಿಟ್ಟ ಬಟಾಣಿ, ನೀರು ಹಾಗೂ ಉಪ್ಪನ್ನು ಕುಕ್ಕರ್ ಹಾಕಿ ಬಟಾಣಿ ಮೆತ್ತಗಾಗುವರೆಗೆ ಕೂಗಿಸಿಕೊಂಡು ಪಕ್ಕಕ್ಕಿಡಿ.
  • ಮಿಕ್ಸಿ ಜಾರ್’ಗೆ ತೆಂಗಿನ ಕಾಯಿ ತುರಿ, ಗಸಗಸೆ, ಗೋಡಂಬಿ ಹಾಗೂ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದೇ ರೀತಿ ಮತ್ತೊಂದು ಬಟ್ಟಲು ತೆಂಗಿನ ಕಾಯಿ ತುರಿ ತೆಗೆದುಕೊಂಡು ಮಿಕ್ಸಿ ಜಾರ್’ಗೆ ಹಾಕಿ ಗಟ್ಟಿಯಾಗಿ ರುಬ್ಬಿ ತೆಂಗಿನ ಹಾಲು ತೆಗೆದಿಟ್ಟುಕೊಳ್ಳಿ.
  • ಒಲೆಯ ಮೇಲೆ ಬಾಣಲೆಯಿಟ್ಟು, ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ, ಚಕ್ಕೆ, ಲವಂಗ, ಕರಿಬೇವು, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆಂಪಗೆ ಹುರಿದುಕೊಳ್ಳಿ.
  • ಬಳಿಕ ಹಸಿ ಮೆಣಸಿನ ಕಾಯಿ, ಟೊಮೆಟೋ ಹಾಕಿ ಕೆಂಪಗೆ ಹುರಿದು, ಅರಿಶಿಣದ ಪುಡಿ, ಜೀರಿಗೆ ಪುಡಿ, ಅಚ್ಚ ಖಾರದ ಪುಡಿ, ದನಿಯಾ ಪುಡಿ ಹಾಕಿ 5 ನಿಮಿಷ ಮುಚ್ಚಳ ಮುಚ್ಚಿ ಬೇಯಲು ಬಿಡಿ. ನಂತರ ನಂತರ ಬೇಯಿಸಿಕೊಂಡ ಬಟಾಣೆಯನ್ನು ಇದಕ್ಕೆ ಸೇರಿಸಿ 5 ನಿಮಿಷ ಕುದಿಯಲು ಬಿಡಿ. ಬಳಿಕ ತೆಂಗಿನ ಕಾಯಿ ಹಾಲು, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ನಿಂಬೆ ರಸ ಸೇರಿಸಿ 10 ನಿಮಿಷ ಸಣ್ಣ ಉರಿಯಲಿ ಕುದಿಸಿ.
  • ಪ್ಯಾನ್ ವೊಂದಕ್ಕೆ ಸ್ವಲ್ಪ ತುಪ್ಪ ಹಾಕಿ ಬಿಸಿಯಾದ ಬಳಿಕ ಅದಕ್ಕೆ ಗರಂ ಮಸಾಲಾ ಪುಡಿ ಹಾಗೂ ಕಾಶ್ಮೀರಿ ಚಿಲ್ಲಿ ಪೌಡರ್ ಹಾಕಿ ಕೆಂಪಗೆ ಮಾಡಿಕೊಂಡು ಮಸಾಲೆಗೆ ಹಾಕಿ ಬೆರೆಸಿದರೆ ರುಚಿಕರವಾದ ಬಟಾಣಿ ಕುರ್ಮಾ ಚಪಾತಿಯೊಂದಿಗೆ ಸವಿಯಲು ಸಿದ್ಧ.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ:ಕೆ ಪಿ

Leave a Reply

Your email address will not be published. Required fields are marked *