January 18, 2025
eye-donation2-inmemorycare

ಬೆಳ್ತಂಗಡಿಯ ಭಂಡಾರಿ ಯುವಕರು ಮಾಡಿರುವ ಸಮಾಜಸೇವಾ ಕಾರ್ಯಕ್ಕೆ ಎಲ್ಲಡೆಯಿಂದಲೂ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದೆ. ಧರ್ಮಸ್ಥಳದ ಸುತ್ತಮುತ್ತಲಿನ ಜನರ ಬಾಯಲ್ಲಿ ಇದೇ ಮಾತುಗಳು ನಲಿದಾಡುತ್ತಿದೆ. ಹಾಗಾದರೆ ಭಂಡಾರಿ ಬಂಧುಗಳು ಮಾಡಿರುವ ಸಾಧನೆಯಾದರೂ ಏನು ಎಂಬ ಪ್ರಶ್ನೆಗಳು ಮೂಡಬಹುದು. ಅಂತಹ ಪ್ರಶ್ನೆಗಳ ಉತ್ತರಕ್ಕಾಗಿ ಈ ಸ್ಟೋರಿಯನ್ನು ಓದಿ….

ನ. 6ರಂದು ಸೋಮವಾರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದವರು ನೇತ್ರದಾನ ಶಿಬಿರವೊಂದನ್ನು ಆಯೋಜಿಸಿದ್ದರು. ಬೆಳ್ತಂಗಡಿಯ ಭಂಡಾರಿ ಯುವವೇದಿಕೆ ಸದಸ್ಯರು, ಧರ್ಮಸ್ಥಳದ ಶ್ರೀಮುಡಿ (ಹರಕೆ ಮಂಡೆ) ಯ ಸಿಬ್ಬಂದಿಗಳು ಹಾಗೂ ಉಜಿರೆ ಬೆಳ್ತಂಗಡಿ ಧರ್ಮಸ್ಥಳದ ಆಸುಪಾಸಿನ ಭಂಡಾರಿ ಬಂಧುಗಳು ಒಟ್ಟಾಗಿ ಸುಮಾರು 72 ಮಂದಿ ಸೇರಿ ಏಕಕಾಲಕ್ಕೆ ನೇತ್ರದಾನಕ್ಕೆ ನೋಂದಾವಣೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹಲವಾರು ಸಂಘಸಂಸ್ಥೆಗಳು ಭಂಡಾರಿ ಯುವಕರ ಈ ಮಾದರಿ ಕಾರ್ಯವನ್ನು ಮೆಚ್ಚಿ ಅವರನ್ನು ಸನ್ಮಾನಿಸಲು ಸಿದ್ಧತೆ ನಡೆಸಿದೆ. ದೇಶದಲ್ಲಿ ಸರಿಸುಮಾರು 7 ಲಕ್ಷದಷ್ಟಿರುವ ಅಂಧರು ಎಲ್ಲರಂತೆ ಜಗತ್ತನ್ನು ನೋಡಲು ಪರಿತಪಿಸುತ್ತಿದ್ದಾರೆ. ಪ್ರತಿದಿನ ಸಾವಿಗೀಡಾಗುವ ಸುಮಾರು 65 ಸಾವಿರ ಮಂದಿ ತಮ್ಮ ಜೀವಿತಾವಧಿಯಲ್ಲಿ ನೇತ್ರದಾನಕ್ಕೆ ನೋಂದಾವಣೆ ಮಾಡಿದ್ದೇ ಆದಲ್ಲಿ ಕೇವಲ ಹತ್ತರಿಂದ ಹನ್ನೊಂದು ದಿನಗಳಲ್ಲಿ ನಮ್ಮ ದೇಶ ಕುರುಡುಮುಕ್ತ ದೇಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದನ್ನು ಮನಗಂಡ ನಮ್ಮ ಭಂಡಾರಿ ಬಂಧುಗಳು ಮಾಡಿರುವ ಈ ಮಹತ್ಕಾರ್ಯ ಸರ್ವತ್ರ ಅಭಿನಂದನೀಯ. ಈ ಕಾರ್ಯದಿಂದಾಗಿ ಸಮಾಜಸೇವಾ ಮನೋಭಾವನೆಯಲ್ಲಿ ಭಂಡಾರಿ ಬಂಧುಗಳು ಯಾವತ್ತೂ ಮುಂಚೂಣಿಯಲ್ಲಿರುತ್ತಾರೆ ಎಂಬುದು ಮತ್ತೊಮ್ಮೆ ಸಾಭೀತಾಗಿದೆ.

ನಮ್ಮ ಭಂಡಾರಿ ಯುವಕರ ಈ ಕಾರ್ಯವನ್ನು ಕೊಂಡಾಡುತ್ತ,ಅವರಿಗೆ ಸಮಾಜಮುಖಿ ಕೆಲಸಗಳನ್ನು ಮಾಡಲು ಭಗವಂತನು ಇನ್ನೂ ಹೆಚ್ಚಿನ ಇಚ್ಛಾಶಕ್ತಿಯನ್ನು ನೀಡಲಿ ಎಂದು ಭಂಡಾರಿವಾರ್ತೆ ಪ್ರಾರ್ಥಿಸುತ್ತದೆ. ಇದೇ ರೀತಿಯ ಸೇವಾ ಮನೋಭಾವದಿಂದ ಮುನ್ನೆಡೆಯುವ ನಿಮ್ಮ ಬೆಂಬಲಕ್ಕೆ ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಸದಾ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದು ತಿಳಿಸಲು ಹರ್ಷವೆನಿಸುತ್ತದೆ.

ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ

1 thought on “ಅಂಧರ ಬಾಳಿಗೆ ಬೆಳಕನೀಯಲಿ ಬೆಳ್ತಂಗಡಿ ಭಂಡಾರಿ ಬಂಧುಗಳ ನೇತ್ರದಾನ ನೋಂದಣಿ

  1. Dear all Bhandaries of “BELTHANGADI” and around ,
    Lots of regards and respects to each one of you. Thoughts and actions similar is of great moral boost to the entire BHANDARY SAMAJA.
    Credits of similar in nature, could rise sprit of the entire SAMAJA in overcoming the inferiority if any still around. Thank you all “BHANDUS” , NAMASKARA.

Leave a Reply

Your email address will not be published. Required fields are marked *