
ಕಾರ್ಕಳದ ಬೆಟ್ಟದ ಮನೆ ಶ್ರೀ ಶಶಿಧರ ಭಂಡಾರಿ ಮತ್ತು ಶ್ರೀಮತಿ ಶ್ರೀನಿಧಿ ಶಶಿಧರ್ ಭಂಡಾರಿ ದಂಪತಿಯು ತಮ್ಮ ಪುತ್ರಿ

ಸಂಸ್ಕೃತಿ
ಯ ಮೊದಲ ಹುಟ್ಟು ಹಬ್ಬವನ್ನು ಜನವರಿ 9,2019 ರ ಬುಧವಾರ ಸಡಗರ ಸಂಭ್ರಮದಿಂದ ಆಚರಿಸಿದರು.
ಸಾಂಪ್ರದಾಯಿಕವಾಗಿ ಮನೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ ದಂಪತಿಯು ಜನವರಿ 13,2019 ರ ಭಾನುವಾರ ಕಾರ್ಕಳದ ಚೇತನಾ ವಿಶೇಷ ಮಕ್ಕಳ ಶಾಲೆಯಲ್ಲಿ ವಿಶೇಷಚೇತನ ಮಕ್ಕಳೊಂದಿಗೆ ಹುಟ್ಟು ಹಬ್ಬವನ್ನು ಆಚರಿಸಿ ಆದರ್ಶ ಮೆರೆದರು.





ಹುಟ್ಟುಹಬ್ಬದ ಸಂಭ್ರಮದಲ್ಲಿರುವ “ಸಂಸ್ಕೃತಿ” ಗೆ ತಂದೆ,ತಾಯಿ,ಅಜ್ಜ, ಅಜ್ಜಿ ಮತ್ತು ಕುಟುಂಬಸ್ಥರು,ಆತ್ಮೀಯರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.
ಜನ್ಮದಿನದ ಸಡಗರದಲ್ಲಿರುವ “ಸಂಸ್ಕೃತಿ” ಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನು ಕರುಣಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”