ಉಡುಪಿ ಜಿಲ್ಲೆ ಪಡುಬಿದ್ರಿಯ ಶ್ರೀ ಸಾಯಿಧಾಮದಲ್ಲಿ ನ.೧೧ ಮತ್ತು ೧೨ರಂದು ನಡೆದ 28ನೇ ರಾಜ್ಯ ಮಟ್ಟದ ಡೋಜೋ ಕರಾಟೆ ಚಾಂಪಿಯನ್ಷಿಪ್-2017 ರ ಕಟಾ, ಟೀಮ್ ಕಟಾ ಹಾಗೂ ಕುಮಿಟೆಯ ಬ್ರೌನ್ ಬೆಲ್ಟ್ 65 ರಿಂದ 70 ಕೆಜಿ ಪುರುಷರ ವಿಭಾಗದಲ್ಲಿ ಭಂಡಾರಿ ಕರಾಟೆಪಟು ಸುಶಾಂತ್ ಮರೋಳಿ ಅವರು ಮೂರೂ ಶೈಲಿಯಲ್ಲೂ ಪ್ರಥಮ ಸ್ಥಾನ ಪಡೆದಿದ್ದಾರೆ.
ಮಂಗಳೂರಿನ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಶಾಂತ್ ಶ್ರೀ ಸುದೇಶ್ ಮರೋಳಿ ಮತ್ತು ಶ್ರೀಮತಿ ಸುಮಿತಾಸುದೇಶ್ ಮರೋಳಿ ಅವರ ಪುತ್ರನಾಗಿದ್ದು, ಅನಿಲ್ ರಾಜ್ ಉಳ್ಳಾಲ ಅವರ ಮಾರ್ಗದರ್ಶನದಲ್ಲಿ ಕರಾಟೆ ಅಭ್ಯಾಸ ಮಾಡುತ್ತಿದ್ದಾನೆ.
ಸುಶಾಂತ್ ಮರೋಳಿ ಯವರು ಜೀವನದಲ್ಲಿ ಇನ್ನಷ್ಟು ಸಾಧನೆ ಮಾಡಲಿ. ಅವರು ಪೋಷಕರಿಗೆ ಮತ್ತು ಭಂಡಾರಿ ಸಮಾಜಕ್ಕೆ ಹೆಚ್ಚಿನ ಗೌರವ ತಂದು ಕೊಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತದೆ.
–ಭಾಸ್ಕರ್ ಭಂಡಾರಿ. ಸಿ.ಆರ್, ಶಿರಾಳಕೊಪ್ಪ