January 18, 2025
barbar 2

 

ಅತಿಯಾದ ಗೌರವದ ಹಾನಿ….

ಹಿಂದಿನ ಕಾಲದಲ್ಲಿ ಒಬ್ಬ ರಾಜನ ಮನೆಗೆ ಭಂಡಾರಿ ಹೋಗುತ್ತಾನೆ. ಕಾರಣ, ರಾಜ “ಭಂಡಾರಿ ಯವರನ್ನು ಕರೆತರಲು ಮಂತ್ರಿಗೆ ಹೇಳಿರುತ್ತಾನೆ. ಅದರಂತೆ ಭಂಡಾರಿ ಅಲ್ಲಿಗೆ ಹೋಗುವನು. ರಾಜನ ಕೇಶ ಶೃಂಗಾರವನ್ನು ಅಂದವಾಗಿ ಭಂಡಾರಿ ಮಾಡುತ್ತಾರೆ .

ಅಲ್ಲಿಂದ ಹೋಗಲು ಭಂಡಾರಿ ಅಣಿಯಾಗುತ್ತಾನೆ . ಅಷ್ಟರಲ್ಲಿ ರಾಜ ಮಂತ್ರಿ ಗಳಿಗೆ ಹೇಳುತ್ತಾರೆ. ಮಂತ್ರಿಗಳೇ ಭಂಡಾರಿ ಯವರು ನನಗೆ ಅತ್ಯಂತ ಸುಂದರವಾಗಿ ಕೇಶ ಶೃಂಗಾರ ಮಾಡಿದ್ದಾರೆ. ನಾನೀಗ ಪ್ರಸನ್ನನಾಗಿರುವೆ ಹೊರಗೆ ಆ ಆಸನದಲ್ಲಿ ಕುಳಿತಿರುವ ವ್ಯಕ್ತಿಗೆ ಬಂಗಾರದ ತಟ್ಟೆಯಲ್ಲಿ  ಬಂಗಾರ ನೀಡು ಎಂದು ಆದೇಶ ಮಾಡುತ್ತಾನೆ .
ಅದರಂತೆಯೇ ಮಂತ್ರಿ ಬಂಗಾರದ ತರುವಷ್ಟರಲ್ಲಿ ಒಬ್ಬ ಬ್ರಾಹ್ಮಣ ಅಲ್ಲಿ ಗೆ ಬರುತ್ತಾನೆ. ಭಂಡಾರಿ ಆ ಬ್ರಾಹ್ಮಣ ನಿಗೆ ಬಾರಿ ಗೌರವದಿಂದ ಎದ್ದು ನಿಂತು ಆ ಆಸನ ಬಿಟ್ಟು ಕೊಟ್ಟಿರುತ್ತಾನೆ.

ಮಂತ್ರಿ ಆ ಆಸನದಲ್ಲಿದ್ದ ಬ್ರಾಹ್ಮಣ ನಿಗೆ ಚಿನ್ನವನ್ನು ನೀಡುತ್ತಾನೆ. ಚಿನ್ನವನ್ನು ಸ್ವೀಕರಿಸಿದ ಬ್ರಾಹ್ಮಣ ಅಲ್ಲಿಂದ ಪರಾರಿಯಾಗುತ್ತಾನೆ‌. ಎದ್ದು ನಿಂತಿದ್ದ ಭಂಡಾರಿ ಬರಿಗೈಯಲ್ಲಿ ಮನೆಗೆ ಬರುವನು.

✍️ : ಮಹೇಂದ್ರ ಕುಮಾರ್ ಫಲ್ಗುಣಿ.

 

Leave a Reply

Your email address will not be published. Required fields are marked *