January 18, 2025
kambli

Zoom TV ಯಲ್ಲಿ ಪ್ರಸಾರವಾಗುವ ಪ್ರತಿಷ್ಠಿತ ಮಕ್ಕಳ ಪ್ಯಾಶನ್ ಶೋ ವಾಗಿರುವ US Polo assn kids ಅರ್ಪಿಸುವ ಜೂನಿಯರ್ ಪ್ಯಾಶನ್ ವೀಕ್ 17 ನ ಬ್ರಾಂಡ್ ಅಂಬಾಸಿಡರ್ ಗಳಾಗಿ ಆಯ್ಕೆಯಾಗುವ ಮೂಲಕ ಜಾಹೀರಾತು ಕ್ಷೇತ್ರಕ್ಕೆ ಪುಟಾಣಿ ಸಹೋದರಿಯರಿಬ್ಬರು ಕಾಲಿಟ್ಟಿದ್ದಾರೆ. ಆಯ್ಕೆಯಾಗಿರುವ 6 ಬ್ರಾಂಡ್ ಅಂಬಾಸಿಡರ್‍ಗಳಲ್ಲಿ 7 ವರ್ಷದ ಕುವರಿ ಶ್ರೀನಿ ನಮಿತ್ ಕಂಬ್ಲಿ ಮತ್ತು 4 ವರ್ಷದ ಕುವರಿ ಸಾಂಜ್ ನಮಿತ್ ಕಂಬ್ಲಿ ಸ್ಥಾನ ಗಿಟ್ಟಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 2018 ರ ಜೂನಿಯರ್ ಪ್ಯಾಶನ್ ವೀಕ್ ಗೆ ಈಗಾಗಲೇ ನೋಂದಾವಣೆ ಆರಂಭಗೊಂಡಿದ್ದು ಈ ಕಾರ್ಯಕ್ರಮದ ಜಾಹೀರಾತಿನಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಈ ಜಾಹೀರಾತು ಫೆಬ್ರವರಿ 14 ರಿಂದ Zoom TV ಯಲ್ಲಿ ಪ್ರಸಾರವಾಗುತ್ತಿದೆ. 

ಈ ಇಬ್ಬರು ಪುಟಾಣಿ ಮಾಡೆಲ್ ಸಹೋದರಿಯರು ಮೂಲತಃ ದಕ್ಷಿಣ ಕನ್ನಡದ ಮುಚ್ಚೂರಿನವರಾಗಿದ್ದು, ಮುಂಬೈನಲ್ಲಿ ಹೋಟೆಲ್ ಉದ್ಯಮಿಯಾಗಿದ್ದ ದಿವಂಗತ ನಾಗಪ್ಪ ಕೊರಗ ಭಂಡಾರಿ ಮುಚ್ಚೂರು ಮತ್ತು ಗುಲಾಬಿ ನಾಗಪ್ಪ ಭಂಡಾರಿ ದಂಪತಿಗಳ ಮೊಮ್ಮಗಳಾದ ಮುಂಬೈ ನ ಗೋರೆಗಾಂವ್ ನಿವಾಸಿ ಶ್ರೀಮತಿ ಸ್ಮಿತಾ ನಮಿತ್ ಕಂಬ್ಲಿ ಮತ್ತು ನಮಿತ್ ವಿನೋದ್ ಕಂಬ್ಲಿ ದಂಪತಿಗಳ ಮುದ್ದಿನ ಮಕ್ಕಳು. 

ಈ ಇಬ್ಬರು ಪುಟಾಣಿ ಸಹೋದರಿಯರು ಮುಂಬೈನಲ್ಲಿ ಅನೇಕ ಪ್ಯಾಶನ್ ಶೋ ನಲ್ಲಿ ಭಾಗವಹಿಸಿದ್ದು ದೇವರ ಕೃಪೆ ಮತ್ತು ಪ್ರೇಕ್ಷಕರ ಆಶೀರ್ವಾದದಿಂದ ಪ್ರಮುಖ ಕಾರ್ಯಕ್ರಮವೊಂದರ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಪ್ಯಾಶನ್ ಲೋಕಕ್ಕೆ ಅತಿ ಕಿರಿಯ ವಯಸ್ಸಿನಲ್ಲಿ ಪಾದಾರ್ಪಣೆಗೈದು ಜಾಹೀರಾತು ಕ್ಷೇತ್ರದಲ್ಲಿ ಮಿಂಚುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. 

ಈ ಇಬ್ಬರು ಜೂನಿಯರ್ ಮಾಡೆಲ್ ಗಳ ಅಮೋಘ ಸಾಧನೆಯೂ ಭಂಡಾರಿ ಸಮುದಾಯಕ್ಕೆ ಹೆಮ್ಮೆಯ ವಿಚಾರವಾಗಿದ್ದು, ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಕುವರಿ ಶ್ರೀನಿ ಮತ್ತು ಕುವರಿ ಸಾಂಜ್ ರ ಪ್ರತಿಭೆಯನ್ನು ಶ್ಲಾಘಿಸುತ್ತದೆ ಮತ್ತು ಇವರ ಪ್ರತಿಭೆ ಭವಿಷ್ಯದಲ್ಲಿ ವಿಶ್ವ ವ್ಯಾಪಿಯಾಗಲಿ ಎಂದು ಹಾರೈಸುತ್ತದೆ.                                                                                             
ಭಂಡಾರಿ ವಾರ್ತೆ                                                                                                                                           
.
Bhandary kids as brand ambassadors in TV media                                             
Miss Shreeni Namith Kambli age 6 years and her younger sister Miss Saanjh Namith Kambli age 4 years selected as brand ambassadors for prestigious junior fashion show US Polo association kids telecast on Zoom TV, nominations for the 2018 event is already started from 14th February, in the promotion of the event TV campaign which is started is started from 14th February little stars are already on air. You may view the advertisements on television.
Little princess are hailing from Bhandary community of Dakshina Kannada district Muchuru village near Suratkal in Mangaluru, at present residing in Mumbai.

Little kids are the grand children of late Nagappa Koraga Bhandary and Gulabi Nagappa Bhandary, who was running restaurants in Mumbai.

Advt. time
Little sisters are already celebrities in their own way and style in the fashion industry.

BhandaryVarthe team on behalf of our viewers, readers join their parents Smt Smitha Namith Kambli and Shri Namith Vinod Kambli, Goregaon Mumbai, in the joy of celebration of this golden moments.

Adv. poster
Entire Bhandary families are proud of these little angles. 
                                                                                                                                                 
-Bhandary Varthe

Leave a Reply

Your email address will not be published. Required fields are marked *