January 19, 2025
bengaluru sangha
ಭಂಡಾರಿ ಸಮಾಜ ಸಂಘ ಬೆಂಗಳೂರು ಇದರ ಜೂನ್ ತಿಂಗಳ ಮಾಸಿಕ ಸಭೆ ಹೋಟೆಲ್ ಕದಂಬ ರಾಜಾಜಿನಗರ ಇಲ್ಲಿ ದಿನಾಂಕ: 02/06/2019 ರಂದು ಮದ್ಯಾಹ್ನ 3.00 ಘಂಟೆಗೆ, ಸಂಘದ ಅಧ್ಯಕ್ಷರಾದ ಶ್ರೀಯುತ ಸಾಗರ ಮಾಧವ ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯ ಪ್ರಾರಂಭಕ್ಕೆ ಸಂಘದ ಕಾರ್ಯದರ್ಶಿ ಶ್ರೀಯುತ ಸುಧಾಕರ ಆರ್ ಭಂಡಾರಿ ಯವರು ಹಾಜರಿದ್ದ ಎಲ್ಲರನ್ನೂ ಸ್ವಾಗತಿಸಿದರು.
 
ನಂತರ ಇತ್ತೀಚೆಗೆ ನಮ್ಮನಗಲಿದ ಸಮಾಜದ ಬಾಂಧವರು, ಪ್ರಮುಖವಾಗಿ ಯಕ್ಷ ದೇವರೆಂದೇ ಪ್ರಖ್ಯಾತರಾಗಿದ್ದ ಶ್ರೀಯುತ ಅನಂತರಾಮ ಬಂಗಾಡಿಯವರು ಹಾಗೂ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಶ್ರೀಯುತ ವಿಶ್ವನಾಥ ಶಾಸ್ತ್ರಿಗಳ ದಿವ್ಯಾತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷದ‌ ಗೌರವ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಅಧ್ಯಕ್ಷರ ಅನುಮತಿಯಂತೆ ಹಿಂದಿನ ಸಭೆಯ ನಡಾವಳಿಗಳನ್ನು ಓದಿ ಹೇಳಲಾಯಿತು.
 
ಚರ್ಚಿತ ವಿಷಯಗಳು:
 
1. ಪ್ರತಿ ಮಾಸಿಕ ಸಭೆಗೆ ಅಧ್ಯಕ್ಷರೂ ಸಹ ಸದಸ್ಯರಿಗೆ ಕರೆ ಮಾಡಿ ಆಹ್ವಾನ ನೀಡಬೇಕಿತ್ತು ಎಂಬ ಕೆಲ ಸದಸ್ಯರ ಸಲಹೆಯನ್ನು ಚರ್ಚಿಸಿ, ಅಧ್ಯಕ್ಷರೇ ಕರೆ ಮಾಡಬೇಕೆಂದೇನೂ ಇಲ್ಲ, ಕಮಿಟಿಯ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ ಮತ್ತು ಜಂಟೀ ಕಾರ್ಯದರ್ಶಿ ಗಳು ಎಲ್ಲ ಸದಸ್ಯರನ್ನೂ ವೈಯಕ್ತಿಕವಾಗಿ ದೂರವಾಣಿ ಕರೆ ಮಾಡಿ ಕರೆಯುವುದು ಎಂದು ತೀರ್ಮಾನಿಸಲಾಯಿತು. ಹಾಗೂ ಯಾರಿಗೇ ಆದರೂ ಸಭೆಯ ಮಾಹಿತಿ ಸಿಗದೇ ಇದ್ದರೆ ಅಂತಹವರು ಶ್ರೀಯುತ ರತ್ನಾಕರ ಭಂಡಾರಿ (9342276476) ಕದಂಬ ಹೋಟೆಲ್ ಇವರನ್ನು ಸಂಪರ್ಕಿಸಿ ಮಾಹಿತಿ ಪಡೆಯುವುದು ಎಂದು ತೀರ್ಮಾನಿಸಲಾಯಿತು.
 
 
2. ಭಸಸ – ಬೆಂಗಳೂರು ವಲಯಕ್ಕೆ ಸರದಿಯಂತೆ ಐದು ವರ್ಷಕ್ಕೊಮ್ಮೆ ಬರುವ ಕಚ್ಚೂರು ಉತ್ಸವಕ್ಕೆ ಅಗತ್ಯ ಸಂಪನ್ಮೂಲ ಸಂಗ್ರಹ ಕಾರಣ, ಉತ್ಸವ ವರುಷದಂದೇ ಅಲ್ಲದೇ ಇತರೆ ನಾಲ್ಕು ವರುಷಗಳಲ್ಲೂ ಚಟುವಟಿಕೆಯಿಂದಿರುವ ನಿಮಿತ್ತ, ಈಗಾಗಲೇ ಗುರು ಹಿರಿಯರಿಂದ ಸ್ಥಾಪಿತ ನಿರಖು ನಿಧಿಯೊಂದಿಗೆ, ಪ್ರತ್ಯೇಕ ಉಳಿತಾಯ ಖಾತೆಯೊಂದನ್ನು ತೆರೆದು, ಗೌರವಾನ್ವಿತ ಎಲ್ಲಾ ಸದಸ್ಯರು ಮತ್ತು ಘಟಕಗಳು ದೇಣಿಗೆಯನ್ನು, ಅವರವರ ಅನುಕೂಲ ಸಾಧ್ಯತೆಗೆ ಅನುಗುಣವಾಗಿ ನೇರವಾಗಿ ಖಾತೆಗೆ ಜಮಾಯಿಸಲು ಕೋರಿಕೊಳ್ಳುವ ಬಗ್ಗೆ ಹಿಂದಿನ ಸಭೆಯಲ್ಲಿ ಚರ್ಚಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬ್ಯಾಂಕ್ ಮಾರತಹಳ್ಳಿ ಶಾಖೆಯಲ್ಲಿ ಉಳಿತಾಯ ಖಾತೆ ಪ್ರಾರಂಭಿಸಿರುವುದನ್ನು ತಿಳಿಸಿ, 
 
(Account No. 1302000100090901
IFSC code. KARB0000130
Bhandary samaja sangha.
Karnataka bank. Ltd. Marathahalli. Bangalore)
 
ಮುಂಬರುವ ದಿನಗಳಲ್ಲಿ ಖಾತೆ ಮಾಹಿತಿಯನ್ನು ಎಲ್ಲಾ ಘಟಕಗಳ ಪ್ರಮುಖರ ಮೂಲಕ ವಲಯದ ಸದಸ್ಯರನ್ನೆಲ್ಲಾ ತಲುಪುವಂತೆ ವಿವರ ಮನವಿಯನ್ನು ತಲುಪಿಸಲಾಗುವುದು ಎಂದು ತಿಳಿಸಲಾಯಿತು.
 
3. ಭಸಸ – ಬೆಂಗಳೂರು ವಲಯ, ತನ್ನ ಸಭಾ ಅಂಗೀಕೃತ ಕಾರ್ಯ- ಕೋಶದ ರೀತಿಯಂತೆ, ತನ್ನ ಸಾಮಾಜಿಕ ಕಾಳಜಿಯ ಚಿಂತನೆಯ ಭಾಗವಾಗಿ, ತನ್ನ ಸದಸ್ಯರ, ಅದರಲ್ಲೂ ಸಮಾಜದ ಸಕ್ರೀಯ ಸೇವಾರ್ಥಿ ಕಾರ್ಯಕರ್ತರ, ಯೋಗ ಕ್ಷೇಮ ದ ಭಾಗವಾಗಿ ಅವರ ಅಥವಾ ಅವರ ಅವಲಂಬಿತ ಕುಟುಂಬದ ಅನಿರೀಕ್ಷಿತ ಸಂಭಾವಿತ ಸಂಕಷ್ಟಗಳ  ಸಂಧರ್ಭದಲ್ಲಿ, ಸಂಘದ ಸಾಂತ್ವನ, ಸಹಾಯದ ಉದ್ದೇಶಿತ ಚಿಂತನೆಯೊಂದನ್ನು ಹಿಂದಿನ ಸಭೆಯಲ್ಲಿ ಚರ್ಚಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಕಾರ್ಯವಿಧಾನ ಮತ್ತು ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಇಂದಿನ ಸಭೆಯಲ್ಲಿ ಶ್ರೀಯುತ ಪ್ರಕಾಶ್ ಕಟ್ಲಾ ಮತ್ತು ನಾಗೇಶ್ ಭಂಡಾರಿ ವಿಧ್ಯಾರಣ್ಯಪುರ ರವರ ನೇತೃತ್ವದಲ್ಲಿ ಯೋಜನಾ ವರದಿಗಾಗಿ ಕೋರಿಕೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಪ್ರಸ್ಥಾವನೆ ಮತ್ತು ಚರ್ಚೆಗಾಗಿ ಸಭೆಯಲ್ಲಿ ಮಂಡಿಸಲು ತೀರ್ಮಾನಿಸಲಾಯಿತು.
 
4. ಭಸಸ – ಬೆಂಗಳೂರು ವಲಯದ, ಪದಾಧಿಕಾರಿಗಳು, ಕಾರ್ಯಕಾರಿಣಿ ಸಭಾ ಸದಸ್ಯರು ಮತ್ತು ಸಾಮಾನ್ಯ ಸದಸ್ಯರ ಸೇವಾರ್ಥ ಕರ್ತವ್ಯ ಮತ್ತು ಜವಾಬ್ದಾರಿ ಕೋಶ ಸೂಚಿಯಂತೆ ಕಾರ್ಯ ನಿರ್ವಹಿಸುವ ಬಗ್ಗೆ ಸದಸ್ಯರಿಗೆ ಇನ್ನೂ ಹೆಚ್ಚಿನ ಅಗತ್ಯ ಮಾಹಿತಿಯ ಅವಶ್ಯಕತೆಗಾಗಿ ಇಂದು ಮದ್ಯಾಹ್ನ 2 ಘಂಟೆಗೆ ಸಭೆ ಕರೆದು ಚರ್ಚಿಸುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಸದಸ್ಯರ ಸಂಖ್ಯೆನಿಗದಿತ ಪ್ರಮಾಣದಲ್ಲಿ ಇರದ ಕಾರಣ ಮತ್ತು ಹಾಜರಿದ್ದ ಹೆಚ್ಚಿನ ಸದಸ್ಯರು ಒಂದು ದಿನದ ಕಾರ್ಯಾಗಾರ ಮಾಡುವ ಸಲಹೆ ನೀಡಿದ ಕಾರಣ ಮುಂದಿನ ತಿಂಗಳ ಮಾಸಿಕ ಸಭೆಯನ್ನು ವಿಶೇಷ ಮಾಸಿಕ ಸಭೆ ಎಂದು ಜುಲೈ 7 ನೇ ತಾರೀಖು ಭಾನುವಾರ ಬೆಳಗ್ಗೆ 10 ಕ್ಕೆ ಕರೆದು ಒಂದು ದಿನದ ಕಾರ್ಯಾಗಾರ ಮತ್ತು ಮಾಸಿಕ ಸಭೆಯನ್ನು ಮಾಡುವುದು ಎಂದು ತೀರ್ಮಾನಿಸಲಾಯಿತು.
ಈ ಸಭೆಗೆ ಹೆಚ್ಚಿನ ಸಂಖ್ಯೆಯ ಸದಸ್ಯರು ಹಾಜರಿರುವಂತೆ ನೋಡಿಕೊಳ್ಳುವುದು, ಇದಕ್ಕಾಗಿ ಸಂಘಟನಾ ಕಾರ್ಯದರ್ಶಿಗಳು ಎಲ್ಲಾ ಸದಸ್ಯರನ್ನೂ ವೈಯಕ್ತಿಕವಾಗಿ ಹಾಜರಾಗುವಂತೆ ಕೋರ ಬೇಕೆಂದು ತಿಳಿಸಲಾಯಿತು. ಸಭೆಗೆ ಹಾಜರಾಗುವ ಸದಸ್ಯರ ಸಂಖ್ಯೆಯನ್ನು ಮುಂಚಿತವಾಗಿ ಪಡೆದುಕೊಂಡು ಸಭೆಯ ಸ್ಥಳ ನಿಗದಿಗೊಳಿಸಿ ತಿಳಿಸುವುದೆಂದು ಚರ್ಚಿಸಲಾಯಿತು.
 
5. ಸದಸ್ಯರ ವಿವರ ಸಂಗ್ರಹ: ಈಗಾಗಲೇ ನೋಂದಾಯಿತ ಸದಸ್ಯರ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯರನ್ನು ಸಂಘಕ್ಕೆ ಸೇರಿಸಿಕೊಳ್ಳಲು ಸದಸ್ಯತ್ವ ಅರ್ಜಿ ಮುದ್ರಣ ಗೊಂಡಿದ್ದು, ಶ್ರಿಯುತ ಮಾಧವ ಭಂಡಾರಿ ಅಚ್ಲಾಡಿ, ರಾಜಶೇಖರ ಭಂಡಾರಿ ಬೆಂಗಳೂರು ಮತ್ತು ಕಾರ್ಯದರ್ಶಿ ಸುಧಾಕರ ಭಂಡಾರಿ ಪುಸ್ತಕಗಳನ್ನು ಪಡೆದು ಸದಸ್ಯರ ಮಾಹಿತಿ ಸಂಗ್ರಹಿಸುವ ಕಾರ್ಯ ಪ್ರಾರಂಭಿಸಿದರು. ಇತರ ಸದಸ್ಯರು ತಕ್ಷಣ ಕಾರ್ಯಪ್ರವೃತ್ತರಾಗಿ ತಮ್ಮ ಆಸುಪಾಸು ಮತ್ತು ಕ್ಷೇತ್ರದಲ್ಲಿ ಇರುವ ಸದಸ್ಯರ ಮಾಹಿತಿಯನ್ನು ಅಧ್ಯಕ್ಷರು ಅಥವಾ ಕಾರ್ಯದರ್ಶಿಗಳಿಂದ ಅರ್ಜಿ ಪುಸ್ತಕಗಳನ್ನು ಪಡೆದು ಮಾಹಿತಿ ಸಂಗ್ರಹಣೆ ಪ್ರಾರಂಭಿಸಲು ವಿನಂತಿಸಲಾಯಿತು. 
 
ಈಗಾಗಲೇ ಸದಸ್ಯರಾಗಿರುವವರಲ್ಲಿ ಹೆಚ್ಚಿನ  ರೂಪಾಯಿ 250/- ಹಾಗೂ ಹೊಸ ಸದಸ್ಯರ ನೋಂದಾವಣೆ ಶುಲ್ಕ ರೂಪಾಯಿ 500/- ಶುಲ್ಕಕ್ಕಾಗಿ ಪ್ರಾಥಮಿಕ ಪ್ರಸ್ಥಾವನೆ ಮಂಡಿಸಲಾಗಿ, ಮುಂದಿನ ಮಾಸಿಕ ಸಭೆಯಲ್ಲಿ ಈ ದಿಸೆಯಲ್ಲಿ  ಅಂತಿಮ ತೀರ್ಮಾನ ತೆಗೆದುಕೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
 
6. ಭಸಸ – ಬೆಂಗಳೂರು ಸಂಘದ ಮಾನ್ಯತಾ ನವೀಕರಣ ತಥಾ ಹೊಸ ನೋಂದಾವಣಿಗೆ ಅಗತ್ಯ ಕ್ರಮಗಳ ಪೂರಕವಾಗಿ ಪದಾಧಿಕಾರಿಗಳ, ಕಾರ್ಯಕಾರಿ ಸದಸ್ಯರ ಭಾವಚಿತ್ರ, ವಿಳಾಸ ವಿವರ ಮತ್ತು ವಿಳಾಸ ದೃಢಿಕರಣ ಗುರುತು ಚೀಟಿಗಾಗಿ ಮನವಿ ಮಾಡಿಕೊಳ್ಳಲಾಗಿ, ಎಲ್ಲರೂ ಸಂಘದ ಹಿತಕ್ಷೇಮದ ಈ ವಿಷಯದಲ್ಲಿ ಸಹಕರಿಸುವಂತೆ ವಿನಂತಿಸಲಾಯಿತು.
 
7. ಸಂಘದ ಮೂಲಕ ನಮ್ಮ ಸಮಾಜವು ತನ್ನ ಸಾಮಾಜಿಕ ಕಳಕಳಿಯ ಭಾಗವಾಗಿ ಇತರೆ ಸಮಾಜದ ಆಯ್ದ ಅವಶ್ಯಕ ಅನುಕೂಲತೆಗಾಗಿ ಶ್ರೀಯುತ ಸದಾನಂದ ರವರ ಸಲಹೆಯನ್ನು ಚರ್ಚಿಸಿ ಇಂತಹ ಕಾರ್ಯಮಾಡಲು ನಮಗೆ ಮೊದಲು ಸಂಘದ ನವೀಕರಣ ಮತ್ತು ದಾಖಲೆಗಳ ಕ್ರೋಢೀಕರಣದ ಮಹತ್ವವನ್ನು ಸಭೆಗೆ ತಿಳಿಸಿ ಆದಷ್ಟು ಬೇಗ ಎಲ್ಲಾ ಮಾಜಿ ಮತ್ತು ಹಾಲಿ ಸದಸ್ಯರು ಸಹಕರಿಸುವಂತೆ ಕೋರಲಾಯಿತು.
 
8. ಸಂಘದ ಮೂಲಕ ಸ್ಥಾಪಿತ ವಿದ್ಯಾನಿಧಿಗೆ ತಮ್ಮ ನಿರಂತರ ಪ್ರೋತ್ಸಾಹ ಮತ್ತು ಶ್ರೇಷ್ಠ ದಾನದ ಮೂಲಕ ತಲುಪುತ್ತಿರುವ ಶ್ರೀಯುತ ನೆಸ್ಟ್ಲೆ  ಸಂಜೀವ ಭಂಡಾರಿ ಮತ್ತು ಕುಟುಂಬ ಕಳೆದ ತಿಂಗಳು ನೀಡಿದ ರೂಪಾಯಿ 25,000/- ದೇಣಿಗೆಗಾಗಿ ಸಭೆ ಗೌರವದ ವಂದನೆಗಳೊಂದಿಗೆ ಸಮಸ್ಥ ಸಮಾಜದ ಧನ್ಯವಾದಗಳನ್ನು ಮತ್ತು ಶುಭ ಹಾರೈಕೆಗಳನ್ನು ದಾಖಲಿಸಲಾಯಿತು. 
 
ಲಘು ಉಪಹಾರದ ನಂತರ, ಕಾರ್ಯದರ್ಶಿಗಳ ವಂದನಾರ್ಪಣೆಯೊಂದಿಗೆ ಸಭೆಯನ್ನು ಕೊನೆಗೊಳಿಸಲಾಯಿತು.
 
ಧನ್ಯವಾದಗಳು.
 
 
-BSS Bengaluru

Leave a Reply

Your email address will not be published. Required fields are marked *