ಬಂಟ್ವಾಳ ಭಂಡಾರಿ ಸಭಾ ಭವನದ ಉದ್ಘಾಟನಾ ಸಮಾರಂಭವು ಡಿಸೆಂಬರ್ 15 ಆದಿತ್ಯವಾರ ದಂದು ಬೆಳಿಗ್ಗೆ ಗಂಟೆ 7:00 ರಿಂದ 8:00 ಗಂಟೆಯ ವರೆಗೆ ಗಣಹೋಮ ನಂತರ ಸಭಾಭವನದ
ಮುಖ್ಯದ್ವಾರ ಉದ್ಘಾಟನೆಯನ್ನು ಬೇಬಿ ॥ ಐಶಾನಿ ಅನೂಪ್ ಪುಣ್ಕೆದಡಿ ಕಕ್ಯಪದವು ಉದ್ಘಾಟಿಸಲಿದ್ದಾರೆ
ಬೆಳಿಗ್ಗೆ ಗಂಟೆ 9:00 ರಿಂದ 10:30 ರ ತನಕ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಲಿದೆ.
ಸಭಾಭವನದ ವೇದಿಕೆಯ ಉದ್ಘಾಟನೆಯನ್ನು ಶ್ರೀಮತಿ ಲೀಲಾವತಿ ಸದಾಶಿವ ಭಂಡಾರಿ ಹೊಸ್ಮಾರು ಬಂಟ್ವಾಳ ಉದ್ಘಾಟಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪಾಡಿ , ಮಾಜಿ ಸಚಿವ ರಮಾನಾಥ ರೈ , ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀ ಸುರೇಶ್ ಭಂಡಾರಿ ಕಡಂದಲೆ , ಭಂಡಾರಿ ಮಹಾಮಂಡಲದ ಅಧ್ಯಕ್ಷ ಶ್ರೀ ಸದಾಶಿವ ಭಂಡಾರಿ ಸಕಲೇಶಪುರ ಆಗಮಿಸಲಿದ್ದಾರೆ. ಭಂಡಾರಿ ಸಮಾಜ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬಂಟ್ವಾಳ ಭಂಡಾರಿ ಸಭಾಭವನದ ಉದ್ಘಾಟನಾ ಸಮಾರಂಭದ ಶುಭ ಕಾರ್ಯಕ್ರಮಕ್ಕೆ ಸಹಕರಿಸಿ ಪ್ರೋತ್ಸಾಹಿಸ ಬೇಕಾಗಿ ಬಂಟ್ವಾಳ ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಶ್ರೀ ದಿವಾಕರ ಶಂಭೂರು ಭಂಡಾರಿ ವಾರ್ತೆಯ ಮುಖಾಂತರ ಸಮಾಜ ಬಾಂಧವರಲ್ಲಿ ವಿನಂತಿಸಿದ್ದಾರೆ.
ಗೌರವ ಅಧ್ಯಕ್ಷ ಶ್ರೀ ಬಾಬು ಭಂಡಾರಿ ಅಜೆಕಲ , ಅಧ್ಯಕ್ಷ ಶ್ರೀ ದಿವಾಕರ ಶಂಭೂರು , ಕಾರ್ಯದರ್ಶಿ ಶ್ರೀ ಸದಾಶಿವ ಭಂಡಾರಿ ನಂದೊಟ್ಟು , ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು , ಬಂಟ್ವಾಳ ಭಂಡಾರಿ ಯುವ ಘಟಕದ ಅಧ್ಯಕ್ಷ ಶ್ರೀ ಡಾ॥ ಪ್ರಶಾಂತ್ ಕಲ್ಲಡ್ಕ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು , ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ದಾಕ್ಷಾಯಿಣಿ ನಾಗೇಶ್ ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರ ನೇತೃತ್ವದಲ್ಲಿ ಹಾಗೂ ಅಲ್ಪ ಸಂಖ್ಯೆಯಲ್ಲಿರುವ ಸಮಸ್ತ ಭಂಡಾರಿ ಸಮಾಜದ ಬಂದುಗಳಿಂದಲ್ಲೇ ಶೇಕಡಾ 95 ಧನ ಸಹಾಯದ ಸಹಕಾರದೊಂದಿಗೆ ಬಂಟ್ವಾಳ ಭಂಡಾರಿ ಸಭಾಭವನ ಲೋಕಾರ್ಪಣೆಯಾಗಲಿದೆ, ಎಂಬುದು ಭಂಡಾರಿ ಸಮಾಜಕ್ಕೆ ಸಂತಸದ ಹಿರಿಮೆ.
ಸರಿಸುಮಾರು ನಲವತ್ತು ವರ್ಷ ಆಸುಪಾಸು, ಕೇವಲ ಹದಿನಾಲ್ಕು ಸೆಂಟ್ಸ್ ಜಾಗದಲ್ಲಿ ಸ್ಥಾಪಿತವಾದ ಭಂಡಾರಿ ಸುಧಾರಕ ಸಂಘ, ಕಾಲಕ್ರಮೇಣ ಭಂಡಾರಿ ಸಮಾಜ ಸಂಘ ಎಂಬ ಮರು ನಾಮಕರಣದೊಂದಿಗೆ ಇದೀಗ ಭಂಡಾರಿ ಸಭಾ ಭವನವೂ ತಲೆ ಎತ್ತಿ ನಿಂತಿದೆ. ಈ ಕಾರ್ಯದಲ್ಲಿ ಹಿರಿಯರ ಪರಿಶ್ರಮ ತ್ಯಾಗ ಹಾಗೂ ಮುಂದಿನ ಪೀಳಿಗೆಗೆ ಒಂದು ಹೊಸ ದಾರಿಯನ್ನೇ ಮಾಡಿಕೊಟ್ಟಿದೆ. ನೂತನ ಸಭಾಭವನ ಬಂಟ್ವಾಳ ತಾಲ್ಲೂಕು ಅಜಕ್ಕಳ ಬೈಪಾಸ್ ರಸ್ತೆ ಸಮೀಪ ತಲೆಎತ್ತಿದೆ.
ಭಂಡಾರಿ ಬಂಧುಗಳಿಗೆ ಮಾದರಿಯಾಗಿ ನಿರ್ಮಾಣವಾಗಿರುವ ಬಂಟ್ವಾಳ ಭಂಡಾರಿ ಸಭಾ ಭವನದ ಉದ್ಘಾಟನಾ ಸಮಾರಂಭ ಅತ್ಯಂತ ಯಶಸ್ವಿಯಾಗಿ ನಡೆದು ಮುನ್ನಡೆಯಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಹಾರ್ದಿಕವಾಗಿ ಶುಭ ಹಾರೈಸುತ್ತದೆ.
-ಭಂಡಾರಿ ವಾರ್ತೆ
Wish all the best Bantwla bhandary sangha officials and its members