January 18, 2025
Belthangady 4

ಭಂಡಾರಿ ಸಮಾಜ ಸಂಘ ಬೆಳ್ತಂಗಡಿ ವಲಯ ಮತ್ತು ಭಂಡಾರಿ ಯುವ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ಭಂಡಾರಿ ಬಂಧುಗಳ ಬೃಹತ್ ಸಮಾವೇಶ ಮತ್ತು ಎಂಟನೇ ವರ್ಷದ ಸತ್ಯನಾರಾಯಣ ಪೂಜೆಯು ಬೆಳ್ತಂಗಡಿಯ ಕುವೆಟ್ಟು ಗ್ರಾಮದ ಪಣೆಜಾಲುವಿನಲ್ಲಿರುವ ಸಮಾಜ ಸಂಘದ ಆವರಣದಲ್ಲಿ ಮೇ 22 ರಂದು ಜರಗಿತು .

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿಯ ನೂತನ ಶಾಸಕರಾದ ಹರೀಶ್ ಪೂಂಜಾ , ಭಂಡಾರಿ ಸಮಾಜ ಸಂಘ ಬಂಟ್ವಾಳ ವಲಯದ ಅಧ್ಯಕ್ಷ ಶ್ರೀಯುತ ದಿವಾಕರ ಭಂಡಾರಿ ಶಂಭೂರು , ಭಂಡಾರಿ ಯುವ ವೇದಿಕೆ ಬೆಳ್ತಂಗಡಿಯ ಅಧ್ಯಕ್ಷ ಪ್ರವೀಣ್ ಭಂಡಾರಿ “ಜನನಿ”, ಗೌರವಾಧ್ಯಕ್ಷ ದಿವಾಕರ್ ಭಂಡಾರಿ ನಾರಾವಿ , ಡೈಜಿವರ್ಲ್ಡ್ ನ್ಯೂಸ್ ಚಾನೆಲ್ ಮಂಗಳೂರು ಇದರ ಉದ್ಯೋಗಿ ದಿವ್ಯಾ ವಿ ,ಭಂಡಾರಿ ಉಜಿರೆ ಉಪಸ್ಥಿತರಿದ್ದರು .

ಭಂಡಾರಿ ಸಮಾಜ ಬಂಧುಗಳ ಗೌರವ ಸ್ವೀಕರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ , ಭಂಡಾರಿ ಸಮಾಜದ ಕಟ್ಟಡಕ್ಕಾಗಿ ತನ್ನ ಶಾಸಕ ನಿಧಿಯಿಂದ ಮಾತ್ರವಲ್ಲದೆ , ಸ್ವಂತ ದೇಣಿಗೆಯನ್ನೂ ನೀಡಿ ಸಹಕರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎನ್ನುವ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಎ. ಪೂವಪ್ಪ ಭಂಡಾರಿ , ಮುಂದಿನ ದಿನಗಳಲ್ಲಿ ಸಂಘವು ಏರ್ಪಡಿಸುವ ಇಂತಹ ಕಾರ್ಯಕ್ರಮಗಳಿಗೆ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಲಿ ಹಾಗೂ ಯುವಕರ ನೇತೃತ್ವ ದಲ್ಲಿ ಇನ್ನಷ್ಟು ಹೆಚ್ಚಿನ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು .

ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿ ಅತೀ ಹೆಚ್ಚಿನ ಅಂಕ ಪಡೆದಿರುವ ಭಂಡಾರಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು . ಆರ್ಥಿಕವಾಗಿ ಹಿಂದುಳಿದಿರುವ ತಾಲೂಕಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು .

ಬಳಿಕ ನಡೆದ ಸಂದೀಪ್ ಭಂಡಾರಿ ಬೆಳ್ತಂಗಡಿ ಮತ್ತು ಸತೀಶ್ ನಾಳ ಬಳಗದವರ ರಸಮಂಜರಿ ಹಾಗೂ ಸಮಾಜದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ಜನಮೆಚ್ಚುಗೆ ಪಡೆಯಿತು .

ವರದಿ: ಪುನೀತ್ ಭಂಡಾರಿ ಉಜಿರೆ

Leave a Reply

Your email address will not be published. Required fields are marked *