January 18, 2025
shashidar

ಭಂಡಾರಿ ಸಮಾಜದ ಉನ್ನತಿಗಾಗಿ ಮತ್ತು ಸದೃಢ ಸಮಾಜ ನಿರ್ಮಾಣದ ಉದ್ದೇಶಕ್ಕಾಗಿ ಸ್ಥಾಪನೆಯಾದ ಎಲ್ಲ ಭಂಡಾರಿ ಸಂಘಟನೆಗಳ ಒಕ್ಕೂಟ ಭಂಡಾರಿ ಮಹಾಮಂಡಲ ಎಂಬ ಸಂಸ್ಥೆಗೆ ನೂತನ ಅಧ್ಯಕ್ಷರಾಗಿ ಕಾರ್ಕಳದ ನಿವೃತ್ತ ಸರ್ಕಾರಿ ಅಧಿಕಾರಿ , ಸಮಾಜ ಸೇವಕ ಶ್ರೀಯುತ ಶಶಿಧರ ಭಂಡಾರಿ ಕಾರ್ಕಳ ಇವರು ಆಯ್ಕೆಯಾಗಿರುತ್ತಾರೆ.

ಶ್ರೀಯುತರು ಕಾರ್ಕಳದ ದಿವಂಗತ ಲೋಕು ಭಂಡಾರಿ ಮತ್ತು ದಿವಂಗತ ಪದ್ಮಾವತಿ ಭಂಡಾರಿ ಎಂಬವರ ಪುತ್ರರಾಗಿದ್ದು, ವಿದ್ಯಾಭ್ಯಾಸದ ನಂತರ,1978 ರಲ್ಲಿ ಕಂದಾಯ ಇಲಾಖೆಯಲ್ಲಿ ಸರ್ಕಾರಿ ಸೇವೆಗೆ ಪಾದಾರ್ಪಣೆ ಮಾಡಿದರು. ಸುಮಾರು 39 ವರ್ಷ ಕಂದಾಯ ಇಲಾಖೆಯ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2017 ಪೆಬ್ರವರಿಯಲ್ಲಿ ಉಪತಹಸೀಲ್ದಾರ್ ಆಗಿ ಬಡ್ತಿ ಹೊಂದಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುತ್ತಾರೆ.

ಭಂಡಾರಿ ಸಮಾಜ ಸಂಘ ಕಾರ್ಕಳದಲ್ಲಿ ಹಲವಾರು ವರ್ಷಗಳಿಂದ ಸದಸ್ಯರಾಗಿ ಪದಾಧಿಕಾರಿಯಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ‌. ಹಾಗೆಯೇ ಕಚ್ಚೂರು ನಾಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯಲ್ಲೂ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿರುತ್ತಾರೆ. ಹಾಗೆಯೇ ನಿಕಟಪೂರ್ವ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

 

ಭಂಡಾರಿ ಮಹಾಮಂಡಲ ( ರಿ ) ಬಾರ್ಕೂರು

2023-25 ನೇ ಸಾಲಿನ ಆಡಳಿತ ಮಂಡಳಿಯ ಪದಾಧಿಕಾರಿಗಳು

ಪ್ರ. ಕಾರ್ಯದರ್ಶಿ :
ಶ್ರೀ ಶೇಖರ್ ಎಚ್. ಭಂಡಾರಿ ಕಾರ್ಕಳ

ಉಪಾಧ್ಯಕ್ಷರು :
ಶ್ರೀ ಉಮೇಶ್ ಭಂಡಾರಿ ಬೆಂಗಳೂರು
ಶ್ರೀಮತಿ ಮಾಲತಿ ರಮೇಶ್ ಕೆಮ್ಮಣ್ಣು
ಶ್ರೀ ಮೋಹನ್ ಭಂಡಾರಿ ಬಾಳೆಹೊನ್ನೂರು

ಕೋಶಾಧಿಕಾರಿ :
ಶ್ರೀ ರಮೇಶ್ ಭಂಡಾರಿ ಪಾಂಗಾಳ

ಜೊತೆ ಕಾರ್ಯದರ್ಶಿ :
ಶ್ರೀ ಕುಶಲ್ ಭಂಡಾರಿ ಬೆಂಗಳೂರು

ಸಂಘಟನಾ ಕಾರ್ಯದರ್ಶಿಗಳು :
ಶ್ರೀಮತಿ ವಾಣಿ ಭಂಡಾರಿ ಮಂಗಳೂರು
ಶ್ರೀ ವಿಶ್ವನಾಥ್ ಭಂಡಾರಿ ಬೆಳ್ತಂಗಡಿ
ಶ್ರೀ ಸುಧಾಕರ್ ಭಂಡಾರಿ ಶಿರಾಳ್ ಕೊಪ್ಪ
ಶ್ರೀಮತಿ ಶಾಲಿನಿ ಗಂಗಾಧರ್ ಉಡುಪಿ

ಜೊತೆ ಕೋಶಾಧಿಕಾರಿ :
ಶ್ರೀಮತಿ ಮಲ್ಲಿಕಾ ಶೇಷಗಿರಿ ಉಡುಪಿ.

ವಲಯವಾರು ಪ್ರತಿನಿಧಿಯಾಗಿ ಬೆಂಗಳೂರು ವಲಯದ ಪರವಾಗಿ

ಶ್ರೀ ಮಧುಸೂದನ್ ಬಾಳೆಹೊನ್ನೂರು.

 

ನೂತನ ಆಡಳಿತ ಮಂಡಳಿಯ ಅಧಿಕಾರವಧಿಯಲ್ಲಿ ಎಲ್ಲ ಸಮಾಜ ಸಂಘಟನೆಗಳು ಒಗ್ಗಟ್ಟಾಗಿ ಸಮಾಜದ ದುರ್ಬಲರ ಏಳಿಗೆಗೆ ಮತ್ತು ಶಿಕ್ಷಣ, ಉದ್ಯೋಗ, ಆರೋಗ್ಯ ಕ್ಷೇತ್ರದಲ್ಲಿ ಸಹಕಾರ ನೀಡಿ ಸಮಾಜದ ಸರ್ವತೋಮುಖ ಬೆಳವಣಿಗಗೆ ಭಂಡಾರಿ ಮಹಾಮಂಡಲ ಕಾರಣವಾಗಲಿ, ಶ್ರೀ ನಾಗೇಶ್ವರ ದೇವರು ಆಡಳಿತ ಮಂಡಳಿಗೆ ಸದಾ ಅನುಗ್ರಹ ನೀಡಲಿ ಎಂದು ಈ ಮೂಲಕ ಭಂಡಾರಿ ವಾರ್ತೆ ಹಾರೈಸುತ್ತದೆ.

Leave a Reply

Your email address will not be published. Required fields are marked *