January 18, 2025
Unmtitled-1

ಬಂಧುಗಳೇ

              ಪ್ರತೀ ವರ್ಷದ ಪದ್ಧತಿಯಂತೆ ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯವು ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಶೇಕಡಾ 90 ಕ್ಕಿಂತ ಅಧಿಕ ಅಂಕ ಗಳಿಸಿರುವ ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯಕ್ಕೆ ಸೇರಿರುವ ವಿದ್ಯಾರ್ಥಿ /ವಿದ್ಯಾರ್ಥಿನಿಯರನ್ನು ಡಿಸೆಂಬರ್ 25, 2018 ರ ಸಂಘದ ವಾರ್ಷಿಕ ಮಹಾಸಭೆಯಂದು ಸನ್ಮಾನಿಸಲಿದೆ.

               ಅದಲ್ಲದೇ ಕಳೆದ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಪಿ ಯು ಸಿ ಯಲ್ಲಿ ಅತ್ಯಂತ ಅಧಿಕ ಅಂಕ ಗಳಿಸಿರುವ ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯಕ್ಕೆ ಸೇರಿರುವ ಒಬ್ಬ ಅರ್ಹ ಬಡ ವಿದ್ಯಾರ್ಥಿ /ವಿದ್ಯಾರ್ಥಿನಿಗೆ ಸಂಘದ ಮಾಜಿ ಅಧ್ಯಕ್ಷರಾದ ಬಿ . ಕೆ ಭಂಡಾರಿ ಯವರು ತಮ್ಮ ತಂದೆ ಮತ್ತು ತಾಯಿ ದಿವಂಗತ ಉಡುಪಿ ಕಾಡಬೆಟ್ಟು ಸೋಮಯ್ಯ ಭಂಡಾರಿ ಮತ್ತು ಸೀತಾ ಸೋಮಯ್ಯ ಭಂಡಾರಿ ಯವರ ಸ್ಮರಣಾರ್ಥ ವಿಶೇಷ ಗೌರವ ಧನವನ್ನು ಡಿಸೆಂಬರ್ 25 , 2018 ರಂದು ನಡೆಯುವ ಸಂಘದ ವಾರ್ಷಿಕ ಮಹಾಸಭೆಯಂದು ವಿತರಿಸಲಿದ್ದಾರೆ .

               ಸಂಬಂಧ ಪಟ್ಟ ವಿದ್ಯಾರ್ಥಿಗಳ ಪೋಷಕರು ಸಂಘದ ಈ ಕೆಳಗಿನ ಪದಾಧಿಕಾರಿಗಳನ್ನು ಡಿಸೆಂಬರ್ 20 ರ ಒಳಗಡೆ ಸಂಪರ್ಕಿಸಬೇಕು…

ಉಮೇಶ್.ಎ.
ಅಧ್ಯಕ್ಷರು,ಭಂಡಾರಿ ಸಮಾಜ ಸಂಘ.ಬೆಂಗಳೂರು ವಲಯ.
ಮೊಬೈಲ್ : 9845930803

ಪ್ರಸಾದ್ ಮುನಿಯಾಲ್.
ಕಾರ್ಯದರ್ಶಿಗಳು,ಭಂಡಾರಿ ಸಮಾಜ ಸಂಘ,ಬೆಂಗಳೂರು ವಲಯ
ಮೊಬೈಲ್ : 9886747707

Leave a Reply

Your email address will not be published. Required fields are marked *