ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ಇದರ ಮಾರ್ಚ್ 2021 ರ ಮಾಸಿಕ ಸಭೆಯು ದಿನಾಂಕ: 07/03/2021 ರ ಭಾನುವಾರದಂದು ಮಧ್ಯಾಹ್ನ 4 ಘಂಟೆಗೆ ಸಂಘದ ಗೌರಾವಾಧ್ಯಕ್ಷರಾದ ಶ್ರೀಯುತ ಲಕ್ಷ್ಮಣ ಭಂಡಾರಿ ಕರಾವಳಿ ಯವರ ಅಧ್ಯಕ್ಷತೆಯಲ್ಲಿ ಹೋಟೆಲ್ ಕದಂಬ ರಾಜಾಜಿನಗರ ಬೆಂಗಳೂರು ಇಲ್ಲಿ ಜರಗಿತು.
ವಲಯದ ಮಾಜಿ ಅಧ್ಯಕ್ಷರು, ಹಿರಿಯರು, ಸಂಘದ ಅಭಿವೃದ್ಧಿಗೆ ಶ್ರಮಿಸಿದಂತಹ ಶ್ರೀ ಬಾಲಕೃಷ್ಣ ಭಂಡಾರಿಯವರು ಇಂದಿನ ಸಭೆಗೆ ಹಾಜರಾಗಿದ್ದು ವಿಶೇಷವಾಗಿತ್ತು.
ವಲಯದ ಪ್ರಧಾನ ಕಾರ್ಯದರ್ಶಿ ಶ್ರೀ ಸುಧಾಕರ ಭಂಡಾರಿಯವರು ಹಾಜರಿದ್ದ ಎಲ್ಲರನ್ನೂ ಸ್ವಾಗತಿಸಿದರು. ಮೊದಲು ಈ ಹಿಂದಿನ ಸಭೆಯಿಂದ ಇದುವರೆಗೆ ನಮ್ಮನ್ನಗಲಿದ ಸಂಘದ ಸದಸ್ಯರು ವಿಶೇಷವಾಗಿ ಚಿಕ್ಕಮಗಳೂರಿನ ಕಾಫಿ ಬೋರ್ಡಿನ ಉದ್ಯೋಗಿಯಾಗಿದ್ದ ಶ್ರೀ ಪ್ರಕಾಶ ಭಂಡಾರಿ ಯವರನ್ನ, ಪದಾಧಿಕಾರಿಗಳು ಹಾಗೂ ಬಂಧುಗಳಿಗೆ ಒಂದು ನಿಮಿಷದ ಮೌನಾಚಾರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿತು. ಸಭೆಗೆ ಪ್ರದಾನ ಕಾರ್ಯದರ್ಶಿಯವರು ಹಿಂದಿನ ಸಭೆಯಲ್ಲಿ ಚರ್ಚಿತ ವಿಷಯಗಳು ಹಾಗೂ ತೆಗೆದುಕೊಂಡ ನಿರ್ಣಯಗಳನ್ನು ಸಭೆಗೆ ಓದಿ ಹೇಳಿದರು.
ಚರ್ಚಿತ ವಿಷಯಗಳು:
1. ಹಿಂದಿನ ಸಭೆಯಲ್ಲಿ ಚರ್ಚಿಸಿದಂತೆ ರಿಪ್ಪನಪೇಟೆ ಘಟಕದ ಕಾರ್ಯದರ್ಶಿಯವರಾದ ಶ್ರೀಯುತ ಮಂಜು ಭಂಡಾರಿ ಮುದ್ದು ಭಂಡಾರಿ ಯವರ ಸಲಹೆಯಂತೆ ಅವರೊಂದಿಗೆ ಚರ್ಚಿಸಿದಾಗ ಬೆಂಗಳೂರು ವಲಯದ ಸಂಘದಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಭಂಡಾರಿ ಬಂಧುಗಳನ್ನು ಹೊರತುಪಡಿಸಿ ಇತರ ಜಿಲ್ಲೆಯ ಯಾವ ಬಂಧುಗಳೂ ಭಾಗವಹಿಸುತ್ತಿಲ್ಲ. ಅಂತಹ ಬಹಳ ಜನ ಇದ್ದಾರೆ ಅವರು ನಮ್ಮ ಕುಲಕಸುಬು ಮಾಡದೇ ಇದ್ದರೂ ಸಹ ಬೇರೆ ಬೇರೆ ವೃತ್ತಿ ಮತ್ತು ಉದ್ಯೋಗದಲ್ಲಿ ಇದ್ದಾರೆ ಅಂತವರನ್ನು ಗುರುತಿಸಿ ಸಂಘಕ್ಕೆ ಸೇರಿಸಿಕೊಂಡು ಸಂಘವನ್ನು ಸದೃಡಗೊಳಿಸಿ ಹಾಗೂ ಸಮಾಜದ ಬಂಧುಗಳ ಸಂಖ್ಯೆಯನ್ನು ಹೆಚ್ಚಿಸಿ ಇದರಿಂದ ಸರ್ಕಾರಿ ಸೌಲಭ್ಯ ಪಡೆಯಲು ಅನುಕೂಲ ಆಗುತ್ತದೆ ಎಂಬ ಸಲಹೆಯನ್ನು ಸಭೆಯ ಮುಂದಿಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಗೌರಾವಧ್ಯಕ್ಷರು ಈ ಹಿಂದೆ 2004 ರಲ್ಲಿ ವಿದ್ಯಾ ಎಂಬ ಪುಸ್ತಕ ಬಿಡುಗಡೆ ಮಾಡಿದ್ದೆವು ಅದರಲ್ಲಿ ಎಲ್ಲಾ ಜೆಲ್ಲೆಗಳ ಸದಸ್ಯರ ಹೆಸರನ್ನು ಪ್ರಕಟಿಸಲಾಗಿತ್ತು. ಆಗ ಮೈಸೂರು, ಕೊಡಗು ಇನ್ನಿತರೆ ಜಿಲ್ಲೆಗಳ ಸದಸ್ಯರು ಸಭೆಗ ಆಗಮಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸಂಘ ಅವರಿಂದ ದೂರ ಆಗಿದೆ ಹಾಗಾಗಿ ಅವರು ಸಂಘದಿಂದ ದೂರವಾಗಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮತ್ತೆ ಅಂತಹ ಸದಸ್ಯರನ್ನು ಸೇರಿಸಿಕೊಳ್ಳುವ ಕಾರ್ಯ ಪ್ರಾರಂಭಿಸಬೇಕು ಎಂದು ತಿಳಿಸಿದರು.
ಮುಂದುವರಿದಂತೆ ಮಂಜುನಾಥ ಭಂಡಾರಿಯವರ ಸಲಹೆ ಹಾಲಿ ಚಾಲ್ತಿಯಲ್ಲಿರುವ ಘಟಕಗಳ ಒಬ್ಬ ಸದಸ್ಯರನ್ನು ವಲಯದ ಸಂಘದ ಕಾರ್ಯಕಾರಿ ಮಂಡಳಿಯಲ್ಲಿ ನೇಮಕ ಮಾಡಿಕೊಂಡರೆ ಕೇಂದ್ರ ವಲಯ ಕಛೇರಿಯಲ್ಲಿ ಪ್ರತಿ ತಿಂಗಳು ನಡೆದ ಸಭೆ ಮತ್ತು ತೆಗೆದುಕೊಂಡ ತೀರ್ಮಾನಗಳ ಮಾಹಿತಿ ಘಟಕಗಳಿಗೂ ದೊರೆಯುತ್ತದೆ ಎಂಬುದು. ಇದಕ್ಕೆ ಪ್ರತಿಕ್ರಿಯಿಸಿದ ಸಭೆ ಸಲಹೆ ಉತ್ತಮವಾಗಿದೆ ಮಾಡಬಹುದು ಆದರೆ ಕೆಲವು ಕಟ್ಟುಪಾಡು ನೀತಿ ನಿಬಂಧನೆಗಳು ಇದ್ದರೆ ಒಳ್ಳೆಯದು ಎಂದು, ಗಂಭೀರವಾಗಿ ಚರ್ಚಿಸಿದ ಈ ಕೆಳಗಿನಂತೆ ತೀರ್ಮಾನ ಕೈಗೊಂಡಿತು.
- ಬೆಂಗಳೂರು ವಲಯದ ಸಂಘಕ್ಕೆ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ಇವು ಪ್ರಮುಖ ಹುದ್ದೆಗಳು, ಇವರಿಗೆ ಬ್ಯಾಂಕ್ ವ್ಯವಹಾರದಲ್ಲಿ ಸಹಿ ಮಾಡುವ ಅಧಿಕಾರ ಇರುತ್ತದೆ. ಅವರು ಪ್ರತಿ ಸಲ ಬ್ಯಾಂಕ್ ವ್ಯವಹಾರಕ್ಕೆ ಬ್ಯಾಂಕಿಗೆ ಬೇಟಿ ನೀಡುತ್ತಲೇ ಇರಬೇಕಾಗುತ್ತದೆ. ಹಾಗೂ ಆ ಮೂರೂ ಜನಗಳೂ ಪ್ರತಿ ತಿಂಗಳ ಸಭೆಯಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ. ಅದಲ್ಲದೆ ಐ ಟಿ ರಿಟರ್ನ್ಸ್ ಸಲ್ಲಿಸುವ ಪ್ರಕ್ರಿಯೆಯಲ್ಲಿ ಈ ಮೂರೂ ವ್ಯಕ್ತಿಗಳ ಉಪಸ್ಥಿತಿ ಮತ್ತು ಸಹಿಯ ಅವಶ್ಯಕತೆ ಇರುವ ಕಾರಣ ಮೇಲ್ಕಾಣಿಸಿದ ಮೂರು ಹುದ್ದೆಗಳನ್ನು ಬೆಂಗಳೂರಿನಲ್ಲಿ ನೆಲೆಸಿರುವ ಮತ್ತು ಸಂಘದ ಕಾರ್ಯಚಟುವಟಿಕೆಯಲ್ಲಿ ಸಕ್ರೀಯವಾಗಿರುವ ಬಂಧುಗಳಿಗೇ ನೀಡಬೇಕು.
- ಮೇಲ್ಕಾಣಿಸಿದ ಮೂರು ಹುದ್ದೆಗಳನ್ನು ಹೊರತು ಪಡಿಸಿ ಉಳಿದ ಹುದ್ದೆಗಳನ್ನು ಘಟಕಗಳ ಪ್ರತಿನಿಧಿಗಳಿಗೆ ನೀಡಬಹುದು
- ಅಕಸ್ಮಾತ್ ಘಟಕಗಳ ಪ್ರತಿನಿಧಿಗಳಿಗೆ ಈ ಪ್ರಮುಖ ಹುದ್ದೆಗಳನ್ನು ನೀಡುವುದಾದರೆ ಅಂತಹ ವ್ಯಕ್ತಿಗಳು ಸತತವಾಗಿ 5 ವರ್ಷಗಳ ಕಾಲ ಸಂಘದ ಕಾರ್ಯಚಟುವಟಿಕೆ ಮತ್ತು ಮಾಸಿಕ ಸಭೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿರಬೇಕು, ಅಂತಹವರನ್ನು ಈ ಹುದ್ದೆಗಳಿಗೆ ನೇಮಕ ಮಾಡಬಹುದು
- ಆಡಳಿತ ಮಂಡಳಿಯ ಯಾವುದೇ ಸದಸ್ಯ ಸತತವಾಗಿ 2 ಸಭೆಗಳಿಗೆ ಗೈರುಹಾಜರಾದಲ್ಲಿ ಅವರನ್ನು ಆ ಹುದ್ದೆಯ ಜವಾಬ್ದಾರಿಯಿಂದ ಕೈಬಿಡುವುದು ಎಂದು ಸಭೆಯಲ್ಲಿ ಹಾಜರಿದ್ದ ಶ್ರೀ ಶೈಲೇಶ ಭಂಡಾರಿಯವರ ಸಹೆಯನ್ನು ಸಭೆ ಚರ್ಚಿಸಿ 2 ಸಭೆ ಬೇಡ ಸತತವಾಗಿ 3 ಸಭೆಗೆ ಗೈರುಹಾಜರಾದರೆ ಅಂತಹವರ ಜವಾಬ್ದಾರಿಯನ್ನು ಮೊಟಕುಗೊಳಿಸೋಣ ಎಂದು ತೀರ್ಮಾನಿಸಿತು.
2. ಹೊಸ ಸದಸ್ಯರ ನೋಂದಣಿ: ಈಗಾಗಲೇ ಚರ್ಚಿಸಿದಂತೆ ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಬಂದು ನೆಲೆಸಿರುವ ಭಂಡಾರಿ ಬಂಧುಗಳನ್ನು ಗುರುತಿಸಿ ಅವರಿಗೆ ಸಂಘದ ಸದಸ್ಯತ್ವ ಪಡೆಯುವಂತೆ ಮನವೊಲಿಸುವುದು.ಈಗಾಗಲೇ ಸಂಘದ ಸದಸ್ಯರಾಗಿದ್ದವರ ಮಕ್ಕಳು ಈಗ ಬೆಂಗಳೂರಿನಲ್ಲಿ ಇದ್ದಾರೆ, ನಾವು ಈ ಹಿಂದೆ ತಿಳಿಸಿದ್ದೇವೆ ಪ್ರತಿ ಕುಟುಂಬದಲ್ಲಿ ದುಡಿಯುವ ಸದಸ್ಯನನ್ನು ಸಂಘಕ್ಕೆ ಸದಸ್ಯತ್ವ ಮಾಡಿಕೊಳ್ಳಬೇಕು ಎಂದು ಅದರಂತೆ ಈಗ ಉದ್ಯೋಗ ಮಾಡುತ್ತಿರುವವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಬೇಕು ಎಂದು ಗೌರಾವಾಧ್ಯಕ್ಷರು ತಿಳಿಸಿದರು. ಈ ಕಾರ್ಯವನ್ನು ಸಂಘದ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಯುತ ಪ್ರದೀಪ ಭಂಡಾರಿ ಯವರು ಸಕ್ರೀಯವಾಗಿ ಕಾರ್ಯನಿರ್ವಹಿಸುವುದು ಎಂದು ತೀರ್ಮಾನಿಸಿತು. ಸಂಘದ ಎಲ್ಲಾ ಪದಾಧಿಕಾರಿಗಳು ಅವರಿಗೆ ಸಮೀಪ ಇರುವ ಬಂಧುಗಳನ್ನು ಸಭೆಗೆ ಪರಿಚಯಿಸುವಂತೆ ತಿಳಿಸಲಾಯಿತು. ಹೊಸ ಸದಸ್ಯರಿಗೆ ರೂ 500/- ಸದಸ್ಯತ್ವ ಶುಲ್ಕ ನಿಗದಿಪಡಿಸಲಾಯಿತು.
- ಸಂಘದಲ್ಲಿ ಈಗಾಗಲೇ ಸದಸ್ಯತ್ವ ಪಡೆದಿರುವ ಸದಸ್ಯರ ಸದಸ್ಯತ್ವ ಶುಲ್ಕವನ್ನು ಹೆಚ್ಚಿಸುವ ಬಗ್ಗೆ ಶ್ರೀ ರಾಜಶೇಖರ ಭಂಡಾರಿ ಯವರು ಕೇಳಿದ ಪ್ರಶ್ನೆಗೆ ಸಭೆ ಅದು ಬೇಡ ಆದರೆ ಸದಸ್ಯರಲ್ಲಿ ಅಥವಾ ಮುಂದೆ ಬರುವ ಸದಸ್ಯರು ಯಾರಾದರೂ ರೂ 1500/- ಸದಸ್ಯತ್ವ ಶುಲ್ಕ ಪಾವತಿ ಮಾಡಿದರೆ ಅವರನ್ನು ಸಂಘದ ಪೋಷಕರು ಹಾಗೂ ರೂ 2500/- ಪಾವತಿಸಿದರೆ ಅವರನ್ನು ಸಂಘದ ಮಹಾಪೋಷಕರು ಎಂದು ಕರೆಯುವುದೆಂದು ತೀರ್ಮಾನಿಸಲಾಯಿತು.
3. ಸಂಘದ ನೋಂದಾವಣಿ ನವೀಕರಣದ ಬಗ್ಗೆ : ಪ್ರತಿಕ್ರಿಯಿಸಿದ ಶ್ರೀ ಬಿ. ಕೆ. ಭಂಡಾರಿಯವರು 1960 ಸಹಕಾರ ಸಂಘಗಳ ಕಾನೂನಿನಡಿ ನಮ್ಮ ಸಂಘ ನೋಂದಾವಣೆ ಆಗಿದೆ. ನೋಂದಣಿ ನವೀಕರಿಸುವ ಅವಶ್ಯಕತೆ ಇಲ್ಲ ಆದರೆ ಪ್ರತಿ ವರ್ಷ ಸಂಘದ ಕಾರ್ಯಚಟುವಟಿಕೆಯ ವರದಿಯನ್ನು ರಿಜಿಸ್ಟ್ರಾರ್ ರವರಿಗೆ ನೀಡಬೇಕು. ಆ ಕೆಲಸವನ್ನು ಆದಷ್ಟು ಬೇಗ ಮುಗಿಸಿ ಎಂದು ತಿಳಿಸಿದರು. ಸಂಘದ ಹಿಂದಿನ ಟಿಡಿಎಸ್ ಮರುಪಾವತಿ ಆಗದೇ ಇರುವುದಕ್ಕೆ ಅಡಿಟರ್ ಮಾಡಿದ ಒಂದು ಸಣ್ಣ ತಪ್ಪು ಕಾರಣವಾಗಿದೆ. ಅವರೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಿ ಎಂದು ಬಿ.ಕೆ ಭಂಡಾರಿಯವರು ಸಲಹೆ ನೀಡಿದರು.
4. ಕಚ್ಚೂರು ನಾಗೇಶ್ವರ ಉತ್ಸವದ ಖರ್ಚಿಗಾಗಿ ಕರ್ನಾಟಕ ಬ್ಯಾಂಕಿನಲ್ಲಿ ತೆರೆದಿರುವ ಬ್ಯಾಂಕ್ ಅಕೌಂಟ್ ಖಾತೆಗೆ ಜಮಾ ಆದ ದೇಣಿಗೆ ಹಣಕ್ಕೆ ಪ್ರತ್ಯೇಕ ರಶೀಧಿ ಪುಸ್ತಕ ಮಾಡಿ ರಶೀದಿ ನೀಡಿ. ಹಾಗೆಯೇ ಆನ್ ಲೈನ್ ನಲ್ಲಿ ಹಣ ಹಾಕುವಾಗ ಹಣ ಪಾವತಿಸಿದ ವ್ಯಕ್ತಿಯ ಹೆಸರು ಬರದೇ ಇದ್ದರೆ ಅದಕ್ಕೆ ಯಾವುದಾದರೂ ರೀತಿಯಲ್ಲಿ ಪರಿಹಾರ ಇದೆಯಾ ಎಂದು ಬ್ಯಾಂಕಿನಂದಿಗೆ ಚರ್ಚಿಸಿ, ಹಾಗೂ ಬ್ಯಾಂಕ್ ಆನ್ ಲೈನ್ ವ್ಯವಹಾರಕ್ಕಾಗಿ ಪ್ರತ್ಯೇಕ ಮೋಬೈಲ್ ನಂಬರ್ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು. ಹಾಜರಿದ್ದ ಜಗದೀಶ ಕುರುಬರಹಳ್ಳಿ ಯವರು ಬಿ.ಎಸ್.ಎನ್.ಎಲ್ ನಲ್ಲಿ ವಾರ್ಷಿಕ ಶುಲ್ಕದಂತೆ ಮೋಬೈಲ್ ನಂಬರ್ ದೊರೆಯುತ್ತದೆ ಪ್ರಯತ್ನಿಸಿ ಎಂದು ಸಲಹೆ ನೀಡಿದರು. ಸಭೆ ಈ ವಿಷಯದಲ್ಲಿ ಕ್ರಮ ಕೈಗೊಳ್ಳುವಂತೆ ಗೌರಾವಾಧ್ಯಕ್ಷರಿಗೆ ಕೋರಿಕೊಂಡಿತು.
5. ಸಂಘದ ಸದಸ್ಯರಿಗೆ ಅನಿವಾರ್ಯ ಅನಾರೋಗ್ಯದ ತೊಂದರೆಯಾದ ಸಮಯದಲ್ಲಿ ಪರಿಹಾರ ನೀಡುವ ನಿಟ್ಟಿನಲ್ಲಿ ಗುಂಪು ವಿಮೆ ಮಾಡುವ ಬಗ್ಗೆ ಸಭೆ ಚರ್ಚಿಸಿತು. ಸಂಘದ ಎಲ್ಲಾ ಸದಸ್ಯರು ಇದರಲ್ಲಿ ಭಾಗಿ ಆದರೆ ವಾರ್ಷಿಕ ಕಂತು ಕಡಿಮೆ ಆಗುತ್ತದೆ ಆದ ಕಾರಣ ಯಾವುದೇ ಕಟ್ಟುಪಾಡುಗಳನ್ನು ವಿಧಿಸದೆ ಎಲ್ಲರಿಗೂ ಈ ಸೌಲಭ್ಯ ನೀಡುವ ಮಾಹಿತಿ ನೀಡಿ. ಯಾವ ಸದಸ್ಯರು ಈಗಾಗಲೇ ಅವರ ಕಾರ್ಯನಿರ್ವಹಿಸುವ ಕಂಪನಿಗಳಿಂದ ಸೌಲಭ್ಯ ಪಡೆಯುತ್ತಿದ್ದರೆ ಅವರು ಸ್ವ-ಚ್ಚೆಯಿಂಧ ಇದರ ಪ್ರಯೋಜನ ಬೇಡ ಎಂದರೆ ಅವರನ್ನು ಈ ಸೌಲಭ್ಯದಿಂದ ಕೈಬಿಡೋಣ ಎಂದು ಚರ್ಚಿಸಿತು. ಸದಸ್ಯರ ವಾರ್ಷಿಕ ಕಂತನ್ನು ಭರಿಸುವ ಶಕ್ತಿ ಇರುವಂತಹ ಸದಸ್ಯರಿಂದ ಕಂತಿನ ಬಾಬ್ತು ಹಣ ಪಡೆಯುವುದು ಹಾಗೂ ಉಳಿದ ಕಂತಿನ ಬಾಬ್ತನ್ನು ಸಂಘವೇ ಭರಿಸುವುದು. ಇದಕ್ಕೆ ಸಹಾಯ ನೀಡಲು ಇಚ್ಚೆಇರುವ ಸದಸ್ಯರಿಂದ ದೇಣಿಗೆ ಪಡೆಯುವುದು ಎಂದು ತೀರ್ಮಾನಿಸಲಾಯಿತು.
ಪ್ರತಿ ವರ್ಷದಂತೆ ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆ ಡಿಸೆಂಬರ್ ತಿಂಗಳಲ್ಲಿ ನಡೆಯಬೇಕಿತ್ತು ಆದರೆ ಕೊರೋನಾದ ಕಾರಣ ಸಭೆ ನಡೆಸಲು ಅನುಮತಿ ಸಿಗದೆ ಫೆಬ್ರವರಿ ತಿಂಗಳ ಮಾಸಿಕ ಸಭೆಯನ್ನು ಸರ್ವಸದಸ್ಯರ ಸಭೆಯಂತೆ ಮಾಡಿ ಆಯ್ದ ಸದಸ್ಯರ ಸಮ್ಮುಖದಲ್ಲಿ ಸಭೆ ನಡೆಸಲಾಯಿತು. ಭಸಸ ಬೆಂಗಳೂರಿನ ವ್ಯವಹಾರ ಇರುವ ಕರ್ನಾಟಕ ಬ್ಯಾಂಕ್ ಮಾರತಹಳ್ಳಿ ಶಾಖೆ ವಾರ್ಷಿಕ ಮಹಾಸಭೆಗೆ ಪ್ರತಿ ವರ್ಷ ದೇಣಿಗೆ ನೀಡುತ್ತಿತ್ತು ಈ ಸಲದ ಪೇಬ್ರವರಿ ತಿಂಗಳ ಸಭೆಯ ವರದಿಯನ್ನು ಮತ್ತು ಫೋಟೋಗಳನ್ನು ಕೊಟ್ಟು ಬ್ಯಾಂಕಿಗೆ ಪಸ್ತುತ ಸಾಲಿನ ದೇಣಿಗೆ ಬಾಬ್ತು ನೀಡುವಂತೆ ಕೋರಲಾಗಿತ್ತು. ಸಂಘದ ಗೌರಾವಾದ್ಯಕ್ಷರು ತಮ್ಮ ವಿಶೇಷ ಆಸಕ್ತಿ ತೋರಿ ಬ್ಯಾಂಕಿನಿಂದ ರೂ 10,000/- ದೇಣಿಗೆ ದೊರಕುವಂತೆ ಮಾಡಿದ ವಿಷಯವನ್ನು ಸಭೆಯಲ್ಲಿ ತಿಳಿಸಿ ಗೌರಾವಾಧ್ಯಕ್ಷರನ್ನು ಅಭಿನಂದಿಸಲಾಯಿತು.
ಲಘು ಉಪಹಾರದ ನಂತರ ಕಾರ್ಯದರ್ಶಿಯವರ ವಂದನಾರ್ಪಣೆಯೊಂದಿಗೆ ಸಭೆಯನ್ನು ಮುಖ್ತಾಯಗೊಳಿಸಲಾಯಿತು.
ವರದಿ : ಸುಧಾಕರ್ ಆರ್ ಭಂಡಾರಿ ಶಿರಾಳಕೊಪ್ಪ