
ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ 2019 ನೇ ಸಾಲಿನ ವಾರ್ಷಿಕ ಮಹಾಸಭೆ ಮತ್ತು ಕೌಟುಂಬಿಕ ಸ್ನೇಹಕೂಟ ಈ ಬಾರಿ ಪರ್ಯಾಯ ಪದ್ಧತಿಯಂತೆ ಸೊರಬ-ಶಿರಾಳಕೊಪ್ಪ ಘಟಕದ ಆತಿಥ್ಯದಲ್ಲಿ ಶಿರಾಳಕೊಪ್ಪದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಮುದಾಯ ಭವನದಲ್ಲಿ ಡಿಸೆಂಬರ್ 25,2019 ರ ಬುಧವಾರ ವಿಜೃಂಭಣೆಯಿಂದ ನೆರವೇರಿತು.



ಈ ಬಾರಿ ವಿಶೇಷವಾಗಿ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಮುದಾಯ ಭವನದ ಸಭಾಂಗಣ ಹಸಿರು ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು.ಶುಭ ಮುಂಜಾನೆಯ ಸಮಯ 8:30 ಕ್ಕೆ ಸರಿಯಾಗಿ ವೇದಿಕೆಯ ಬಲಭಾಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕಚ್ಚೂರು ಶ್ರೀ ನಾಗೇಶ್ವರ ಮತ್ತು ಶ್ರೀ ಕೃಷ್ಣ ಪರಮಾತ್ಮರಿಗೆ ಘಟಕದ ಅಧ್ಯಕ್ಷರಾದ ಶ್ರೀ ಜೋಗು ಭಂಡಾರಿಯವರು,ಬೆಂಗಳೂರು ವಲಯ ಅಧ್ಯಕ್ಷರಾದ ಶ್ರೀ ಮಾಧವ ಭಂಡಾರಿ ಸಾಗರ,ಶ್ರೀ ಲಕ್ಷ್ಮಣ್ ಕರಾವಳಿ,ಶ್ರೀ ಸುಧಾಕರ ಬನ್ನಂಜೆ, ಶ್ರೀ ಶೇಖರ್ ಭಂಡಾರಿ ಕಾರ್ಕಳ,ಶ್ರೀ ಪ್ರಕಾಶ್ ಭಂಡಾರಿ ಕಟ್ಲ,ಸೊರಬ-ಶಿರಾಳಕೊಪ್ಪ ಘಟಕದ ಕಾರ್ಯದರ್ಶಿಯಾದ ಶ್ರೀ ಸತೀಶ್ ಭಂಡಾರಿ ಸೊರಬ,ಕೋಶಾಧಿಕಾರಿ ಶ್ರೀ ನಾಗರಾಜ್ ಭಂಡಾರಿ,ಸೊರಬ-ಶಿರಾಳಕೊಪ್ಪ ಘಟಕದ ಮಾಜಿ ಅಧ್ಯಕ್ಷರುಗಳಾದ ಶ್ರೀ ರಘು ಭಂಡಾರಿ ಸೊರಬ,ಶ್ರೀ ಗಣೇಶ್ ಭಂಡಾರಿ ಮುಂತಾದ ಗಣ್ಯರು ದೀಪ ಬೆಳಗಿ, ಪೂಜಿಸುವುದರೊಂದಿಗೆ ಸಭೆ ಆರಂಭಗೊಂಡಿತು.ಸೊರಬದ ಭಂಡಾರಿ ಬಂಧು ಹಿಂದೂಸ್ಥಾನಿ ಸಂಗೀತದ ಗುರುಗಳಾದ ಶ್ರೀ ಪ್ರವೀಣ್ ಭಂಡಾರಿಯವರು ಶಿರಾಳಕೊಪ್ಪದ ಶ್ರೀಮತಿ ಗೀತಾ ಸುಧಾಕರ್ ಭಂಡಾರಿಯವರು ರಚಿಸಿದ ಕಚ್ಚೂರು ಶ್ರೀ ನಾಗೇಶ್ವರ ರ ಭಕ್ತಿ ಗೀತೆಯನ್ನು ಹಾಡುವುದರೊಂದಿಗೆ ಪ್ರಾರ್ಥನೆ ನೆರವೇರಿಸಿದರು.


ವೇದಿಕೆಯ ಮೇಲೆ ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಶ್ರೀ ಸಾಗರ ಮಾಧವ ಭಂಡಾರಿಯವರು,ಕಾರ್ಯದರ್ಶಿಗಳಾದ ಶ್ರೀ ಸುಧಾಕರ್ ಭಂಡಾರಿಯವರು,ಕೋಶಾಧಿಕಾರಿಗಳಾದ ಶ್ರೀ ಕುಶಾಲ್ ಕುಮಾರ್ ರವರು ಉಪಸ್ಥಿತರಿದ್ದರು.ಮೊದಲಿಗೆ ಕಾರ್ಯದರ್ಶಿಗಳಾದ ಶ್ರೀ ಸುಧಾಕರ್ ಭಂಡಾರಿಯವರು ವಾರ್ಷಿಕ ವರದಿ ವಾಚನ ಮಾಡಿದರು.ನಂತರ ಕೋಶಾಧಿಕಾರಿಗಳಾದ ಶ್ರೀ ಕುಶಾಲ್ ಕುಮಾರ್ ಅವರು ವಾರ್ಷಿಕ ಲೆಕ್ಕಪತ್ರ,ಆಯವ್ಯಯ ಮಂಡನೆ ಮಾಡಿ ಸಭೆಯ ಅನುಮೋದನೆ ಪಡೆದರು.
ಆನಂತರದಲ್ಲಿ ಮಾತನಾಡಿದ ಅಧ್ಯಕ್ಷರಾದ ಶ್ರೀ ಸಾಗರ ಮಾಧವ ಭಂಡಾರಿಯವರು…”1988 ರ ಸಮಯದಲ್ಲಿ ಬೆಂಗಳೂರಿನಲ್ಲಿ ಭಂಡಾರಿ ಸಮಾಜಕ್ಕೊಂದು ಸಂಘಟನೆಯ ಅವಶ್ಯಕತೆಯರಿತು ತುಳುನಾಡಿನ ನಾಲ್ಕಾರು ಭಂಡಾರಿ ಬಂಧುಗಳು ಒಗ್ಗೂಡಿ ಸಮಾಜಕ್ಕೆ “ಭಂಡಾರಿ ಸಮಾಜ ಸಂಘ” ಎಂಬ ಚಿಂತನೆಯನ್ನು ವಾಸ್ತವಿಸಿಕೊಟ್ಟ ಎಲ್ಲ ಗುರು-ಹಿರಿಯ,ಕಿರಿಯ,ಸಹ ಸದಸ್ಯರುಗಳಿಗೆ,ಬಂಧುಗಳಿಗೆ ಗೌರವ ಪೂರ್ವಕ ವಂದನೆಗಳು.








1991-93 ರ ಕಾಲಘಟ್ಟದಲ್ಲಿ ಕರಾವಳಿ ಭಾಗದ ಭಂಡಾರಿ ಸಮಾಜದಲ್ಲಿ ಒಂದು ಸಂಚಲನವನ್ನೇ ಉಂಟು ಮಾಡಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ತಲೆ ಎತ್ತಿ,ಅದರ ಶ್ರೇಷ್ಠ ಸಾಧನೆಗಾಗಿ ‘ಭಂಡಾರಿ ಸಮಾಜ ಸಂಘ ಬೆಂಗಳೂರು” ಸ್ಥಾಪಿತವಾಗಿ ಕ್ರಮೇಣ 2007 ರಲ್ಲಿ ಎಲ್ಲಾ ವಲಯವಾರು ಸಂಘಗಳ ಗುರುತಿಸುವಿಕೆಯೊಂದಿಗೆ “ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘ” ಸಾಕಾರಗೊಂಡು ಒಂದು ಸಾವಿರಕ್ಕೂ ಹೆಚ್ಚಿನ ನೋಂದಾಯಿತ ಸದಸ್ಯರನ್ನು ಒಳಗೊಂಡು,ಭೌಗೋಳಿಕವಾಗಿ 630 ಕಿಲೋಮೀಟರ್ ಸೇವಾ ವ್ಯಾಪ್ತಿಯನ್ನು ಹೊಂದಿ,3600 ಕ್ಕೂ ಹೆಚ್ಚಿನ ಬಂಧುಗಳನ್ನು ತಲುಪಿ,ಕಳೆದ ಒಂದು ದಶಕದಲ್ಲಿ 536 ಕ್ಕೂ ಹೆಚ್ಚಿನ ಮಕ್ಕಳಿಗೆ ವಿದ್ಯಾ ಪ್ರೋತ್ಸಾಹ ರೂಪದಲ್ಲಿ 10,68000/ ರೂಗಳನ್ನು ನೀಡಿದೆ.ಇದೆಲ್ಲವೂ ಸಾಧ್ಯವಾಗಿದ್ದು ದೂರದೃಷ್ಟಿಯಿಂದ ಭದ್ರ ಅಡಿಪಾಯ ಹಾಕಿದ ಸಮಾಜದ ಹಿರಿಯರಿಂದ. ಈ ಸಂಘದ ಸೇವಾರ್ಥಿಗಳಾಗಿ ಸಂಘದ ಮಾನ-ಸಮ್ಮಾನ,ಅಭಿಮಾನ-ಸ್ವಾಭಿಮಾನ,ಗೌ ರವ,ಬದ್ಧತೆ-ಶುದ್ಧತೆಯನ್ನು ಕಾಪಾಡುವುದು ಮತ್ತು ಹೆಚ್ಚಿಸುವುದಕ್ಕೆ ನಾವು ಕಟಿಬದ್ಧರಾಗಿದ್ದೇವೆ.ದಯಮಾಡಿ ಸಂಘದ ಸಮಾಜದ ಅವಶ್ಯಕತೆಗಳಿಗಾಗಿ ಸೇವೆ ಮಾಡಿ ಮತ್ತು ಸೇವೆ ಮಾಡಲು ಅವಕಾಶ ಮಾಡಿಕೊಡಿ.ಧನ್ಯವಾದಗಳು.” ಎಂದು ನುಡಿದರು.
ವರದಿ: ಭಾಸ್ಕರ ಭಂಡಾರಿ ಶಿರಾಳ ಕೊಪ್ಪ
It’s a nice get to gather. Sukhbir Sain saroya
9728451011
Thanks for the report