ಭಂಡಾರಿ ಸಮಾಜ ಸಂಘ (ರಿ) ಬೆಳ್ತಂಗಡಿ ಇದರ ವಾರ್ಷಿಕೋತ್ಸವ ಮತ್ತು ಶ್ರೀ ಸತ್ಯನಾರಾಯಣ ಪೂಜೆ ದಿನಾಂಕ 20/04/2021ನೇ ಮಂಗಳವಾರ ಪಣೆಜಾಲು ಭಂಡಾರಿ ಸಮಾಜ ಸಂಘದ ಆವರಣದಲ್ಲಿ ಜರಗಿತು.
ಬೆಳಿಗ್ಗೆ 10.30 ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ನಡೆಸಲಾಯಿತು, ನಂತರ ನಡೆದ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮವು ಮಾ/ ಮನ್ವಿತ್ ಭಂಡಾರಿ ಇವರ ಪ್ರಾರ್ಥನೆಯೊಂದಿಗೆ ಆರಂಭವಾಯಿತ್ತು, ವೇದಿಕೆಯಲ್ಲಿದ್ದ ಅತಿಥಿಗಳನ್ನು ಸಂಘದ ಅಧ್ಯಕ್ಷರಾದ ಶ್ರೀ ಎ. ಪೂವಪ್ಪ ಭಂಡಾರಿ ಪಣೆಜಾಲು, ಸ್ವಾಗತಿಸುವುದರೊಂದಿಗೆ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಸಂಘದ ಕಾರ್ಯದರ್ಶಿ ಶ್ರೀ ಅಶೋಕ್ ಭಂಡಾರಿ, ಗುಂಡಿಯಲ್ಕೆ ವಾರ್ಷಿಕ ವರದಿ ವಾಚಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಂಟ್ವಾಳ ತಾಲ್ಲೂಕು ಭಂಡಾರಿ ಸಮಾಜದ ಸಂಘದ ಅಧ್ಯಕ್ಷರಾದ ಶ್ರೀ ಗೋಪಾಲ್ ಭಂಡಾರಿ ಪುಣ್ಕೆದಡಿ, ತಾಲ್ಲೂಕು ಸಮಾಜ ಸಂಘದ ಸಂಘಟನೆಯನ್ನು ಪ್ರಸಂಶಿಸಿದರು. ಸವಿತಾ ಸಮಾಜ ಬೆಳ್ತಂಗಡಿ ತಾಲೂಕು ಇದರ ಅಧ್ಯಕ್ಷರಾದ ಶ್ರೀ ಗೋಪಾಲ್ ಭಂಡಾರಿ ಪರಾರಿ, ಇವರು ಮಾತನಾಡಿ ಸವಿತಾ ಸಮಾಜ ಮತ್ತು ಭಂಡಾರಿ ಸಮಾಜ ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎರಡೂ ಒಟ್ಟೊಟ್ಟಿಗೆ ಬೆಳೆಯುತ್ತಿರುವ ಅದ್ಬುತ ಸಂಘಟನೆ ಎಂದು ಹೇಳಿದರು. ನಂತರ ಬೆಳ್ತಂಗಡಿ ತಾಲ್ಲೂಕಿನ ಭಂಡಾರಿ ಸಮಾಜದಿಂದ ಗ್ರಾಮ ಪಂಚಾಯಿತಿ, ವಿವಿಧ ಸಂಘ ಸಂಸ್ಥೆಗಳಿಗೆ ಆಯ್ಕೆಗೊಂಡ ಚುನಾಯಿತ ಪ್ರತಿನಿಧಿಗಳನ್ನು ಗೌರವಿಸಲಾಯಿತು.
ನಂತರ ಮುಂದಿನ ಅವಧಿಗೆ ಬೆಳ್ತಂಗಡಿ ತಾಲ್ಲೂಕು ಭಂಡಾರಿ ಸಮಾಜ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶ್ರೀ ಉಮೇಶ್ ಭಂಡಾರಿ ಉಜಿರೆ, ಕಾರ್ಯದರ್ಶಿಯಾಗಿ ಶ್ರೀ ಗಂಗಾಧರ ಭಂಡಾರಿ ಕಾಯರ್ತಡ್ಕ, ಉಪಾಧ್ಯಕ್ಷರಾಗಿ ಶ್ರೀ ಜಿ. ಬಾಲಕೃಷ್ಣ ಕೋಡ್ಯೇಲು- ಮಡಂತ್ಯಾರು, ಕೋಶಾಧಿಕಾರಿಯಾಗಿ ಶ್ರೀ ಸದಾಶಿವ ಭಂಡಾರಿ ಪಡ್ತ್ರೆ – ವೇಣೂರು, ಜೊತೆ ಕಾರ್ಯದರ್ಶಿಯಾಗಿ, ಶ್ರೀ ನಾರಾಯಣ ಭಂಡಾರಿ, ಕುಂಡದಬೆಟ್ಟು ಇವರುಗಳು ಅವಿರೋಧವಾಗಿ ಆಯ್ಕೆಗೊಂಡರು. ನಂತರ ವಾರ್ಷಿಕ ಕಾರ್ಯಕ್ರಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಸಹಕರಿಸಿದ ಬಂಧುಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಬೆಳ್ತಂಗಡಿ ತಾಲ್ಲೂಕು ಯುವ ವೇದಿಕೆ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ಭಂಡಾರಿ ಉಜಿರೆ, ಇವರು ಧನ್ಯವಾದಗೈದರು, ಕಾರ್ಯಕ್ರಮವನ್ನು ಶ್ರೀ ನಾರಾಯಣ ಭಂಡಾರಿ ಕುಂಡದಬೆಟ್ಟು ಇವರು ನಿರೂಪಿಸಿದರು.