January 18, 2025
IMG-20180124-WA0002

ಅತ್ತಾವರ ಶ್ರೀ ಗಣೇಶ್ ಭಂಡಾರಿಯವರ ಧರ್ಮಪತ್ನಿ ಶ್ರೀಮತಿ ಬೀನಾ ಗಣೇಶ್ ಭಂಡಾರಿಯವರು ಅಲ್ಪಕಾಲದ ಅಸೌಖ್ಯದಿಂದಾಗಿ ಜನವರಿ 24 ,2018 ರ ಬೆಳಗಿನ ಜಾವ 3:45 ಕ್ಕೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ ಸುಮಾರು 60 ವರ್ಷ ವಯಸ್ಸಾಗಿತ್ತು.

 

ಮೃತರ ಅಂತ್ಯಕ್ರಿಯೆ ಅತ್ತಾವರ ನಂದಿಗುಡ್ಡ ರುದ್ರಭೂಮಿಯಲ್ಲಿ ಜನವರಿ 24 ರ ಬೆಳಗ್ಗೆ 11 ಕ್ಕೆ ನೆರವೇರಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ಮೃತರು ಪತಿ ಶ್ರೀ ಗಣೇಶ್ ಭಂಡಾರಿ,ನಾಲ್ವರು ಹೆಣ್ಣು ಮಕ್ಕಳಾದ ಶ್ರೀಮತಿ ಅಕ್ಷತಾ ಸತ್ಯರಂಜನ್ ಭಂಡಾರಿ ,ಶ್ರೀಮತಿ ಅಂಕಿತಾ ಸತೀಶ್ ಭಂಡಾರಿ, ಶ್ರೀಮತಿ ಅರ್ಪಿತಾ ಲಕ್ಷ್ಮೀಶ್ ಭಂಡಾರಿ , ಅಮೃತ ಹಾಗೂ ಮೊಮ್ಮಕ್ಕಳು, ಒಬ್ಬ ಸಹೋದರ,ಇಬ್ಬರು ಸಹೋದರಿಯರು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

 

ಶ್ರೀಮತಿ ಬೀನಾ ಭಂಡಾರಿಯವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಅವರ ಕುಟುಂಬಸ್ಥರಿಗೆ ನೀಡಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಪ್ರಾರ್ಥಿಸುತ್ತದೆ.

–ಭಂಡಾರಿವಾರ್ತೆ.

1 thought on “ನಿಧನವಾರ್ತೆ

  1. My heart felt condolences on the sad demise of Smt. Beena w/ o Sri Ganesh Bhandary on her sudden and unexpected demise. May her soul attain Sadgathi.

Leave a Reply

Your email address will not be published. Required fields are marked *