ನಿಶ್ಚಿತ್ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಶ್ರೀ ದಿವಾಕರ್.ಎನ್.ಕಥೆ,ಸಾಹಿತ್ಯ ಬರೆದು ನಿರ್ಮಿಸಿರುವ ಶ್ರೀ ಸುಧಾಕರ್ ಬನ್ನಂಜೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ “ರಣರಣಕ” ಕನ್ನಡ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭ ಜುಲೈ 29 ರ ಭಾನುವಾರ ಸಂಜೆ 6 ಗಂಟೆಗೆ ಬೆಂಗಳೂರು ರಾಜಗೋಪಾಲ ನಗರದ ಬಿಬಿಎಂಪಿ ಆಟದ ಮೈದಾನದಲ್ಲಿ ನೆರವೇರಿಸಲಾಗುವುದು.
ನಿರ್ಮಾಪಕರ ಸಂಘದ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ.ಎಂ.ಮುನಿರತ್ನರವರು ಧ್ವನಿಸುರುಳಿ ಬಿಡುಗಡೆ ಮಾಡಲಿದ್ದಾರೆ.ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ.ಕನ್ನಡ ಚಿತ್ರರಂಗದ ಹೆಸರಾಂತ ಗಾಯಕರುಗಳಾದ ಹೇಮಂತ್ ಕುಮಾರ್, ಅನುರಾಧ ಭಟ್, ಅಜಯ್ ವಾರಿಯರ್,ರಾಜೇಶ್ ರಾಮನಾಥ್, ದಿವಾಕರ್.ಎನ್.ಸುಶ್ರಾವ್ಯವಾಗಿ ಹಾಡಿದ್ದಾರೆ.
ನಾಗರಾಜ್ ಅದ್ವಾನಿ,ರವಿ ಕಿಶೋರ್ ಛಾಯಾಗ್ರಹಣ.ಕೆ.ಗಿರೀಶ್ ಕುಮಾರ್ ಸಂಕಲನ.ತಮ್ಮ ಲಕ್ಷಣ್ ಕಲಾ ನಿರ್ದೇಶನ ಇರುವ ಈ ಚಿತ್ರಕ್ಕೆ ಸತೀಶ್ ಬ್ರಹ್ಮಾವರ್ ನಿರ್ಮಾಣ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ.ಅಕುಲ್ ನೃತ್ಯ ಸಂಯೋಜನೆ,ಶಂಕರ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ದುರ್ಗಾ ಪ್ರಶಾಂತ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರೆ,ಸಹಾಯಕ ನಿರ್ದೇಶಕರಾಗಿ ಪ್ರಕಾಶ್,ಮಧು,ಪ್ರಾರ್ಥನ್ ಕೈ ಜೋಡಿಸಿದ್ದಾರೆ.
ಚಿತ್ರದ ತಾರಾಗಣದಲ್ಲಿ ಶಶಿರಾಜ್,ಸಂಭ್ರಮ ಗೌಡ, ಶೋಭರಾಜ್,ಟೆನಿಸ್ ಕೃಷ್ಣ, ಬಿರಾದಾರ್,ಸಿದ್ದು ಮೂಲಿಮನಿ,ಐಶ್ವರ್ಯ,ಶಿಲ್ಪ, ಮೇಘನಾ,ಶ್ರುತಿ ನಾಯಕ್, ಮೂರ್ತಿ, ಕಾರ್ಕಳ ಶೇಖರ್ ಭಂಡಾರಿ, ರಾಜಾರಾಂ ಶೆಟ್ಟಿ ಉಪ್ಪಳ,ಮೈಕೋ ಮಂಜು, ಪ್ರದೀಪ್ ಭಟ್,ಮಾಸ್ಟರ್ ಪ್ರೇರಣ್,ಮಾಸ್ಟರ್ ದೀಪಕ್, ಶೈಲೇಶ್, ರಾಘವೇಂದ್ರ, ಮಧುಸೂದನ ,ಸುದೇಶ್, ತಾರಾನಾಥ್, ದುರ್ಗಾ ಪ್ರಶಾಂತ್,ಸುಧಾಕರ್, ಶ್ರೀನಿವಾಸ ಗೌಡ,ನವೀದ್, ಪುಷ್ಪ ನಾರಾಯಣ, ಕಿಶನ್ ಮುಂತಾದವರಿದ್ದಾರೆ. ನಿರ್ಮಾಪಕರಾದ ದಿವಾಕರ್ ಮತ್ತು ನಿರ್ದೇಶಕ ಸುಧಾಕರ್ ಬನ್ನಂಜೆ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಶ್ರೀ ಸುಧಾಕರ ಬನ್ನಂಜೆಯವರು ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ನಾಯಕರಾಗಿ,ನಿರ್ದೇಶಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡ ನಮ್ಮ ಭಂಡಾರಿ ಸಮಾಜದ ಮೊಟ್ಟಮೊದಲಿಗರು ಎಂಬುದು ನಮಗೆಲ್ಲ ಹೆಮ್ಮೆಯ ಸಂಗತಿ.ಚಿತ್ರರಂಗದಲ್ಲಿ ಅವರು ನಮ್ಮ ಭಂಡಾರಿ ಸಮಾಜದ ಹಲವಾರು ಪ್ರತಿಭಾವಂತರಿಗೆ ಅವಕಾಶ ಮಾಡಿಕೊಟ್ಟು ಅವರಲ್ಲಿರುವ ಸುಪ್ತಕಲಾ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಅವರ ಶ್ರಮ ಅಭಿನಂದನಾರ್ಹ.
ಹೊಸಬರ ಮತ್ತು ಘಟಾನುಘಟಿ ನಟರ ಸಮ್ಮಿಳನದ,ನಿರ್ಮಾಪಕರ ಧಾರಾಳತೆಯಿಂದ ಅದ್ಧೂರಿಯಾಗಿ ನಿರ್ಮಿಸಲ್ಪಟ್ಟಿರುವ ಚಿತ್ರ “ರಣರಣಕ” ದ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಅದ್ಧೂರಿಯಾಗಿ ಮಾಡುತ್ತಿರುವ ನಿರ್ಮಾಪಕ ಶ್ರೀ ದಿವಾಕರ್ ರವರಿಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ,ಹಲವಾರು ಕನ್ನಡ, ತುಳು ಸಿನಿಮಾಗಳನ್ನು ಚಿತ್ರರಸಿಕರಿಗೆ ಉಣಬಡಿಸಿ ಸೈ ಎನ್ನಿಸಿಕೊಂಡಿರುವ ನಮ್ಮ ಭಂಡಾರಿ ಸಮಾಜದ ಹೆಮ್ಮೆಯ ಚಿತ್ರಕರ್ಮಿ ಶ್ರೀ ಸುಧಾಕರ ಬನ್ನಂಜೆಯವರಿಗೆ ಅವರ ಮತ್ತೊಂದು ಪ್ರಯತ್ನವಾದ “ರಣರಣಕ” ಚಿತ್ರ ಅದ್ಭುತ ಯಶಸ್ಸನ್ನು ತಂದುಕೊಡಲಿ.ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ನಿರ್ವಿಘ್ನವಾಗಿ,ಅದ್ಧೂರಿಯಾಗಿ ನೆರವೇರಲಿ,ಶ್ರೀ ದೇವರ ಕೃಪಾಶೀರ್ವಾದ ತಮ್ಮ ಮೇಲಿರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.