January 18, 2025
Bantwala-bhavana

ಭಂಡಾರಿ  ಸಮಾಜ  ಸಂಘ  ಬಂಟ್ವಾಳ,  ಇದರ ಸಮುದಾಯ ಭವನ ನಿರ್ಮಾಣದ ಶ್ರಮದಾನ ಹಾಗೂ ಆರ್ಥಿಕ ಸಹಾಯಧನ  ಮಾಡುವ ಬಗ್ಗೆ ಸಮಾಜ  ಭಾಂದವರಲ್ಲಿ  ವಿನಂತಿ.

ಬಂಟ್ವಾಳದ ಭಂಡಾರಿ ಸಮಾಜ ಸಂಘದವರು ತಾವು ನಿರ್ಮಿಸುತ್ತಿರುವ ಸಮುದಾಯ ಭವನದಲ್ಲಿ ಮಾರ್ಚ್ 11 ಮತ್ತು 13 ರಂದು ನಡೆಯಲಿರುವ ಶ್ರಮದಾನದಲ್ಲಿ ಭಾಗವಹಿಸಲು ಭಂಡಾರಿ ಬಾಂಧವರಲ್ಲಿ ಮನವಿ ಮಾಡುತ್ತಿದ್ದಾರೆ ಮತ್ತು ಆರ್ಥಿಕ ಸಹಾಯ ಮಾಡುವ ದಾನಿಗಳು ಉದಾರ ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.                                                              

ಸಮಾಜ ಭಾಂದವರಲ್ಲಿ  ವಿನಂತಿ…

ಬಂಧುಗಳೇ ನಮ್ಮ ಹಿರಿಯರು ಸುಮಾರು 40 ವರ್ಷಗಳ ಹಿಂದೆ  ಬಂಟ್ವಾಳ ಬೈಪಾಸ್ ರಸ್ತೆಯ ಅಜೆಕಲ ಬಳಿ ಮಂಗಳೂರು ಧರ್ಮಸ್ಥಳ ರಾಜ್ಯ ಹೆದ್ದಾರಿಯ ಸಮೀಪ ಭಂಡಾರಿ ಸಮಾಜಕ್ಕೆ  ನಿವೇಶನ ಖರೀದಿ ಮಾಡಿ  ಬಂಟ್ವಾಳದಲ್ಲಿ ಮಾದರಿ ಕೆಲಸವನ್ನು ಮಾಡಿದ್ದಾರೆ. ಇದೀಗ ನಮ್ಮ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಸಮಾಜ ಬಾಂಧವರ ತನು ಮನ ಧನಗಳ ಸಹಾಯದಿಂದ ಬಂಟ್ವಾಳದಲ್ಲಿ ಭಂಡಾರಿ ಸಮುದಾಯ ಭವನದ ಕಾಮಗಾರಿ ನಿರ್ಮಾಣ ಹಂತದಲ್ಲಿ ಇದೆ. ಈ ಬಗ್ಗೆ ಮಾರ್ಚ್ 11 ರ ಭಾನುವಾರ  ಹಾಗೂ ಮಾರ್ಚ್ 13 ರ ಮಂಗಳವಾರ ಮಧ್ಯಾಹ್ನ ಎರಡು ಗಂಟೆಗೆ ಸರಿಯಾಗಿ ಸಮುದಾಯ ಭವನದ ನಿರ್ಮಾಣ ಹಂತದ ಕಾಮಗಾರಿಯಲ್ಲಿ ಶ್ರಮದಾನ ಮಾಡುವ ಬಗ್ಗೆ  ನಿರ್ಧರಿಸಲಾಗಿದೆ. ಸಮಾಜದ ಪ್ರತಿಯೊಂದು ಅಭಿವೃದ್ಧಿ ಕಾರ್ಯದಲ್ಲಿ ಬೆನ್ನುತಟ್ಟಿ ನಮ್ಮನ್ನು ಪ್ರೋತ್ಸಾಹಿಸುವ ತಾವುಗಳು ಯಾವುದಾದರೂ ಒಂದು ದಿನದಲ್ಲಿ ತಮ್ಮ ಅರ್ಧ ದಿನದ ಶ್ರಮದಾನವನ್ನು ಮಾಡಿ ಸಮಾಜದ ಅಭಿವೃದ್ಧಿ ಕೆಲಸದಲ್ಲಿ ಕೈ ಜೋಡಿಸಬೇಕಾಗಿ ತಮ್ಮಲ್ಲಿ ವಿನಮ್ರ ವಿನಂತಿ ಮಾಡಿಕೊಳ್ಳುತ್ತಿದ್ದೇವೆ. ಬಂಟ್ವಾಳದಲ್ಲಿ ಮಾದರಿ ಭಂಡಾರಿ ಸಮುದಾಯ ಭವನದ ನಿರ್ಮಾಣವನ್ನು ನಾವು ನೀವೆಲ್ಲರೂ ಜೊತೆಯಾಗಿ ಸೇರಿ ಮಾಡೋಣ ಎಂಬುದು ನಮ್ಮ ಅಭಿಲಾಷೆ.  ಈ ಮಾದರಿ ಕಾರ್ಯದಲ್ಲಿ ನೀವು ನಮ್ಮೊಂದಿಗೆ ಸಹಕರಿಸಬೇಕಾಗಿ  ವಿನಂತಿಸುತ್ತಿದ್ದೇವೆ. ಈಗಾಗಲೇ ಬಂಟ್ವಾಳ ಭಂಡಾರಿ  ಸಮಾಜ ಬಾಂಧವರು ಎರಡು ಬಾರಿ ಶ್ರಮದಾನ ಮಾಡಿದ್ದಾರೆ.  ಸಮುದಾಯ ಭವನವು ಅಂದಾಜು 5000 ಚದರಡಿಯ ಸುತ್ತಳತೆಯ  ವಿಸ್ತೀರ್ಣವನ್ನು ಹೊಂದಿದ್ದು,ಏಕಕಾಲದಲ್ಲಿ ಆರು ನೂರು ಜನರು ಕುಳಿತುಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸುವಂತೆ ನಿರ್ಮಿಸಲಾಗುತ್ತಿದೆ. 
ಭಂಡಾರಿ ಬಂಧುಗಳಿಂದ ಭಂಡಾರಿ ಬಂಧುಗಳಿಗಾಗಿಯೇ ನಿರ್ಮಿಸಲ್ಪಡುತ್ತಿರುವ ಈ ಸಮುದಾಯ ಭವನದ ನಿರ್ಮಾಣದಲ್ಲಿ ಸಮಾಜ ಬಾಂಧವರಿಂದ ಅತೀ ಹೆಚ್ಚಿನ ಆರ್ಥಿಕ ನೆರವನ್ನು ನಿರೀಕ್ಷಿಸುತ್ತಿದ್ದೇವೆ.   

                                                                                                                                   
ಆರ್ಥಿಕ ಸಹಾಯ ಮಾಡುವ ದಾನಿಗಳು…
ವಿಜಯ ಬ್ಯಾಂಕ್.
ಬಂಟ್ವಾಳ ಶಾಖೆ.  
ಭಂಡಾರಿ ಸಮಾಜ ಸಂಘ.ಬಂಟ್ವಾಳ.
ಖಾತೆ ಸಂಖ್ಯೆ  A/C.NO.109401011000348
IFSC CODE .VIJBOOO1094                                                                                                       

ಅಥವಾ ಹೆಚ್ಚಿನ ಮಾಹಿತಿಗಾಗಿ…
ಶ್ರೀ ದಿವಾಕರ್ ಶಂಭೂರು.
ಅಧ್ಯಕ್ಷರು.
ದೂ.ಸಂಖ್ಯೆ : 9482034847

ಶ್ರೀ ಸದಾಶಿವ ನಂದೊಟ್ಟು. 

ಕಾರ್ಯದರ್ಶಿಗಳು.
ದೂ.ಸಂಖ್ಯೆ : 9481849763

ಇವರುಗಳನ್ನು ಸಂಪರ್ಕಿಸಬಹುದು.
(ಭಂಡಾರಿ ಸಮಾಜ ಸಂಘ, ಭಂಡಾರಿ ಯವ ವೇದಿಕೆ ಮತ್ತು ಭಂಡಾರಿ ಮಹಿಳಾ ಘಟಕ ಬಂಟ್ವಾಳ. ಪದಾಧಿಕಾರಿಗಳು ಹಾಗೂ ಭಂಡಾರಿ ಸಮಾಜ ಬಾಂಧವರು ಬಂಟ್ವಾಳ)


ಬಂಟ್ವಾಳ ಭಂಡಾರಿ ಸಮಾಜ ಸಂಘದ ಈ ಮನವಿಗೆ ಭಂಡಾರಿವಾರ್ತೆಯ ಸಂಪೂರ್ಣ ಬೆಂಬಲ, ಸಹಕಾರ ಇದೆಯೆಂದು ತಿಳಿಸುತ್ತ ಭಂಡಾರಿ ಬಂಧುಗಳು ಮಾರ್ಚ್ 11 ಮತ್ತು 13 ರಂದು ಭಂಡಾರಿ ಸಮುದಾಯ ಭವನದ ನಿರ್ಮಾಣ ಹಂತದ ಕಾಮಗಾರಿಯ ಶ್ರಮದಾನದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮ ಭಂಡಾರಿ ಸಹೋದರ ಸಹೋದರಿಯರೊಂದಿಗೆ ಕೈ ಜೋಡಿಸಬೇಕು ಮತ್ತು ಬಂಟ್ವಾಳ ಭಂಡಾರಿ ಸಮಾಜ ಸಂಘದ ಈ ಮಹತ್ವಾಕಾಂಕ್ಷಿ ಯೋಜನೆಗೆ ಆರ್ಥಿಕ ಸಹಾಯ ನೀಡುವವರು ಉದಾರವಾಗಿ ಧನಸಹಾಯ ಮಾಡಿ ಭಂಡಾರಿ ಕುಲ ಬಾಂಧವರ ನೆರವಿಗೆ ಧಾವಿಸಬೇಕಾಗಿ ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಕುಲ ಬಾಂಧವರಲ್ಲಿ ವಿನಮ್ರವಾಗಿ ಪ್ರಾರ್ಥಿಸುತ್ತದೆ.

-ಭಂಡಾರಿವಾರ್ತೆ

1 thought on “ಬಂಟ್ವಾಳದಲ್ಲೊಂದು ಭಂಡಾರಿ ಸಮುದಾಯ ಭವನ

Leave a Reply

Your email address will not be published. Required fields are marked *