ಬಂಟ್ವಾಳ ದಲ್ಲಿ ನೂತನವಾಗಿ ನಿರ್ಮಾಣವಾದ ಭಂಡಾರಿ ಸಭಾಭವನ ಉದ್ಘಾಟನೆ ಡಿಸೆಂಬರ್ 15 ರ ಬಾನುವಾರ ದಂದು ಬೆಳಿಗ್ಗೆ ಗಣಹೋಮ ಮತ್ತು ಲಕ್ಷ್ಮಿ ಶ್ರೀ ಸತ್ಯನಾರಾಯಣ ದೇವರ ಪೂಜೆಯೊಂದಿಗೆ ನೆರೆದ ಸಮಸ್ತ ಬಂಧುಗಳ ಸಮ್ಮುಖದಲ್ಲಿ ನಡೆಯಿತು.
ಸಮಾಜದಲ್ಲಿ ಉತ್ತಮ ಸೇವೆಯ ಮೂಲಕ ಹೆಸರು ಮಾಡಿಕೊಂಡಿರುವ ಭಂಡಾರಿ ಸಮಾಜವು ಸಂಖ್ಯೆಯಲ್ಲಿ ಕಡಿಮೆ ಇದೆ. ಹಿಂದಿನ ಕಾಲದಲ್ಲಿ ಯಾವುದೇ ಸಮಾಜವನ್ನು ಆತನ ವೃತ್ತಿಯಿಂದ ಜಾತಿಯನ್ನು ಗುರುತಿಸುತ್ತಿದ್ದರು. ಆದರೆ ಈಗ ಭಂಡಾರಿ ಸಮಾಜದ ವೃತ್ತಿ ದೊಡ್ಡ ಉದ್ದಿಮೆಯಾಗಿದೆ. ಇದೀಗ ಅನ್ಯ ಸಮಾಜದವರು ಭಂಡಾರಿ ಸಮಾಜದ ವೃತ್ತಿಯನ್ನು ಮಾಡುತ್ತಿದ್ದಾರೆ.ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಂಘಟನೆಯಿಂದ ಪ್ರಯೋಜನ ಸಿಕ್ಕಿದಾಗ ಮಾತ್ರ ಸಂಘಟನೆ ಉತ್ತಮ ಹೆಸರು ಗಳಿಸಿ ಬಲಿಷ್ಠವಾಗುತ್ತದೆ ಮುಂದಿನ ದಿನಗಳಲ್ಲಿ ಬಂಟ್ವಾಳ ಭಂಡಾರಿ ಸಮಾಜದ ಅಭಿವೃದ್ಧಿಗೆ ತಮ್ಮ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿಗೆ ಕರೆದುಕೊಂಡು ಹೋಗುವುದಾಗಿ ಬಂಟ್ವಾಳ ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭರವಸೆ ನೀಡಿದರು.
ಅವರು ಬಂಟ್ವಾಳದ ಅಜೆಕಲದಲ್ಲಿ ನೂತನವಾಗಿ ನಿರ್ಮಾಣಗೊಂಡ ಬಂಟ್ವಾಳ ಭಂಡಾರಿ ಸಮಾಜ ಸಂಘದ ನೂತನ ಸಭಾಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡುತ್ತಿದ್ದರು.
“ಜಾತಿ ಸಂಘಟನೆಗಳಿಂದ ಸಂಘಟಿತರಾಗಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಶ್ರೀ ವೀರಪ್ಪ ಮೊಯ್ಲಿ ರಾಜ್ಯದ ಮುಖ್ಯಮಂತ್ರಿಯಾದ ಬಳಿಕ ಯಾವ ಹಿಂದುಳಿದ ಸಮಾಜವು ಕೂಡಾ ಶಿಕ್ಷಣ ದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಸಿ.ಇ.ಟಿ. ಪದ್ಧತಿಯನ್ನು ಜಾರಿಗೆ ತಂದರು. ಇದರ ಪ್ರಯೋಜನವನ್ನು ಭಂಡಾರಿ ಸಮಾಜದವರು ಪಡೆದು ಉನ್ನತ ಶಿಕ್ಷಣ ದ ಮೂಲಕ ಬಲಿಷ್ಠರಾಗಬೇಕು ಭಂಡಾರಿ ಸಮಾಜದಿಂದ ಮಂಗಳೂರು ಮಹಾನಗರ ಪಾಲಿಕೆಗೆ ಶ್ರೀ ನಾಗೇಶ್ ಎಮ್ . ಭಂಡಾರಿಯವರನ್ನು ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆ ಮಾಡುವಂತೆ ಸೂಚನೆ ನೀಡಿ ಭಂಡಾರಿ ಸಮಾಜ ದ ಋಣ ತೀರಿಸಲು ಪ್ರಯತ್ನ ಮಾಡಿದ್ದೇನೆ ಮುಂದಿನ ದಿನದಲ್ಲಿ ಭಂಡಾರಿ ಸಮಾಜದವರು ಅಭಿವೃದ್ಧಿಗಾಗಿ ತನ್ನನ್ನು ಸಂಪರ್ಕ ಮಾಡಿದರೆ ತನ್ನಸಹಕಾರವನ್ನು ಶಕ್ತಿ ಮೀರಿ ನೀಡುವುದಾಗಿ ಮಾಜಿ ಸಚಿವ ಶ್ರೀ ಬಿ.ರಮಾನಾಥ ರೈ ಹೇಳಿದರು.”
ಶ್ರೀಮತಿ ಲೀಲಾವತಿ ಸದಾಶಿವ ಭಂಡಾರಿ ಹೊಸ್ಮಾರು ಅವರು ಸಭಾಭವನವನ್ನು ಉದ್ಘಾಟಿಸಿ. ತನ್ನ ಪತಿ (ಸದಾಶಿವ ಭಂಡಾರಿ) ಅವರು ಸಂಘ ಸ್ಥಾಪನೆಯ ಆರಂಭದಿಂದ ಕೂಡಾ ಸಂಘ ಮತ್ತು ಸಂಘಟನೆಗಾಗಿ ದುಡಿದಿದ್ದಾರೆ ಹಾಗೂ ಸಮಾಜ ಬಂದುಗಳ ಶ್ರಮದಿಂದ ಇಂದು ಬಂಟ್ವಾಳ ಭಂಡಾರಿ ಸಭಾಭವನದ ವೇದಿಕೆ ತನ್ನ ಹಸ್ತದಿಂದ ಉದ್ಘಾಟನೆಯಾಗಿರುವುದು ಬಹಳ ಸಂತೋಷವಾಗುತ್ತಿದೆ ಎಂದರು.
ಕು ॥ ಬೇಬಿ ಐಶಾನಿ ಅನೂಪ್‌ಕುಮಾರ್ ಮುಖ್ಯದ್ವಾರ ಉದ್ಘಾಟಿಸಿದರು.
ಕಾರ್ಕಳ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಶ್ರೀ ಶೇಖರ್ ಎಚ್ . ಭಂಡಾರಿಯವರು ಬಂಟ್ವಾಳ ಭಂಡಾರಿ ಬಂಧುಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದರಿಯಾದ ಉತ್ತಮ ಕೆಲಸವನ್ನು ಮಾಡಿದ್ದಾರೆ ಮುಂದಿನ ದಿನದಲ್ಲಿ ಪ್ರತಿ ತಾಲೂಕಿನಲ್ಲಿ ಭಂಡಾರಿ ಸಭಾಭವನ ನಿಮಾ೯ಣ ಮಾಡಬೇಕು ಎಂದು ಸಲಹೆ ನೀಡಿ ಕಾಕ೯ಳ ಭಂಡಾರಿ ಸಮಾಜ ಸಂಘದ ವತಿಯಿಂದ ಸಭಾಭವನ ನಿಮಾ೯ಣಕ್ಕಾಗಿ ಧನ ಸಹಾಯದ ಚೆಕ್ ಹಸ್ತಾಂತರ ಮಾಡಿ ಶುಭ ಹಾರೈಸಿದ್ದರು
ಸಂಘದ ಅಧ್ಯಕ್ಷ ಶ್ರೀ ದಿವಾಕರ ಶಂಭೂರು ಅವರು ಅಧ್ಯಕ್ಷತೆ ವಹಿಸಿ ಸಮಾಜ ಹಿರಿಯರ ಶ್ರಮದಿಂದ ಖರೀದಿಸಿದ ಜಾಗದಲ್ಲಿ ಎಲ್ಲ ಹಿರಿಯ ಕಿರಿಯರ ಸಹಕಾರದಿಂದ ಸಭಾಭವನ ನಿರ್ಮಾಣ ಮಾಡಲು ಸಾಧ್ಯವಾಯಿತು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಮಾಜಿ ಅಧ್ಯಕ್ಷ ಶ್ರೀ ವೈ. ಶಂಭು ಭಂಡಾರಿ,ಮಾಜಿ ಆಡಳಿತ ಮೂಕ್ತೇಸರ ಶ್ರೀ ವಿಶ್ವನಾಥ್ ಭಂಡಾರಿ ಕಾಡಬೆಟ್ಟು , ಬೆಂಗಳೂರು ಭಂಡಾರಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಕರಾವಳಿ ಮತ್ತು ಶ್ರೀ ಶೇಖರ್ ಭಂಡಾರಿ ಕಾರ್ಕಳ , ಕಾರ್ಕಳ ಭಂಡಾರಿ ಸಮಾಜ ಸಂಘದ ಮಾಜಿ ಅಧ್ಯಕ್ಷ ಶ್ರೀ ಶಶಿಧರ್ ಕಾರ್ಕಳ , ಬೆಳ್ತಂಗಡಿ ಭಂಡಾರಿ ಸಮಾಜ ಸಂಘದ ಮಾಜಿ ಅಧ್ಯಕ ಶ್ರೀ ಕೇಶವ ಭಂಡಾರಿ ಬೆಳ್ತಂಗಡಿ , ಮುಂಬೈ ಭಂಡಾರಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಶ್ರೀ ಬಾಲಕೃಷ್ಣ ಭಂಡಾರಿ ಕುಂಬ್ಳೆ, ಮೂಡಿಗೆರೆ ಭಂಡಾರಿ ಸಂಘದ ಅಧ್ಯಕ್ಷ ಶ್ರೀ ಷಣ್ಮುಗಾನಂದ ಕಚ್ಚೂರು ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಸ್ಥಾಪಕ ಅಧ್ಯಕ್ಷ ಮತ್ತು ಭಂಡಾರಿ ವಾರ್ತೆಯ ಮುಖ್ಯ ಕಾರ್ಯನಿರ್ವಾಹಕ ಶ್ರೀ ಪ್ರಕಾಶ್ ಭಂಡಾರಿ ಕಟ್ಲ ,ಮಂಗಳೂರಿನ ಖ್ಯಾತ ನ್ಯಾಯವಾದಿ ಮನೋರಾಜ್ ರಾಜೀವ ಮತ್ತು ಕಚ್ಚೂರು ಕ್ರೆಡಿಟ್ ಕೋಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷ ಶ್ರೀ ಬಾಲಕೃಷ್ಣ ಭಂಡಾರಿ ಮತ್ತಿತರ ಗಣ್ಯರು ಆಗಮಿಸಿ ಶುಭ ಹಾರೈಸಿದರು
ವೇದಿಕೆಯಲ್ಲಿ ಮಂಗಳೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಶ್ರೀ ರಘುವೀರ್ ಭಂಡಾರಿ, ಬೆಳ್ತಂಗಡಿ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಶ್ರೀ ಪೂವಪ್ಪ ಭಂಡಾರಿ , ಬಂಟ್ವಾಳ ಸಂಘದ ಗೌರವಾಧ್ಯಕ್ಷ ಶ್ರೀ ಬಾಬು ಭಂಡಾರಿ ಅಜೆಕಲ, ಮಾಜಿ ಅಧ್ಯಕ್ಷರಾದ ಶ್ರೀ ಪೂವಪ್ಪ ಭಂಡಾರಿ, ಕನ್ಯಾನ ,ಶ್ರೀ ಸುಂದರ ಭಂಡಾರಿ ರಾಯಿ, ಶ್ರೀಮತಿ ಪುಷ್ಪಾ ಸಂಜೀವ ಭಂಡಾರಿ, ಶ್ರೀಮತಿ ಪದ್ಮಾವತಿ ವಿಠಲ ಭಂಡಾರಿ, ಸಂಘದ ಕಾರ್ಯದರ್ಶಿ ಶ್ರೀ ಸದಾಶಿವ ನಂದೊಟ್ಟು, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ದಾಕ್ಷಾಯಿಣಿ ನಾಗೇಶ್, ಯುವ ಘಟಕ ಅಧ್ಯಕ್ಷ ಡಾ| ಶ್ರೀ ಪ್ರಶಾಂತ್ ಕಲ್ಲಡ್ಕ ಉಪಸ್ಥಿತರಿದ್ದರು.
ಸಭಾಭವನ ದಾನಿಗಳನ್ನು ಮತ್ತು ಸಮಾಜದ ಗಣ್ಯ ವ್ಯಕ್ತಿಗಳನ್ನು ಗೌರವಿಸಲಾಯಿತು
ಸಂಘದ ಮಾಜಿ ಅಧ್ಯಕ್ಷ ಶ್ರೀ ನಾರಾಯಣ ಭಂಡಾರಿ ಬೊಟ್ಯಾಡಿ ಪ್ರಸ್ತಾವನೆಗೈದರು. ಶ್ರೀಮತಿ ಪ್ರತಿಮಾ ರಾಯಿ ಪ್ರಾರ್ಥಿಸಿದರು ಶ್ರೀ ಶ್ರೀಕಾಂತ್ ಭಂಡಾರಿ ಪಾಣೆಮಂಗಳೂರು ವಂದಿಸಿದರು. ಶ್ರೀಮತಿ ದಿವ್ಯಾಲತಾ ಭಾಸ್ಕರ್ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು.
ವಿಜೃಂಭಣೆಯಿಂದ ಯಶಸ್ವಿಯಾಗಿ ಉದ್ಘಾಟನೆಗೊಂಡ ಬಂಟ್ವಾಳ ಭಂಡಾರಿ ಸಭಾಭವನದ ಅಭಿವೃದ್ಧಿಗಾಗಿ ಭಂಡಾರಿ ವಾತೆ೯ ಹಾರ್ದಿಕ ಶುಭ ಹಾರೈಸುತ್ತದೆ.
-ಭಂಡಾರಿ ವಾತೆ೯