ಬೇಕಾಗುವ ಸಾಮಾಗ್ರಿಗಳು:
- 1 ಕೆಜಿ ಕೋಳಿ
- 1/2 ಕಪ್ ತುಪ್ಪ
- 1/2 ಟೀಸ್ಪೂನ್ ಸಕ್ಕರೆ
- ಕರಿಬೇವು ಎಲೆಗಳು
ನೆನೆಸಿಡಲು
- 1 ಸಣ್ಣ ನಿಂಬೆ ಹಣ್ಣಿನ ರಸ
- ಕೆಂಪು ಆಹಾರ ಬಣ್ಣ (ಐಚ್ಛಿಕ)
- 2-3 ಟೇಬಲ್ ಸ್ಪೂನ್ ಕಾರ್ನ್-ಫ್ಲೋರ್
- 2-3 ಟೇಬಲ್ ಸ್ಪೂನ್ ಮೈದಾ ಹಿಟ್ಟು
- 3 ಟೇಬಲ್ ಸ್ಪೂನ್ ಚಿಲ್ಲಿ ಪೇಸ್ಟ್
- 1 ಮೊಟ್ಟೆ
- 1 ಟೀಸ್ಪೂನ್. ಅರಿಶಿನ ಪುಡಿ
- ರುಚಿಗೆ ಉಪ್ಪು
- ಫ್ರೈ ಗೆ ಎಣ್ಣೆ
ಮಸಾಲಾಗೆ
· 20 ಕಾಶ್ಮೀರಿ ಮೆಣಸಿನಕಾಯಿಗಳು
· 2 ಟೇಬಲ್ ಸ್ಪೂನ್. ಕೊತ್ತಂಬರಿ (ಧನಿಯಾ) ಪೌಡರ್
· 1 .ಟೇಬಲ್ ಸ್ಪೂನ್ ಕುಮಿನ್ (ಜೀರಾ) ಪೌಡರ್
· 1 ಟೇಬಲ್ ಸ್ಪೂನ್ ಗರಮ್ ಮಸಾಲಾ ಪೌಡರ್
· 1 ಟೇಬಲ್ ಸ್ಪೂನ್ ಪೆಪ್ಪರ್ ಪೌಡರ್
· ಚರ್ಮದೊಂದಿಗೆ 12 ಬೆಳ್ಳುಳ್ಳಿ ಪದರಗಳು
· 1 ಸಂಪೂರ್ಣ ಶುಂಠಿ
· ½ ಕಪ್ ಈರುಳ್ಳಿ ಮತ್ತು ಟೊಮೆಟೊ ಪೇಸ್ಟ್ (1 ಈರುಳ್ಳಿ ಮತ್ತು 1 ಟೊಮೆಟೊ)
· ರುಚಿಗೆ ತಕ್ಕಷ್ಟು ಉಪ್ಪು
ವಿಧಾನ:
1. ಮಧ್ಯಮ ತುಂಡುಗಳಾಗಿ ಚಿಕನ್ ಕತ್ತರಿಸಿ, ತೊಳೆಯಿರಿ. ಕೆಳಗೆ ತಿಳಿಸಲಾದ ಪದಾರ್ಥಗಳೊಂದಿಗೆ ಇದನ್ನು ನೆನೆಸಿಡಿ.ಚಿಕನ್ ಅನ್ನು ಬೆರೆಸಿದ ನಂತರ 1/2 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ನೆನೆಸಿಡಿ. ನಂತರ ನೆನೆಸಿದ ಚಿಕನ್ ಅನ್ನು ೧/೨ ಗಂಟೆ ಫ್ರಿಡ್ಜ್ ನಲ್ಲಿ ಇಡಿ.
2. ಬಟ್ಟಲಿನಲ್ಲಿ, ಕೆಂಪು ಮೆಣಸಿನ ಕಾಯಿಯನ್ನು ಸೇರಿಸಿ ನಂತರ 1 ಗಂಟೆ ಕಾಲ ಸಾಕಷ್ಟು ನೀರನ್ನು ಸೇರಿಸಿ ನೆನೆಸಿ. ಬೆಳ್ಳುಳ್ಳಿ, ಶುಂಠಿ, ನೆನೆಸಿದ ಮೆಣಸಿನಕಾಯಿ ಸಾಕಷ್ಟು ನೀರನ್ನು ಸೇರಿಸಿ ಮೃದು ಪೇಸ್ಟ್ ಆಗಿ ಮಿಶ್ರಣ ಮಾಡಿ.
3. ಒಂದು ಪ್ಯಾನ್ ನಲ್ಲಿ ಎಣ್ಣೆ ಹಾಕಿ ನಂತರ ಅದನ್ನು ಚಿಕನ್ ಬೇಯಿಯುವವರೆಗೆ ಫ್ರೈ ಮಾಡಿ ಪ್ಯಾನ್ನಿಂದ ತೆಗೆದು ಪಕ್ಕಕ್ಕೆ ಇರಿಸಿ.
4. ½ ಕಪ್ ತುಪ್ಪವನ್ನು ಒಂದು ದೊಡ್ಡ ಪ್ಯಾನ್ ನಲ್ಲಿ ಬಿಸಿ ಮಾಡಿ ಅದಕ್ಕೆ ಕರಿಬೇವು ಎಲೆಗಳು ಮತ್ತು 5 ಚಮಚ ಗ್ರೌಂಡ್ ಚಿಲ್ಲಿ ಪೇಸ್ಟ್ ಹಾಕಿ. ಫ್ರೈ ಆದ ನಂತರ ಗರಮ್ ಮಸಾಲಾ ಪುಡಿ, ಪೆಪ್ಪರ್ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಫ್ರೈ ಮಾಡಿ.ನಂತರ ½ ಕಪ್ ಈರುಳ್ಳಿ ಮತ್ತು ಟೊಮೆಟೊ ಪೇಸ್ಟ್ ಸೇರಿಸಿ ಕಚ್ಚಾ ವಾಸನೆ ಹೋಗುವ ತನಕ ಫ್ರೈ ಮಾಡಿ.
5. ಹುರಿದ ಚಿಕನ್ ತುಂಡುಗಳನ್ನು ಸಾಧಾರಣ ಜ್ವಾಲೆಯ ಮೇಲೆ ಮಸಾಲೆ ಡ್ರೈ ಆಗುವವರೆಗೆ ಮಿಶ್ರಣ ಮಾಡಿ. ½ ಟೀಸ್ಪೂನ್ ಸಕ್ಕರೆ ಮತ್ತು ಉಪ್ಪನ್ನು ನಿಮ್ಮ ರುಚಿಗೆ ತಕ್ಕಂತೆ (ಅಗತ್ಯವಿದ್ದರೆ ಮಾತ್ರ) ಸೇರಿಸಿ.
6. (ಚಿತ್ರದಲ್ಲಿ ಅಲಂಕರಿಸಲು ಈರುಳ್ಳಿ ಕಾಂಡ ಬಳಸಿದೆ)
(ಉಳಿದ ಕೆಂಪು ಮೆಣಸಿನಕಾಯಿ ಪೇಸ್ಟ್ ಅನ್ನು ಏರ್ಟ್ಸೈಟ್ ಕಂಟೇನರ್ಗೆ ವರ್ಗಾಯಿಸಿ ಮತ್ತು ರೆಫ್ರಿಜರೇಟರ್ನಲ್ಲಿ 2 ತಿಂಗಳವರೆಗೆ ಸಂಗ್ರಹಿಸಿಡಬಹುದು.)
✍🏻: Thripthi Bhandary