ಬಂಟ್ವಾಳ ; ಭಂಡಾರಿ ಸಮಾಜ ಸಂಘ ಮತ್ತು ಭಂಡಾರಿ ಯುವ ವೇದಿಕೆ ಹಾಗೂ ಭಂಡಾರಿ ಮಹಿಳಾ ಘಟಕ ಬಂಟ್ವಾಳ ಇದರ ನೇತೃತ್ವದಲ್ಲಿ ಬಂಟ್ವಾಳ ಭಂಡಾರಿ ಸಭಾಭವನದ ವಾರ್ಷಿಕ ಸಂಭ್ರಮಾಚರಣೆ ಮತ್ತು ಸಂಘದ ಮಹಾಸಭೆಯು ಡಿಸೆಂಬರ್ 15 ನೇ ಮಂಗಳವಾರದಂದು ಮುಂಜಾನೆ ಗಣಹೋಮ ಶ್ರೀ ಸತ್ಯನಾರಾಯಣ ದೇವರ ಪೂಜೆ ಪ್ರಸಾದ ವಿತರಣೆಯ ಬಳಿಕ ಕಾವ್ಯ ಶ್ರೀಕಾಂತ್ ಭಂಡಾರಿ , ಸುಜಯ ಕೃಷ್ಣ ಭಂಡಾರಿ , ದಾಕ್ಷಾಯಿಣಿ ನಾಗೇಶ್ ಭಂಡಾರಿ ಯವರ ಪ್ರಾರ್ಥನೆಯೊಂದಿಗೆ ಮಧ್ಯಾಹ್ನ ಗಂಟೆ 11:30 ಕ್ಕೆ ಸಂಘದ ಅಧ್ಯಕ್ಷ ಗೋಪಾಲ ಭಂಡಾರಿ ಕಕ್ಕೆಪದವು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಜ್ಯ ಪೊಲೀಸ್ ಇಲಾಖೆಗೆ ಸಬ್ ಇನ್ಸ್ ಪೆಕ್ಟರ್ ಆಗಿ ಮಹಿಳಾ ವಿಭಾಗದಿಂದ ರಾಜ್ಯಮಟ್ಟದಲ್ಲಿ ಎರಡನೇ ಸ್ಥಾನ ಪಡೆದು ಆಯ್ಕೆಗೊಂಡ ಕು॥ ನಿಧಿ ಬಿ.ಎನ್. ಮತ್ತು ವಿಜಯ ಬ್ಯಾಂಕಿನ ನಿವೃತ್ತ ಸೀನಿಯರ್ ಮೆನೇಜರ್ ದಿವಾಕರ ಶಂಭೂರು ದಂಪತಿಯನ್ನುಸನ್ಮಾನಿಸಲಾಯಿತು. ಬಂಟ್ವಾಳ ಎಸ್. ವಿ.ಎಸ್ .
ಕಾಲೇಜಿನ ನಿವೃತ್ತ ಉಪನ್ಯಾಸಕ ಪೊ॥ ನಾರಾಯಣ ಭಂಡಾರಿ ಬಂಟ್ವಾಳ ಬಿಎಸ್ಸೆನ್ನೆಲ್ ನಿವೃತ್ತ ಕಚೇರಿ ಅಧೀಕ್ಷಕಿ ಯಶೋದಾ ನಾರಾಯಣ ಭಂಡಾರಿ ಮೆಸ್ಕಾಂನ ನಿವೃತ್ತ ಪವರ್ ಮ್ಯಾನ್ ಭಾಸ್ಕರ ಭಂಢಾರಿ ನೇರಳಕಟ್ಟೆ ಕೆಎಸ್ ಆರ್ ಟಿಸಿಯ ನಿವೃತ್ತ ಸಹಾಯಕ ಸಂಚಾರಿ ನಿಯಂತ್ರಕ ಜಯರಾಮ ಭಂಡಾರಿ ಬಂಟ್ವಾಳ . ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ದೇವರಾಜ್ ಭಂಡಾರಿ ನರಿಕೊಂಬು ನಿವೃತ್ತ ಸೈನಿಕ ನಾಗೇಶ್ ಭಂಡಾರಿ ಬಂಟ್ವಾಳ ಇವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ ಭಂಡಾರಿ ಸಮಾಜ ಸಂಘದ ಗೌರವ ಅಧ್ಯಕ್ಷ ದಿವಾಕರ ಶಂಭೂರು ಮತ್ತು ಕಾರ್ಯದರ್ಶಿ ಜಯರಾಮ ಭಂಡಾರಿ , ಯುವ ವೇದಿಕೆಯ ಅಧ್ಯಕ್ಷ ರಮೇಶ್ ಭಂಡಾರಿ ಮೈರಾನ್ ಪಾದೆ , ಮಹಿಳಾ ಸಂಘದ ಅಧ್ಯಕ್ಷೆ ಜಯಶ್ರೀ ಸುರೇಶ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಯಾವುದಾದರೂ ಒಂದು ಕ್ಷೇತ್ರದಲ್ಲಿ ಗುರಿಯನ್ನು ಇಟ್ಟುಕೊಂಡು ಪರಿಶ್ರಮದಿಂದ ಸಾಧನೆಯನ್ನು ಮಾಡಿದಾಗ ಮಾತ್ರ ಗುರಿ ತಲುಪಲು ಸಾಧ್ಯ, ಐಎಎಸ್ ಅಧಿಕಾರಿ ಆಗಬೇಕು ಎಂದು ಕನಸು ಕಂಡವಳು ನಾನು ಇದೀಗ ಕೆಎಎಸ್ ಪರೀಕ್ಷೆ ಬರೆದು ಪ್ರಿಲಿಮ್ಸ್ ಪಾಸ್ ಮಾಡಿ ಇದರ ಮಧ್ಯದಲ್ಲಿ ಪೊಲೀಸ್ ಇಲಾಖೆಗೆ ಸಬ್ಇನ್ಸ್ಪೆಕ್ಟರ್ ಆಗಿ ಆಯ್ಕೆಗೊಂಡಿದ್ದೇನೆ . ಪೊಲೀಸ್ ಇಲಾಖೆಗೆ ಯಾರಿಗಾದ್ರೂ ಸೇರಬೇಕೆಂಬ ಹಂಬಲ ಇದ್ದರೆ ನನ್ನಲ್ಲಿರುವ ತಿಳುವಳಿಕೆಯನ್ನು ತಿಳಿಸಲು ಸದಾ ಬದ್ಧನಾಗಿದ್ದೇನೆ ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಆಯ್ಕೆಗೊಂಡಿರುವ ನಿಧಿ ಬಿ.ಎನ್. ಹೇಳಿದರು . ಸನ್ಮಾನಿತರ ಪರವಾಗಿ ದಿವಾಕರ ಶಂಭೂರು , ಯಶೋಧ ನಾರಾಯಣ್ ಭಂಡಾರಿ ಸಭೆಯನ್ನುದ್ದೇಶಿಸಿ ಮಾತನಾಡಿದರು
ಸಮಾಜ ಭವನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶುಭ ಕಾರ್ಯಕ್ರಮಗಳನ್ನು ನಡೆಸಿ ಸಮಾಜದ ಎಲ್ಲಾ ಮಕ್ಕಳು ಉನ್ನತ ವಿದ್ಯಾಭ್ಯಾಸವನ್ನು ಪಡೆದು ಸಮಾಜಕ್ಕೆ ಮಾದರಿಯಾಗಬೇಕು ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಸಂಘವು ಸಂಘಟನೆಗೆ ಹೆಚ್ಚಿನ ಮಹತ್ವ ನೀಡಿ ಯಾವುದೇ ಭಿನ್ನಾಭಿಪ್ರಾಯ ವ್ಯಕ್ತಪಡಿಸಬಾರದು. ಲೌಕ್ ಡೌನ್ ಸಮಯದಲ್ಲಿ ಕಿಟ್ ನೀಡಲು ಸಹಕರಿಸಿದ ಹಾಗೂ ಸಂಘದ ಅಭಿವೃದ್ಧಿಗಾಗಿ ದುಡಿದ ಎಲ್ಲ ಸದಸ್ಯರಿಗೂ ಮತ್ತು ಬಂಧುಗಳಿಗೆ ಧನ್ಯವಾದಗಳು ಎಂದು ಸಂಘದ ಅಧ್ಯಕ್ಷ ಗೋಪಾಲ್ ಭಂಡಾರಿ ಕಕ್ಕೆಪದವು ಹೇಳಿದರು.ನಾರಾಯಣ ಭಂಡಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಜಯರಾಮ ಭಂಡಾರಿ ಮಂಡಿಸಿದರು, ವಾರ್ಷಿಕ ಲೆಕ್ಕಪತ್ರವನ್ನು ಚಂದ್ರಶೇಖರ ಭಂಡಾರಿ ಮಂಡಾಡಿ ಮಂಡಿಸಿದರು , ದಿವ್ಯ ಲತಾ ಭಾಸ್ಕರ ಭಂಡಾರಿ ಕಾರ್ಯಕ್ರಮ ನಿರೂಪಿಸಿ. ಶ್ರೀಕಾಂತ್ ಭಂಡಾರಿ ಪಾಣೆಮಂಗಳೂರು ಧನ್ಯವಾದವಿತ್ತರು.
—–ಭಂಡಾರಿ ವಾರ್ತೆ