

ಉದಯವಾಣಿ ಪತ್ರಿಕೆಯ ವರದಿಗಾರರಾದ ಶ್ರೀ ರಾಜಾ ಬಂಟ್ವಾಳ ಮತ್ತು ಶ್ರೀಮತಿ ಲಲಿತ ದಂಪತಿಗಳ ಸುಪುತ್ರಿ ಮೋಕ್ಷಿತ(ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಉದ್ಯೋಗಿ.) ಮತ್ತು ಪುತ್ತೂರು ತಾಲೂಕಿನ ಬೊಟ್ಯಾಡಿ ಶ್ರೀ ಅನಂತ ಭಂಡಾರಿ ಮತ್ತು ಶ್ರೀಮತಿ ಹರಿಣಾಕ್ಷಿ ಭಂಡಾರಿ ದಂಪತಿಗಳ ಸುಪುತ್ರ ಗುರುಪ್ರಸಾದ್ ಭಂಡಾರಿ(ದುಬೈ ಯಲ್ಲಿ ಉದ್ಯೋಗಿ.) ಇವರ ನಿಶ್ಚಿತಾರ್ಥ ಕಾರ್ಯಕ್ರಮ ಡಿಸೆಂಬರ್ 8 ರ ಶುಕ್ರವಾರ ಬಂಟ್ವಾಳ ಪೊಯ್ತಾಜೆ ಕಲ್ಯಾರುವಿನಲ್ಲಿರುವ “ಶ್ರೀ ಭಗವಾನ್ ನಿಲಯ” ದಲ್ಲಿ ಸಂಭ್ರಮದಿಂದ ನೆರವೇರಿತು.
ಭಂಡಾರಿ ಕುಟುಂಬದ ಗುರುಹಿರಿಯರು, ಕುಟುಂಬಸ್ಥರು, ಹಿತೈಷಿಗಳು ಮತ್ತು ಸ್ನೇಹಿತರು ಈ ಸಂಭ್ರಮಕ್ಕೆ ಸಾಕ್ಷೀಭೂತರಾದರು.
ಮದುವೆಯ ನಿಶ್ಚಿತಾರ್ಥ ಮಾಡಿಕೊಂಡ ಜೋಡಿಹಕ್ಕಿಗಳಿಗೆ ಭಂಡಾರಿ ಕುಟುಂಬದ ಮನೆಮನದ ಮಾತು. ಆದಷ್ಟು ಶೀಘ್ರ ಗೃಹಸ್ಥಾಶ್ರಮ ಭಾಗ್ಯ ಲಭಿಸಲಿ ಎಂದು ಭಗವಂತನಲ್ಲಿ “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.