
ಮಕ್ಕಳ ದಿನಾಚರಣೆಯ ಅಂಗವಾಗಿ ಭಂಡಾರಿ ಕುಟುಂಬದ ಮಕ್ಕಳಲ್ಲಡಗಿರುವ ಸುಪ್ತ ಪ್ರತಿಭೆಗಳ ಅನಾವರಣಕ್ಕಾಗಿ ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ಭಂಡಾರಿ ಚಿತ್ತಾರದ ಅಂತಿಮ ಹಂತದ ಪರದೆ ಎಳೆಯುವ ಕ್ಷಣ ಬಂದಿದೆ.ಸ್ಪರ್ಧಿಗಳು ಹಾಗೂ ಪೋಷಕರು ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಆ ಕ್ಷಣ ಇದೀಗ ಬಂದಿದೆ.ನಮ್ಮ ತೀರ್ಪುಗಾರರು ತುಂಬಾ ಸೂಕ್ಷ್ಮವಾಗಿ ಅವಲೋಕಿಸಿ ಈ ಕೆಳಗಿನ ಫಲಿತಾಂಶ ನೀಡಿದ್ದಾರೆ.
ಕಿಡ್ಸ್ ವಿಭಾಗ
1. ನಿಶ್ಚಿತ್.ಎಸ್.
(ಶ್ರೀ ಸಂತೋಷ್ ಭಂಡಾರಿ ಮತ್ತು ಶ್ರೀಮತಿ ದಿವ್ಯಾ ಸಂತೋಷ್ ಭಂಡಾರಿ. ಕೊಡಂಕೂರು .ಉಡುಪಿ.)
2. ಪರಿಧಿ ಭಂಡಾರಿ.
(ಶ್ರೀ ಅಜಿತ್ ಅಮ್ಮೆಂಬಳ ಮತ್ತು ಶ್ರೀಮತಿ ಸೌಮ್ಯ ಭಂಡಾರಿ.ಮಂಗಳೂರು.)
3. ಸಾಂಜ್ ನಮಿತ್ ಕಾಂಬ್ಲಿ.
(ಶ್ರೀ ನಮಿತ್ ವಿನೋದ್ ಕಾಂಬ್ಲಿ ಮತ್ತು ಶ್ರೀಮತಿ ಸ್ಮಿತಾ ನಮಿತ್ ಕಾಂಬ್ಲಿ.ಮುಂಬಯಿ.)

ಜೂನಿಯರ್ ವಿಭಾಗ.
1. ದೃವ್ ಭಂಡಾರಿ.
(ಶ್ರೀ ಶಶಿಧರ್ ಭಂಡಾರಿ ಮತ್ತು ಶ್ರೀಮತಿ ಸಂಗೀತ ಶಶಿಧರ್ ಭಂಡಾರಿ. ಮುಂಬಯಿ.)
2. ಅರ್ಜುನ್ ನಾರಾಯಣ್.
(ಶ್ರೀ ಅಶ್ವಥ್ ನಾರಾಯಣ್ ಮತ್ತು ಶ್ರೀಮತಿ ಜೋತ್ಸ್ನಾ. ಕುಳಾಯಿ .ಸುರತ್ಕಲ್.)
3. ಕೌಶಿಕ್ ಮರೋಳಿ.
(ಶ್ರೀ ಹರಿಣಾಕ್ಷ್ ಭಂಡಾರಿ ಮತ್ತು ಶ್ರೀಮತಿ ಕುಮುದಾವತಿ ಹರಿಣಾಕ್ಷ್ ಭಂಡಾರಿ.ಮರೋಳಿ.)

ಸೀನಿಯರ್ ವಿಭಾಗ
1. ಶ್ರೀನಿಧಿ.ಎಮ್.
(ಶ್ರೀ.ಮೋಹನ್.ಬಿ.ಕೆ.ಮತ್ತು ಶ್ರೀಮತಿ ರಾಜಶ್ರೀ ಮೋಹನ್.ಕೆ.ಆರ್.ಪುರಂ.ಬೆಂಗಳೂರು.)
2. ಪ್ರಣತಿ.ಆರ್.
(ಶ್ರೀ ರಾಜಶೇಖರ್ ಭಂಡಾರಿ ಮತ್ತು ಶ್ರೀಮತಿ ಅಮಿತಾ ರಾಜಶೇಖರ್ ಭಂಡಾರಿ. ಬೆಂಗಳೂರು.)
3. ದರ್ಶನ್.ಪಿ.ಭಂಡಾರಿ.
(ಶ್ರೀಮತಿ ಪವಿತ್ರಾ ಭಂಡಾರಿ. ವಿ.ಎಮ್.ನಗರ. ಕರಂಬಳ್ಳಿ.)

ವಿಜೇತರಿಗೆಲ್ಲಾ ಅಭಿನಂದನೆಗಳು.
ಅದಕ್ಕಿಂತಲೂ ಹೆಚ್ಚಾಗಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಮತ್ತು ಅವರನ್ನು ಹುರಿದುಂಭಿಸಿದ ಪೋಷಕರಿಗೆ ಅಭಿನಂದನೆಗಳನ್ನು ಸಲ್ಲಿಸಬಯಸುತ್ತೇವೆ. ಯಾವುದೇ ಸ್ಪರ್ಧೆಗಳು ನೆಡೆದಾಗಲೂ ಅಲ್ಲಿ ಪ್ರಾಯೋಜಕರ ಪಾತ್ರ ಹಿರಿದಾಗಿರುತ್ತದೆ.ಅದೇ ರೀತಿ ಭಂಡಾರಿ ಚಿತ್ತಾರ ಸ್ಪರ್ಧೆಗೂ ನಮ್ಮೊಂದಿಗೆ ಕೈಜೋಡಿಸಿದ ಶ್ರೀ ಬಾಲಕೃಷ್ಣ ಭಂಡಾರಿ ಪುತ್ತೂರು.ಕ್ಯಾಬಿನೆಟ್ ಸಂಸ್ಥೆ. ಪೂನಾ.ಮತ್ತು ಶ್ರೀ ಅರುಣ್ ಭಂಡಾರಿ. ಬಿಲ್ಡರ್ಸ್ ಮತ್ತು ಡೆವಲಪರ್ಸ್.ಬಜ್ಪೆ.ಮಂಗಳೂರು ಇವರ ಸಹಕಾರವನ್ನು ನಾವು ಎಂದಿಗೂ ಮರೆಯುವುದಿಲ್ಲ.ಇವರು ನಮ್ಮ ಖಾಯಂ ಪ್ರಾಯೋಜಕರಾಗಿ ನಮ್ಮೊಂದಿಗಿರುವ ಭರವಸೆ ನೀಡಿದ್ದಾರೆ. ಅವರಿಗೆ ನಾವು ಅಭಾರಿಯಾಗಿದ್ದೇವೆ.


ತೀರ್ಪುಗಾರರಾಗಿ ತಮ್ಮ ಸಹಕಾರ ನೀಡಿದ ಮಂಗಳೂರಿನ ಚಿತ್ರಕಲಾವಿದರಾದ ರತನ್ (ರೂಬಿ)ಯವರನ್ನು ನಾವು ಈ ಸಮಯದಲ್ಲಿ ಹೃದಯಪೂರ್ವಕವಾಗಿ ಅಭಿನಂದಿಸಬಯಸುತ್ತೇವೆ. ನಮ್ಮ ಈ ಪ್ರಯತ್ನದಲ್ಲಿ ನಮ್ಮೊಂದಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಮನಃಪೂರ್ವಕ ಅಭಿನಂದನೆಗಳು.
ಭಂಡಾರಿ ಕುಟುಂಬದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ಹಲವಾರು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಯ ಮೂಲ ಉದ್ದೇಶ.ನಮ್ಮ ಮುಂದಿನ ಹಲವಾರು ಪ್ರಯತ್ನಗಳಿಗೆ ನಿಮ್ಮ ಸಹಕಾರ ಹೀಗೆ ಇರಲಿ ಎಂದು ಆಶಿಸುತ್ತೇವೆ.
ಧನ್ಯವಾದಗಳು….
ಶ್ರೀ ಪ್ರಕಾಶ್ ಭಂಡಾರಿ ಕಟ್ಲಾ.
ಮುಖ್ಯ ಕಾರ್ಯನಿರ್ವಾಹಕರು ಮತ್ತು ಅಧ್ಯಕ್ಷರು, ಭಂಡಾರಿವಾರ್ತೆ.