January 18, 2025
BSS-bengaluru2019

ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯ ವಾರ್ಷಿಕ ಮಹಾಸಭೆ ಮತ್ತು ಕೌಟುಂಬಿಕ ಸ್ನೇಹ ಕೂಟವು ನಾಳೆ ಡಿಸೆಂಬರ್ 25 ರ ಶನಿವಾರ ಬೆಳಿಗ್ಗೆ ಗಂಟೆ 10 ರಿಂದ ಸಂಜೆ 4 ರ ವರೆಗೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ಹೋಟೆಲ್ ಕದಂಬ ದಲ್ಲಿ ನಡೆಯಲಿದೆ.


ಕೋವಿಡ್ ನ ಅನಿಶ್ಚಿತತೆಯ ಕಾರಣದಿಂದ ಕಳೆದ ವರ್ಷ ಕಾರ್ಯಕ್ರಮವನ್ನು ನಡೆಸಲು ಅಸಾಧ್ಯವಾಗಿತ್ತು.
ಈ ಬಾರಿ ಪದಾಧಿಕಾರಿಗಳ ಆಯ್ಕೆಯು ನಡೆಯಲಿದ್ದು , ಮದ್ಯಾಹ್ನ 2 ರಿಂದ ಸಭಾ ಕಾರ್ಯಕ್ರಮ ಜರಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷರಾದ ಶ್ರೀ ಲಕ್ಷ್ಮಣ್ ಕರಾವಳಿಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡಾ . ಉಷಾ ತ್ಯಾಗರಾಜ್ ಭಾಗವಹಿಸಲಿದ್ದಾರೆ .


ಈ ಬಾರಿ ಸಮಾಜದ ಮೂವರನ್ನು ಸಂಘ ಸನ್ಮಾನಿಸಿ ಗೌರವಿಸಲಿದ್ದು, ಶಿರಾಳಕೊಪ್ಪ ಸಮುದಾಯ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿಯಾಗಿರುವ ಡಾ. ನಿಧಿ ಆರ್ ಮತ್ತು ಪುಷ್ಪ ನರ್ಸಿಂಗ್ ಬೆಂಗಳೂರು ಇಲ್ಲಿಯ ತಜ್ಞ ವೈದ್ಯ ಡಾ . ಅನೀಶ್. ಟಿ ಹಾಗೂ ನಮ್ಮ ಸಮಾಜದ ಹಿರಿಯ ವೃತ್ತಿ ಬಾಂಧವರು ಶ್ರೀ ಗೋಪಾಲ ಭಂಡಾರಿ ಶಿರಾಳಕೊಪ್ಪ ರವರು ಸಂಘದ ಮೂಲಕ ಸನ್ಮಾನಿಸಲ್ಪಡಲಿದ್ದಾರೆ.


ಅಲ್ಲದೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ ವೈಷ್ಣವಿ ಎಸ್ ಭಂಡಾರಿ ಶಿರಾಳಕೊಪ್ಪ ಮತ್ತು ಸುಶಾಂತ್ ಭಂಡಾರಿ ಕೊಪ್ಪ ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸಂಘ ಗೌರವಿಸಲಿದೆ.

ಬೆಂಗಳೂರು ವಲಯದಲ್ಲಿರುವ ಸಮಾಜದ ಬಂಧುಗಳು ಕುಟುಂಬ ಸಮೇತರಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘ ಮನವಿ ಮಾಡಿದೆ .

https://goo.gl/maps/eWnFpdUqqhMu5nvG7

ಮಹಾ ಸಭೆ ಮತ್ತು ಕೌಟುಂಬಿಕ ಸ್ನೇಹ ಕೂಟ ನಡೆಯುವ ಹೋಟೆಲ್ ಕದಂಬ ರಾಜಾಜಿನಗರ ಇಲ್ಲಿಯ ರೋಡ್ ಮ್ಯಾಪ್

-ಭಂಡಾರಿ ವಾರ್ತೆ 

Leave a Reply

Your email address will not be published. Required fields are marked *