January 18, 2025
IMG-20190806-WA0053.jpg

ಭಂಡಾರಿ ಸಮಾಜ ಸಂಘ ಬೆಂಗಳೂರು ಇದರ ಆಗಸ್ಟ್  ಮಾಸಿಕ ಸಭೆ ಸಂಘದ ಅಧ್ಯಕ್ಷರಾದ ಶ್ರೀಯುತ ಸಾಗರ ಮಾಧವ ಭಂಡಾರಿಯವರ ಅಧ್ಯಕ್ಷತೆಯಲ್ಲಿ ಹೋಟೆಲ್ ಕದಂಬ ರಾಜಾಜಿನಗರ ಬೆಂಗಳೂರು ಇಲ್ಲಿ ದಿನಾಂಕ: 04/08/2019 ರಂದು ಮದ್ಯಾಹ್ನ 3.00 ಘಂಟೆಗೆ ಜರುಗಿತು.

ಸಂಘದ ಕಾರ್ಯದರ್ಶಿ ಶ್ರೀಯುತ ಸುಧಾಕರ ಆರ್ ಭಂಡಾರಿ ಯವರು ಹಾಜರಿದ್ದ ಎಲ್ಲರನ್ನೂ ಸ್ವಾಗತಿಸಿದರು. ನಂತರ ಇತ್ತೀಚೆಗೆ ನಮ್ಮನ್ನಗಲಿದ ಸಮಾಜದ ಬಂಧುಗಳ ದಿವ್ಯಾತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷದ‌ ಗೌರವ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. 

ಅಧ್ಯಕ್ಷರ ಅನುಮತಿಯಂತೆ ಹಿಂದಿನ ಸಭೆಯ ನಡಾವಳಿಗಳನ್ನು ಸಭೆಗೆ ಓದಿ ಹೇಳಲಾಯಿತು. 

 

ಹಿಂದಿನ ಸಭೆಯ ನಡಾವಳಿಗಳನ್ನು ಆಲಿಸಿದ ಶ್ರೀ ಲಕ್ಷ್ಮಣ ಕರಾವಳಿಯವರು “ಹಿಂದಿನ ಸಭೆ ಬಹಳ ಮಹತ್ವದ್ದಾಗಿತ್ತು ಕಾರಣ ಸಮಾಜದ ಹೆಮ್ಮೆ, ಗೌರವದ ಬಂಧು ಶ್ರೀಯುತ ಹೆಬ್ರಿ ಗೋಪಾಲ ಭಂಡಾರಿಯವರ ಅಕಾಲಿಕ ನಿಧನದ ಎರಡೇ ದಿನಗಳ ಹಿನ್ನೆಲೆಯಲ್ಲಿ…ವಲಯದ ಸುಮಾರು 140 ಕ್ಕೂ ಹೆಚ್ಚು ಭಂಡಾರಿ ಬಂಧುಗಳು ತಮ್ಮ ಗೌರವ ಶ್ರದ್ಧಾಂಜಲಿಯನ್ನು ಒಂದೆಡೆ ಸೇರಿ ಸಮರ್ಪಿಸಿದರು.ಆದರೆ ಇಂತಹ ಪ್ರಮುಖ ವಿಷಯ ಸಮಾಜದ ಪತ್ರಿಕೆಯಾದ “ಕಚ್ಚೂರು ವಾಣಿ” ಯಲ್ಲಿ ಪ್ರಸಾರಗೊಂಡಿಲ್ಲ, ಕಾರಣವೇನು?” ಎಂದು ಪ್ರಶ್ನಿಸಿದರು.

 “ಇತ್ತೀಚಿನ ದಿನಗಳಲ್ಲಿ ನಮ್ಮ ವಲಯದ ಸಭೆಯ ಯಾವುದೇ ಸಮಾಚಾರಗಳು ಪತ್ರಿಕೆಯಲ್ಲಿ ಪ್ರಸಾರವಾಗುತ್ತಿಲ್ಲ ಆದಕಾರಣ ನಾವು ಸುದ್ಧಿಯನ್ನು ಅವರಿಗೆ ತಲುಪಿಸಿಲ್ಲ” ಎಂದು ತಿಳಿಸಲಾಯಿತು. ಅದಕ್ಕೆ ಅವರು ಇದು ಸರಿ ಅಲ್ಲ,  ಸಮಾಜದ, ಸಂಘಟನೆಗಳ ಸುದ್ದಿ, ವರದಿಗಳು ಸಮಾಜದ ಪತ್ರಿಕೆಯಲ್ಲಿ ಪ್ರಕಟವಾಗದಿರುವುದರ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು.

 

ಇದಕ್ಕೆ ಪೂರಕವಾಗಿ, ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯ ಪ್ರತಿ ವರ್ಷ ಕೊಡ ಮಾಡುವ ವಿದ್ಯಾರ್ಥಿ ಪ್ರೋತ್ಸಾಹ ನಿಧಿಯ ಸುದ್ಧಿಯನ್ನು ಪತ್ರಿಕೆಗೆ ಕಳುಹಿಸಿದ್ದರೂ ಅದೂ ಕೂಡ ಪ್ರಸಾರವಾಗಿಲ್ಲ ಎಂದು ಶ್ರೀ ಉಮೇಶ್ ಎ. ಮತ್ತು ಕುಶಲ್ ಭಂಡಾರಿಯವರು ಬೇಸರ ವ್ಯಕ್ತಪಡಿಸಿದರು. ಅದಕ್ಕೆ ಕಾರ್ಯದರ್ಶಿ ಶ್ರೀ ಸುಧಾಕರ ಆರ್ ಭಂಡಾರಿಯವರು ಇದರ ಬಗ್ಗೆ ಪತ್ರಿಕೆಯ ಸಂಪಾದಕರೊಂದಿಗೆ ಚರ್ಚಿಸಿದ್ದಾಗಿ, ಪತ್ರಿಕೆಯಲ್ಲಿ ಪ್ರಸಾರವಾಗಬೇಕಾದ ಮಾಹಿತಿಗಳು ಪ್ರತಿ ತಿಂಗಳು 15 ನೇ ತಾರೀಖೀನೊಳಗೆ ಪತ್ರಿಕಾ ಕಛೇರಿಗೆ ತಲುಪಬೇಕು ಆದರೆ ಬೆಂಗಳೂರು ಸಂಘದಿಂದ ಕಳುಹಿಸಿದ ಮಾಹಿತಿ ಕಛೇರಿಗೆ ಜುಲೈ ತಿಂಗಳ 18 ನೇ ತಾರೀಖು ತಲುಪಿದೆ ಹಾಗಾಗಿ ಮುಂದಿನ ತಿಂಗಳು ಪತ್ರಿಕೆಯಲ್ಲಿ ಪ್ರಸಾರವಾಗುತ್ತೆ ಎಂದು ತಿಳಿಸಿದ್ದಾರೆ ಎಂದು ಸಭೆಗೆ ತಿಳಿಸಿದರು.

 

ಈ ಮೇಲಿನ ವಿಷಯಗಳಿಗೆ ಪರಿಹಾರ ಅನುಕೂಲವಾಗುವಂತೆ ಬೆಂಗಳೂರು ವಲಯದಿಂದ, ಪತ್ರಿಕಾ ಬಳಗದಲ್ಲಿ ನಮ್ಮವಲಯದ ಪ್ರಾತಿನಿಧಿತ್ವಕ್ಕೆ ನಮ್ಮ ಹಕ್ಕನ್ನು ಮಂಡಿಸಿದರೆ ಹೇಗೆ ಎಂದು ಅಧ್ಯಕ್ಷರು ಸಭೆಯ ವಿವೇಚನೆಗೆ, ಚರ್ಚೆಗೆ , ಸಲಹೆ ಸೂಚನೆಗಾಗಿ ಪ್ರಸ್ತಾವಿಸಿದರು. ಆಗ ಎಲ್ಲಾ ಸದಸ್ಯರು ಅದು ಉತ್ತಮ ಸಲಹೆ ಹಾಗೆ ನಮ್ಮ ಪ್ರತಿನಿಧಿತ್ವ ಪತ್ರಿಕೆಯ ಬಳಗದಲ್ಲಿ ಇದ್ದರೆ ಈ ರೀತಿಯ ಅಚಾತುರ್ಯಗಳು ಆಗುವುದಿಲ್ಲ ಎಂದು ತಿಳಿಸಿದರು. ಹಾಗಾಗಿ ಮುಂದಿನ ಸಭೆಯಲ್ಲಿ ನಮ್ಮ ವಲಯದ ಇಬ್ಬರು ಪ್ರತಿನಿಧಿಗಳನ್ನು ನೇಮಕ ಮಾಡುವ ವಿಚಾರವಾಗಿ ಪತ್ರಿಕಾ ಕಾರ್ಯಕಾರಿಗೆ, ಅವರ ಅನುಮೋದನೆಗಾಗಿ ಪತ್ರ ಬರೆಯಲು ತೀರ್ಮಾನಿಸಲಾಯಿತು.

ಕಚ್ಚೂರು ದೇವಸ್ಥಾನದ ಸೇವಾ ಟ್ರಸ್ಟ್, ಭಂಡಾರಿ ಮಹಾಮಂಡಳ, ಕಚ್ಚೂರು ವಾಣಿ ಪತ್ರಿಕೆ ಸಂಪಾದಕ ಬಳಗ ಈ  ಎಲ್ಲಾ ಕಮಿಟಿಗೆ ನೂತನ ಕಮಿಟಿಯನ್ನು ಆಯ್ಕೆಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಆಗಸ್ಟ್ 18 ರಂದು ಕಚ್ಚೂರು ದೇವಸ್ಥಾನದಲ್ಲಿ ಸಭೆ ಕರೆದಿರುವ ವಿಚಾರವನ್ನು ಲಕ್ಷ್ಮಣ ಕರಾವಳಿಯವರು ಪ್ರಸ್ಥಾಪಿಸಿದರು. ಇದಕ್ಕೆ ಧನಿಗೂಡಿಸಿದ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಯುತ ಉಮೇಶ್. ಎ ರವರು ಸಂಪೂರ್ಣ ಮಾಹಿತಿಯನ್ನು ಸಭೆಗೆ ಓದಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭೆ ಯಾರಾದರೂ ಕಮಿಟಿಯಲ್ಲಿ ಸೇರುವ ಇಚ್ಚೆ ಇದ್ದರೆ ತಿಳಿಸುವಂತೆ ಕೋರಲಾಯಿತು. 

 
ಸಭೆಯಲ್ಲಿ ಹಾಜರಿದ್ದ ಎಲ್ಲರೂ ತಮ್ಮ ಅಭಿಪ್ರಾಯ ಇಚ್ಛೆಯನ್ನು ತಕ್ಷಣಕ್ಕೆ ಪ್ರತಿಕ್ರಿಯಿಸಲಾಗವುದಿಲ್ಲ ಎಂದು ತಿಳಿಸಿದರು.
 
ಚರ್ಚಿತ ವಿಷಯಗಳು:
 
  1. ವಲಯದ 2019 ರ ವಾರ್ಷಿಕ ಸಭಾ ಕೂಟವನ್ನು ಪರ್ಯಾಯ ವ್ಯವಸ್ಥೆಯಂತೆ, ಘಟಕದಲ್ಲಿ ನಡೆಸುವ ಸಲುವಾಗಿ, ಎಲ್ಲಾ ಘಟಕಗಳ ಅಧ್ಯಕ್ಷರ, ಕಮಿಟಿ ಸದಸ್ಯರ ಸಭೆಯನ್ನು ಆದಷ್ಟು ಬೇಗನೇ ಕರೆದು ಸಭೆಯ ಸ್ಥಳ ನಿಗದಿ ಪಡಿಸುವಂತೆ ಹಾಗೂ ಯಾವ ಘಟಕದವರು ಈ ಸಾಲಿನ ಸಭೆ ನಡೆಸುವ ಆಶಯವನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಬೇಗನೇ ತೀರ್ಮಾನಿಸುವಂತೆ ಸಭೆ ತಿಳಿಸಿತು.
  2. ಬೆಂಗಳೂರು ಭಂಡಾರಿ ಸಮಾಜ ಸಂಘದ ಸದಸ್ಯರ ಒಂದು ಕಿರುಪ್ರವಾಸ ಮಾಡುವ ವಿಚಾರದಲ್ಲಿ ಹಿಂದಿನ ಸಭೆಯಲ್ಲಿ ಒಂದು ದಿನದ ಪ್ರವಾಸಕ್ಕಾಗಿ ಚಿತ್ರದುರ್ಗ, ವಾಣಿವಿಲಾಸ ಸಾಗರ ಮತ್ತು ಸುತ್ತಮುತ್ತಲಿನ ಸ್ಥಳ ಆಯ್ಕೆ ಮಾಡಿಕೊಳ್ಳ ಬಹುದೆಂದು ಸುಧಾಕರ ಬನ್ನಂಜೆಯವರು ಸಲಹೆ ನೀಡಿದ್ದರು. ಆದರೆ ಇಂದಿನ ಸಭೆಗೆ ಶ್ರೀಯುತರು ಹಾಜರಿರದ ಕಾರಣ ಸದಸ್ಯರೆಲ್ಲಾ ಸೇರಿ ಈ ಹಿಂದೆ ಬೆಂಗಳೂರಿನ ತಾವರೆಕೆರೆ ಸಮೀಪದಲ್ಲಿ ಶ್ರೀ ಶ್ರೀನಿವಾಸ್ ರವರ ಫಾರ್ಮ್ ಹೌಸ್ ನಲ್ಲಿ ಒಂದು ದಿನದ ಸ್ನೇಹ ಕೂಟ ನಡೆಸಿದ್ದರ ಬಗ್ಗೆ ಚರ್ಚಿಸಿದರು. ಎಲ್ಲಾ ಸದಸ್ಯರು ಅದು ಉತ್ತಮ ಜಾಗ ಎಲ್ಲರೂ ಒಪ್ಪಿದರೆ ಅದೇ ಸ್ಥಳದಲ್ಲಿ ಮತ್ತೊಮ್ಮೆ ಮಾಡುವ ಎಂದು ಒಪ್ಪಿಗೆ ನೀಡಿದರು. ಮುಂದಿನ ದಿನಗಳಲ್ಲಿ ಆದಷ್ಟು ಬೇಗನೇ ತೀರ್ಮಾನಿಸಿ ತಿಳಿಸುವಂತೆ ಸಭೆಗೆ ಸೂಚಿಸಲಾಯಿತು.  
  3. ಸದಸ್ಯರ ವಿವರ ಸಂಗ್ರಹ: ಈಗಾಗಲೇ ನೋಂದಾಯಿತ ಸದಸ್ಯರ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯರನ್ನು ಸಂಘಕ್ಕೆ ಸೇರಿಸಿಕೊಳ್ಳಲು ಸದಸ್ಯತ್ವ ಅರ್ಜಿ ಭರ್ತಿ ಮಾಡುವ ವಿಷಯವನ್ನು ಚರ್ಚಿಸಿ, ಈ ಕಾರ್ಯವನ್ನು ಆದಷ್ಟು ಬೇಗನೇ ಮುಗಿಸುವಂತೆ ಹಿರಿಯರಾದ ಶ್ರೀ ಲಕ್ಷ್ಮಣ ಕರಾವಳಿಯವರು ಎಲ್ಲಾ ಸದಸ್ಯರಿಗೂ ಸೂಚಿಸಿ, ತಾವೂ ಸಹ ಒಂದು ಸದಸ್ಯತ್ವ ಮಾಹಿತಿಯ ಪುಸ್ತಕವನ್ನು ಪಡೆದುಕೊಂಡರು.
  4. ಸಂಘದ ಪರವಾನಿಗೆ ನವೀಕರಣಕ್ಕೆ ಬೇಕಾದ ಮಾಹಿತಿಯನ್ನು ಸಂಬಂಧಿಸಿದ ಸಾಲಿನ ಕಮಿಟಿಯವರು ಆದಷ್ಟು ಬೇಗನೆ ಹಾಲಿ ಕಮಿಟಿಗೆ ಒದಗಿಸುವಂತೆ ಕೋರಲಾಯಿತು.
  5. ಭಂಡಾರಿ ಸಮಾಜ ಸಂಘ, ಬೆಂಗಳೂರು ವಲಯದ ಈ ಎರಡು ಮಾಸಿಕ ಸಭೆ ಮತ್ತು ಮುಖ್ಯವಾಗಿ….ಹೆಬ್ರಿ ಗೋಪಾಲ ಭಂಡಾರಿಯವರ ದಿವ್ಯಾತ್ಮಕ್ಕೆ ಬಂಧುಗಳು ಸಮರ್ಪಿಸಿದ ಗೌರವ ಶ್ರದ್ಧಾಂಜಲಿ ವರದಿ ಪ್ರಕಟಣೆಗಾಗಿ ಕಚ್ಚುರುವಾಣಿ ಮಾಹಿತಿ ಕೋರಿಕೆ ನೀಡಲು ತೀರ್ಮಾನಿಸಲಾಯಿತು.
 

ಲಘು ಉಪಹಾರದ ನಂತರ ಕೋಶಾಧಿಕಾರಿ ಶ್ರೀಯುತ ಕುಶಲ್ ಭಂಡಾರಿಯವರು ಹಾಜರಿದ್ದ ಎಲ್ಲಾ ಬಂಧುಗಳಿಗೆ, ವಿಶೇಷವಾಗಿ ಹಿರಿಯರಾದ ದಾಸರಹಳ್ಳಿ ಶ್ರೀಧರ ಭಂಡಾರಿ ಹಾಗೂ ಅಚ್ಲಾಡಿ ಮಾಧವ ಭಂಡಾರಿ ರವರಿಗೆ ವಂದಿಸಿ, ಸಭೆಯನ್ನು ಮುಕ್ತಾಯಗೊಳಿಸಲಾಯಿತು. 

Leave a Reply

Your email address will not be published. Required fields are marked *