
ಆಟೋಟ ಸ್ಪರ್ಧೆಯ ನಂತರ ಭೋಜನ ವಿರಾಮವನ್ನು ನೀಡಲಾಯಿತು.ಈ ಬಾರಿಯ ಭೋಜನ ವಿಶೇಷವಾಗಿ ಮಲೆನಾಡಿಗರ ಮನೆಯಂಗಳದ ತಿನಿಸುಗಳಿಂದ ತುಂಬಿತ್ತು.ಹೋಳಿಗೆ,ಪಾಯಸ,ಜೋಳದ ರೊಟ್ಟಿ,ಸೊಪ್ಪಿನ ಪಲ್ಯ,ಘೀ ರೈಸ್,ಕುರ್ಮಾ,ಮಜ್ಜಿಗೆ,ಬಾಳೆ ಹಣ್ಣು ಹೀಗೆ ಹಲವಾರು ವಿಶೇಷತೆಗಳಿಂದ ಕೂಡಿತ್ತು.ಆಟವಾಡಿ ದಣಿದಿದ್ದ ಭಂಡಾರಿ ಬಂಧುಗಳು,ಮಹಿಳೆಯರು,ಮಕ್ಕಳು ಮಲೆನಾಡಿನ ವಿಶೇಷ ಖಾದ್ಯಗಳನ್ನು ಸವಿದು,ಮಲೆನಾಡಿಗರ ಆತಿಥ್ಯವನ್ನು ಸ್ವೀಕರಿಸಿ ಸಂತೃಪ್ತಿ ಪಟ್ಟರು.




ಭೋಜನಾ ನಂತರ ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಸಂಸ್ಥಾಪಕ,ಪೋಷಕ ಹಾಗೂ ಮಾಜಿ ಅಧ್ಯಕ್ಷರುಗಳ ಸಭಾ ಪರಿಚಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಕಳ ಶ್ರೀ ಶೇಖರ ಭಂಡಾರಿ, ಶ್ರೀ ಸುಧಾಕರ್ ಬನ್ನಂಜೆ ಮತ್ತು ಶ್ರೀ ಲಕ್ಷ್ಮಣ ಕರಾವಳಿಯವರನ್ನು ವೇದಿಕೆಗೆ ಆಹ್ವಾನಿಸಿ,ಸಭೆಗೆ ಪರಿಚಯಿಸಿ,ಪುಷ್ಪಗುಚ್ಛ ನೀಡಿ ಗೌರವ ಸಮರ್ಪಣೆ ಮಾಡಲಾಯಿತು.ಶ್ರೀ ಸುಧಾಕರ್ ಬನ್ನಂಜೆಯವರು ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಹುಟ್ಟು,ಅಭಿವೃದ್ಧಿ,ಉನ್ನತಿ,ಇತಿಹಾ ಸದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಮ್ಮ ಭಾಷಣದ ಮೂಲಕ ಸಭೆಗೆ ನೀಡಿದರು.ನಂತರ ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಎಲ್ಲ ಘಟಕಗಳ ಅಧ್ಯಕ್ಷರುಗಳನ್ನು ವೇದಿಕೆಯ ಮೇಲೆ ಪರಿಚಯಿಸಿ ಅವರಿಗೆ ಗೌರವ ಸಮರ್ಪಣೆ ನೀಡಲಾಯಿತು. ಭಂಡಾರಿ ಸಮಾಜ ಸಂಘ ತೀರ್ಥಹಳ್ಳಿ ಘಟಕದ ಅಧ್ಯಕ್ಷರಾದ ಶ್ರೀ ಮಂಜುನಾಥ ಭಂಡಾರಿ,ಕೊಪ್ಪ ಘಟಕದ ಅಧ್ಯಕ್ಷರಾದ ಶ್ರೀ ನಾಗರಾಜ್ ಭಂಡಾರಿ,ಕಳಸ ಘಟಕದ ಅಧ್ಯಕ್ಷರಾದ ಶ್ರೀ ಸುರೇಶ್ ಭಂಡಾರಿ,ಮೂಡಿಗೆರೆ ಘಟಕದ ಅಧ್ಯಕ್ಷರಾದ ಶ್ರೀ ಷಣ್ಮುಖಾನಂದ ಭಂಡಾರಿ,ಸಾಗರ ಘಟಕದ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಭಂಡಾರಿ,ಹೊಸನಗರ ಘಟಕದ ಅಧ್ಯಕ್ಷರಾದ ಶ್ರೀ ಮಂಜಪ್ಪ ಭಂಡಾರಿ,ಬಾಳೆಹೊನ್ನೂರು ಘಟಕದ ಅಧ್ಯಕ್ಷರಾದ ಶ್ರೀ ಸುನೀಲ್ ರಾಜ್ ಭಂಡಾರಿ, ರಿಪ್ಪನ್ ಪೇಟೆ ಘಟಕದ ಶ್ರೀ ಆರ್.ಟಿ.ಗೋಪಾಲ್ ಭಂಡಾರಿ,ಶೃಂಗೇರಿ ಘಟಕದ ಶ್ರೀ ದಿವಾಕರ ಭಂಡಾರಿ,ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಉಪಾಧ್ಯಕ್ಷರಾದ ಶ್ರೀ ಪ್ರಸಾದ್ ಭಂಡಾರಿ ಮುನಿಯಾಲು,ಶ್ರೀ ಮೋಹನ್ ಭಂಡಾರಿ ಬಾಳೇಹೊನ್ನೂರು, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಪಲಿಮಾರ್,ಪ್ರಕಾಶ್ ಕುತ್ತೆತ್ತೂರು,ಬಾಳೆಹೊನ್ನೂರು ಭಂಡಾರಿ ಸಮಾಜ ಸಂಘದ ಹಿರಿಯರಾದ ಶ್ರೀ ಹಿರಿಯಣ್ಣ ಭಂಡಾರಿ,ಭಂಡಾರಿವಾರ್ತೆಯ CEO ಶ್ರೀ ಪ್ರಕಾಶ್ ಭಂಡಾರಿ ಕಟ್ಲ,ಸಾಗರ ಸವಿತಾ ಸಮಾಜದ ಅಧ್ಯಕ್ಷರಾದ ಶ್ರೀ ರಾಮಣ್ಣನವರು,ಶಿರಾಳಕೊಪ್ಪ ಸವಿತಾ ಸಮಾಜದ ಅಧ್ಯಕ್ಷರಾದ ಶ್ರೀ ಮೋಹನ್ ಕುಮಾರ್ ಮುಂತಾದವರನ್ನು ವೇದಿಕೆಗೆ ಆಹ್ವಾನಿಸಿ ಪುಷ್ಪಗುಚ್ಛ ನೀಡುವುದರೊಂದಿಗೆ ಗೌರವ ಸಮರ್ಪಣೆ ಮಾಡಲಾಯಿತು.


ವಾರ್ಷಿಕ ಮಹಾಸಭೆ ಮತ್ತು ಕೌಟುಂಬಿಕ ಸ್ನೇಹಕೂಟದ ಯಶಸ್ಸಿಗೆ ಪರಿಶ್ರಮಿಸಿದ ಸೊರಬ-ಶಿರಾಳಕೊಪ್ಪ ಘಟಕದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರನ್ನು ವೇದಿಕೆಗೆ ಆಹ್ವಾನಿಸಿ ಗೌರವ ಸಮರ್ಪಿಸಲಾಯಿತು.

ಬಂಟ್ವಾಳ ಸಮಾಜದ ಬಂಧುಗಳಾದ ಶ್ರೀ ಹೇಮಚಂದ್ರ ಕೈರಂಗಳ,ಶ್ರೀ ಜಯರಾಮ ರಾಯಿ,ಶ್ರೀ ರಮೇಶ್ ಬಂಟ್ವಾಳ,ಶ್ರೀ ಚಂದ್ರಶೇಖರ ಮಾಧ್ವ,ಶ್ರೀ ಕೇಶವ ಬಂಟ್ವಾಳ ರವರನ್ನು ವೇದಿಕೆಗೆ ಆಹ್ವಾನಿಸಲಾಯಿತು, ಅವರನ್ನು ವಲಯದ ಕಾರ್ಯದರ್ಶಿಗಳಾದ ಸುಧಾಕರ ಭಂಡಾರಿಯವರು ಸಭೆಗೆ ಪರಿಚಯಿಸಿದರು.ಅವರನ್ನು ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಪರವಾಗಿ ಪುಷ್ಪಗುಚ್ಛ ನೀಡುವುದರೊಂದಿಗೆ ಗೌರವ ಸಮರ್ಪಣೆ ಮಾಡಲಾಯಿತು. ಹತ್ತನೇ ತರಗತಿಯ ನಂತರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರತಿಭೆ ಪುರಸ್ಕಾರ ನೀಡಲಾಯಿತು.







ಭಂಡಾರಿ ಸಮಾಜ ಸಂಘ, ಸೊರಬ-ಶಿರಾಳಕೊಪ್ಪ ಘಟಕದ ಅಧ್ಯಕ್ಷರಾದ ಶ್ರೀ ಜೋಗು ಭಂಡಾರಿಯವರು…“ಅಲ್ಲಮ ಪ್ರಭುಗಳು,ಮೊದಲ ಮಹಿಳಾ ವಚನಕಾರ್ತಿ ಅಕ್ಕ ಮಹಾದೇವಿ,ಶಿವಶರಣೆ ಸತ್ಯಕ್ಕ,ಭಕ್ತ ಸಿರಿಯಾಳ,ಹೊಯ್ಸಳ ವಂಶದ ನಾಟ್ಯರಾಣಿ ಶಾಂತಲೆಯ ತವರೂರು ಹೀಗೆ ಇತಿಹಾಸ ಪ್ರಸಿದ್ಧ ಊರಾದ ಶಿರಾಳಕೊಪ್ಪಕ್ಕೆ ಭಂಡಾರಿ ಸಮಾಜದ ಸಮಸ್ತ ಬಂಧುಗಳಿಗೆ ಹೃತ್ಪೂರ್ವಕ ಸ್ವಾಗತವನ್ನು ಬಯಸುತ್ತೇನೆ.ಅರ್ಧ ಶತಮಾನದ ಕೆಳಗೆ ಉದರ ಪೋಷಣೆಗಾಗಿ ದಕ್ಷಿಣ ಕನ್ನಡದ ಕುಗ್ರಾಮಗಳಿಂದ ಇಲ್ಲಿಗೆ ವಲಸೆ ಬಂದು ನೆಲಸಿದ ಕೆಲವೇ ಕೆಲವು ಭಂಡಾರಿ ಕುಟುಂಬಗಳು ಇಂದು ಶೈಕ್ಷಣಿಕವಾಗಿ,ಸಾಮಾಜಿಕವಾಗಿ, ಆರ್ಥಿ ಕವಾಗಿ ಸದೃಢರಾಗಿ ನೆಲೆನಿಂತಿರುವುದನ್ನು ನೋಡಲು ಹೆಮ್ಮೆಯೆನಿಸುತ್ತದೆ.ನಮ್ಮ ಸೊರಬ-ಶಿರಾಳಕೊಪ್ಪ ಘಟಕದ ಮೇಲೆ ನಂಬಿಕೆಯಿಟ್ಟು ಈ ಸಾಲಿನ ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆಯ ಆತಿಥ್ಯ ವಹಿಸುವ ಜವಾಬ್ದಾರಿಯನ್ನು ನೀಡಿದ ವಲಯದ ಅಧ್ಯಕ್ಷರು,ಸದಸ್ಯರು ಮತ್ತು ಸಮಾಜದ ಮುಖಂಡರಿಗೆ ಹೃದಯಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸಬಯಸುತ್ತೇನೆ”…ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.
(ಮುಂದುವರಿಯುವುದು…)
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.