
ಈ ಬಾರಿಯ ಪಣಂಬೂರು ಬೀಚ್ ಉತ್ಸವದಲ್ಲಿ ಮಂಗಳೂರಿನ ಶ್ರೀ ಶೇಖರ್ ಭಂಡಾರಿ ಅತ್ತಾವರ ಅವರಿಗೆ ಗಾಯನ ಸ್ಪರ್ಧೆಯ ಹಿರಿಯರ ವಿಭಾಗದಲ್ಲಿ ದ್ವಿತೀಯ ಬಹುಮಾನ ಲಭಿಸಿದೆ.
ಪ್ರತೀ ವರ್ಷ ಡಿಸೆಂಬರ್ ತಿಂಗಳ 29,30 ಮತ್ತು 31 ರಂದು ಪಣಂಬೂರು ಕಡಲತೀರದಲ್ಲಿ ಮೂರು ದಿನಗಳ ಕಾಲ ನಡೆಯುವ ಬೀಚ್ ಉತ್ಸವದಲ್ಲಿ ಈ ಬಾರಿ ಡಿಸೆಂಬರ್ 30 ರಂದು ನಡೆದ ಗಾಯನ ಸ್ಪರ್ಧೆಯ ಹಿರಿಯರ ವಿಭಾಗದಲ್ಲಿ ಶ್ರೀ ಶೇಖರ್ ಭಂಡಾರಿ ಅತ್ತಾವರರು ರಾಜೇಶ್ ಖನ್ನಾ ಅಭಿನಯದ, ಸಫರ್ ಹಿಂದಿ ಚಿತ್ರದ,ಕಲ್ಯಾಣ್ ಜೀ ಆನಂದ್ ಜೀ ಸಂಗೀತ ಸಂಯೋಜನೆಯ ಸುಮಧುರ ಗೀತೆ “ಜೋ ತುಮ್ ಕೋ ಪಸಂದ್..ವೋಹೀ ಬಾತ್ ಕಹೇಂಗೇ….“ಯನ್ನು ಹಾಡಿ ನೆರೆದಿದ್ದವರ ಕರತಾಡನ,ನಿರ್ಣಾಯಕರ ಮೆಚ್ಚುಗೆ ಗಳಿಸಿ ದ್ವಿತೀಯ ಬಹುಮಾನವನ್ನು ತಮ್ಮ ತೆಕ್ಕೆಗೆಳೆದುಕೊಂಡಿದ್ದಾರೆ.
ಹವ್ಯಾಸಿ ಗಾಯಕರಾಗಿರುವ ಶ್ರೀ ಶೇಖರ್ ಭಂಡಾರಿ ಅತ್ತಾವರ ಅವರು ಇದೇ ರೀತಿ ಗಾಯನದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ, ತನ್ಮೂಲಕ ಭಂಡಾರಿ ಸಮುದಾಯದ ಯುವಕರಿಗೆ ಸ್ಪೂರ್ತಿಯಾಗಲಿ, ಅವರ ಉತ್ಸಾಹದ ಚಿಲುಮೆ ಸದಾ ಚಿಮ್ಮುತ್ತಿರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಮನಃಪೂರ್ವಕವಾಗಿ ಹಾರೈಸುತ್ತದೆ.
ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.