September 20, 2024
ಭಂಡಾರಿ ಸಮಾಜ ಸಂಘ ಬೆಂಗಳೂರು ಇದರ ಜುಲೈ  ತಿಂಗಳ ಮಾಸಿಕ ಸಭೆ ಸಂಘದ ಅಧ್ಯಕ್ಷರಾದ ಶ್ರೀಯುತ ಸಾಗರ ಮಾಧವ ಭಂಡಾರಿಯವರ ಬೆಂಗಳೂರಿನ ನಿವಾಸದಲ್ಲಿ ದಿನಾಂಕ: 07/07/2019 ರಂದು ಬೆಳಗ್ಗೆ 11.00 ಘಂಟೆಯಿಂದ ಸಂಘದ ಅಧ್ಯಕ್ಷರಾದ ಶ್ರೀಯುತ ಸಾಗರ ಮಾಧವ ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
 
 
ಸಭೆಯನ್ನು ಶ್ರೀಯುತ ಶ್ರೀಧರ ಭಂಡಾರಿ ದಾಸರಹಳ್ಳಿ ಮತ್ತು ಮಾಧವ ಭಂಡಾರಿ ಅಚ್ಲಾಡಿ ಯವರು ಸಮಾಜದ ಆರಾಧ್ಯ ದೈವ ಕಚ್ಚೂರು ಶ್ರೀ ನಾಗೇಶ್ವರನಿಗೆ ಪೂಜೆ ಮಾಡುವ ಮುಖಾಂತರ ಪ್ರಾರಂಭಿಸಲಾಯಿತು. ಕುಮಾರಿ ಪ್ರಣತಿ ಮತ್ತು ಕುಮಾರ ಪನ್ವಿತ್ ಯು ರವರು ಪ್ರಾರ್ಥನೆ ಮಾಡಿದರು. 
ಸಂಘದ ಕಾರ್ಯದರ್ಶಿ ಶ್ರೀಯುತ ಸುಧಾಕರ ಆರ್ ಭಂಡಾರಿ ಯವರು ಹಾಜರಿದ್ದ ಎಲ್ಲರನ್ನೂ ಸ್ವಾಗತಿಸಿದರು.
 
 
ನಂತರ ಇತ್ತೀಚೆಗೆ ನಮ್ಮನಗಲಿದ ಭಂಡಾರಿ ಬಂಧುಗಳು, ಪ್ರಮುಖವಾಗಿ ನಮ್ಮ ಭಂಡಾರಿ ಸಮಾಜದ ಹೆಮ್ಮೆ, ಎರಡು ಭಾರಿ ಶಾಸಕರಾಗಿದ್ದ, ಸಮಾಜಕ್ಕೊಂದು ಅತ್ಯುನ್ನತ ಗೌರವ, ಸ್ಥಾನಮಾನ, ಗುರುತು ಮತ್ತು ಗೌರವ ತಂದುಕೊಟ್ಟ ಶ್ರೀ ಹೆಬ್ರಿ ಗೋಪಾಲ ಭಂಡಾರಿ ಯವರ ದಿವ್ಯಾತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷದ‌ ಗೌರವ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶ್ರದ್ದಾಂಜಲಿ ಪ್ರಾಸ್ತಾವಿಕ ನುಡಿಯಾಡಿದ ಶ್ರೀಯುತ ಹಿರಿಯಣ್ಣ ಭಂಡಾರಿ ಯವರು ಜಾತಿ ಸಂಖ್ಯಾ ಬಲದಲ್ಲಿ ಏನೂ ದೊಡ್ಡ ಮಟ್ಟದಲ್ಲಿ ಇಲ್ಲದ ನಮ್ಮ ಜನಾಂಗದ ಒಬ್ಬ ವ್ಯಕ್ತಿ ತಮ್ಮ ಸ್ವ ವರ್ಚಸ್ಸಿನ ಮೂಲಕ ಗೋಪಾಲ ಭಂಡಾರಿಯವರು ಹೇಗೆ ರಾಜಕೀಯವಾಗಿ ಬೆಳೆದರು ಎಂದು ತಿಳಿಸಿ, ಅವರ ಅಗಲಿಕೆ ನಮ್ಮ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ತಿಳಿಸಿದರು. 
 
 
 
 
ಶ್ರೀ ಸುಧಾಕರ ಬನ್ನಂಜೆಯವರು ಭಸಸ ಬೆಂಗಳೂರು ನಡೆದು ಬಂದ ಹಾದಿಯನ್ನು ಅವಲೋಕಿಸಿದರು. ಅವರ ಮಾತಿನಲ್ಲಿ ಭಂಡಾರಿ ಸಮಾಜ ಸಂಘ ಪ್ರಾರಂಭವಾಗಲು ಕಾರಣ ಅದಕ್ಕೆ ನಮ್ಮ ಹಿರಿಯರು ಹಾಕಿ ಕೊಟ್ಟಂತಹ ಸುಸಂಸ್ಕೃತ ಬುನಾದಿ. ನಮ್ಮ ಸಮಾಜ ಸದೃಡವಾಗ ಬೇಕಾದರೆ ಸಂಘಟನೆ ಮತ್ತು ವಿದ್ಯಾಭ್ಯಾಸದ ಮಹತ್ವ, ಅದಕ್ಕಾಗಿ ನಾವು ನೀಡುತ್ತಿರುವ ವಿದ್ಯಾರ್ಥಿ ಪ್ರೋತ್ಸಾಹದ ಮಹತ್ವವನ್ನು ಸಭೆಗೆ ತಿಳಿಸಿದರು.
 
 
ಅಧ್ಯಕ್ಷರ ಅನುಮತಿಯಂತೆ ಹಿಂದಿನ ಸಭೆಯ ನಡಾವಳಿಗಳನ್ನು ಓದಿ ಹೇಳಲಾಯಿತು. 
 
ಕೋಶಾಧಿಕಾರಿ ಶ್ರೀಯುತ ಕುಶಲ್ ಭಂಡಾರಿಯವರು ಕಳೆದ ಆರು ತಿಂಗಳ ಸಂಘದ ಆರ್ಥಿಕ ಸ್ಥಿತಿಗತಿ ಲೆಕ್ಕ ಪತ್ರ ವರದಿಯನ್ನು ಸಭೆಗೆ ಮಂಡಿಸಿದರು. ಸಂಘ ಮುಂದಿನ ದಿನಗಳಲ್ಲಿ ಅತ್ಯಂತ ಹೆಚ್ಚಿನ ಕಾರ್ಯಕ್ಷಮತೆಯನ್ನು ತನ್ನನ್ನು ತಾನು ತೊಡಗಿಸಿಕೊಳ್ಳಲು ಎಲ್ಲಾ ಸದಸ್ಯರ ಸಹಕಾರವನ್ನು ಕೋರಿದರು. 
 
 
ಚರ್ಚಿತ ವಿಷಯಗಳು:
 
1. ವಲಯದ ವಾರ್ಷಿಕ ಸಭಾ ಕೂಟವನ್ನು ಪರ್ಯಾಯವಾಗಿ ಒಂದು ವರ್ಷ ಬೆಂಗಳೂರಿನ ಕೇಂದ್ರ ಹಾಗೂ ಇನ್ನೊಂದು ವರ್ಷ ತನ್ನ ಯಾವುದಾದರೂ ಒಂದು ಘಟಕದಲ್ಲಿ ನಡೆಸುವ ಸಂಘದ ಹಿಂದಿನ ತೀರ್ಮಾನದಂತೆ 2019 ರ ಸಭಾಕೂಟವನ್ನು ಘಟಕದಲ್ಲಿ ನಡೆಸಬೇಕು, ಅದಕ್ಕಾಗಿ ಎಲ್ಲಾ ಘಟಕಗಳ ಅಧ್ಯಕ್ಷರ, ಕಮಿಟಿ ಸದಸ್ಯರ ಸಭೆ ಕರೆದು ಅದರಂತೆ ಮುಂದಿನ ಮಾಸಿಕ ಸಭೆಯನ್ನು ಘಟಕದಲ್ಲಿ ಮಾಡಿ ಎಂದು ಉಮೇಶ್ ಎ ರವರು ಸೂಚಿಸಿದಂತೆ ಹಾಗೂ ಲಕ್ಷ್ಮಣ ಕರಾವಳಿಯವರು ಸಹಮತ ವ್ಯಕ್ತ ಪಡಿಸಿದರು. ಇದಕ್ಕೆ ಒಪ್ಪಿದ ಅಧ್ಯಕ್ಷರು ಮುಂದಿನ ಆಗಸ್ಟ್ ತಿಂಗಳು ಅಥವಾ ಘಟಕಗಳ ಅನುಕೂಲಕ್ಕೆ ತಕ್ಕಂತೆ ಯಾವುದಾದರೂ ಒಂದು ಘಟಕದಲ್ಲಿ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ತಿಳಿಸಿದರು. 
 
2. ಭಸಸ – ಬೆಂಗಳೂರು ಸಂಘದ ಎಲ್ಲಾ ಸದಸ್ಯರ ಒಂದು ಕಿರುಪ್ರವಾಸ ಮಾಡುವ ಬಗ್ಗೆ ಶ್ರೀ ಪ್ರಕಾಶ್ ಭಂಡಾರಿ ಕಟ್ಲ ಮತ್ತು ಸುಧಾಕರ ಬನ್ನಂಜೆಯವರ ಸಲಹೆಗೆ ಸ್ಪಂದಿಸಿದ ಸಭೆ ಹಿಂದಿನ ಸಾರಿ ಕಾರ್ಗಲ್ ನಲ್ಲಿ ಒಂದು ದಿನ ಉಳಿದುಕೊಂಡು ಅಲ್ಲಿನ ಸುತ್ತಮುತ್ತಲ ಸ್ಥಳ ವೀಕ್ಷಿಸಿದ ಬಗ್ಗೆ ಅದಕ್ಕೆ ಎಲ್ಲಾ ವ್ಯವಸ್ಥೆ ಮಾಡಿದ ಶ್ರೀಮತಿ ಡಾ|| ಸುಮತಿ ಶ್ರೀ ಲಕ್ಷ್ಮಣ ಕರಾವಳಿ ಕುಟುಂಬದವರು ನೀಡಿದ ಆತಿಥ್ಯವನ್ನು ಸ್ಮರಿಸಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಇದರ ಬಗ್ಗೆ ಕಮಿಟಿಯ ಯುವಕರೊಂದಿಗೆ ಚಿಂತಿಸಿ ತೀರ್ಮಾನ ಕೈಗೊಳ್ಳುವ ಎಂದು ಒಪ್ಪಿಗೆ ನೀಡಿದರು. ಒಂದು ದಿನದ ಪ್ರವಾಸಕ್ಕಾಗಿ ಚಿತ್ರದುರ್ಗ, ವಾಣಿವಿಲಾಸ ಸಾಗರ ಮತ್ತು ಸುತ್ತಮುತ್ತಲಿನ ಸ್ಥಳ ಆಯ್ಕೆ ಮಾಡಿಕೊಳ್ಳ ಬಹುದೆಂದು ಸುಧಾಕರ ಬನ್ನಂಜೆಯವರು ಸಲಹೆ ನೀಡಿದರು. 
 
3. ಸದಸ್ಯರ ವಿವರ ಸಂಗ್ರಹ: ಈಗಾಗಲೇ ನೋಂದಾಯಿತ ಸದಸ್ಯರ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯರನ್ನು ಸಂಘಕ್ಕೆ ಸೇರಿಸಿಕೊಳ್ಳಲು ಸದಸ್ಯತ್ವ ಅರ್ಜಿ ಮುದ್ರಣ ಗೊಂಡಿದ್ದು, ಪುಸ್ತಕವನ್ನು ಪಡೆದು ತನ್ನ ಎಲ್ಲಾ ಸದಸ್ಯರ ಮಾಹಿತಿಯನ್ನು ಸಂಗ್ರಹಿಸಿ ಸಂಘಕ್ಕೆ ನೀಡಿದ ಶಿರಾಳಕೊಪ್ಪ – ಸೊರಬ ಘಟಕವನ್ನು ವಿಶೇಷವಾಗಿ ಅಭಿನಂದಿಸಲಾಯಿತು.  ಹಾಗೆಯೇ ಎಲ್ಲಾ ಘಟಕಗಳಿಗೂ ಅರ್ಜಿ ನಮೂನೆ ಪುಸ್ತಕ ತಲುಪಿಸುವ ವ್ಯವಸ್ಥೆ ಮಾಡಿರುವುದನ್ನು ಸಭೆಗೆ ತಿಳಿಸಿ, ಸದಸ್ಯರ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು  ಸದಸ್ಯರು ತಕ್ಷಣ ಕಾರ್ಯಪ್ರವೃತ್ತರಾಗಿ ಮಾಡಬೇಕೆಂದು ಇಂದಿನ ಸಭೆಗೆ ಹಾಜರಿರುವ ಸದಸ್ಯರು ಸದಸ್ಯತ್ವ ಅರ್ಜಿಯನ್ನು ಸಭೆಯ ನಂತರ ಭರ್ತಿಮಾಡಬಹುದು ಎಂದು ವಿನಂತಿಸಲಾಯಿತು. 
 
ಹಾಜರಿದ್ದ ಎಲ್ಲಾ ಭಂಡಾರಿ ಬಂಧುಗಳು ಸಭೆಯಲ್ಲಿ ಸ್ವಯಂ ಪರಸ್ಪರ ಪರಿಚಯ ಮಾಡಿಕೊಳ್ಳಲಾಯಿತು. 
 
4. ನಂತರ ಅದ್ಯಕ್ಷರ ಭಾಷಣದಲ್ಲಿ ಭಸಸ ಬೆಂಗಳೂರಿನ ಕಮಿಟಿಯ‌ ಪ್ರಮುಖ ಆಧ್ಯತೆಯ ಕೆಲಸಗಳೇನು, ಗ್ರಾಮೀಣ ಭಾಗದ ಸಮಾಜದ ವಿದ್ಯಾರ್ಥಿಗಳು ವಿಶೇಷವಾಗಿ ವಿದ್ಯಾರ್ಥಿನಿಯರು ವಿದ್ಯಾರ್ಜನೆಯ ಪ್ರತಿಭೆ, ಶ್ರಮ, ಶ್ರದ್ಧೆ, ಮತ್ತು ದಿಟ್ಟತನವನ್ನು ಅಭಿನಂದಿಸುತ್ತಾ ಮುಂದಿನ ದಿನಗಳಲ್ಲಿ ಬೆಂಗಳೂರು ಹೇಗೆ ಸ್ಪರ್ಧಾತ್ಮಕ ಕಲಿಕಾ  ಕೇಂದ್ರವಾಗಲಿದೆ ಅದನ್ನು ನಾವು ಹೇಗೆ ಬಳಸಿಕೊಳ್ಳಬಹುದು ಅದಕ್ಕೆ ಎಲ್ಲಾ ಸದಸ್ಯರ ಸಹಕಾರ ಹೇಗೆ ಇರಬೇಕು ಎಂಬುದನ್ನು ಕೂಲಂಕುಷವಾಗಿ ತಿಳಿಸಿ ಮನವಿಮಾಡಿಕೊಂಡರು. 
 
ಕಾರ್ಯದರ್ಶಿ ಶ್ರೀ ಸುಧಾಕರ ಭಂಡಾರಿಯವರು ಕಿರು ಸಮಯದ ಕರೆಯಲ್ಲಿ ವಿಶೇಷವಾಗಿ ದೂರದ ಊರಿನಿಂದ ಆಗಮಿಸಿದ್ದ ಶ್ರೀ ಚಂದ್ರಶೇಖರ ಕುಳಾಯಿ, ಪ್ರಕಾಶ್ ಭಂಡಾರಿ ಕಟ್ಲ, ಬಾಳೆಹೊನ್ನೂರು ಹಿರಿಯಣ್ಣ, ಮೈಸೂರಿನಿಂದ ಆಗಮಿಸಿದ್ದ ನವೀನ್ ಬೋರುಗುಡ್ಡೆ, ಶಿರಾಳಕೊಪ್ಪದ ಶ್ರೀಮತಿ ಮತ್ತು ಶ್ರೀ ರಮೇಶ್ ಭಂಡಾರಿ ದಂಪತಿಗಳು, ಬಾಳೆಹೊನ್ನೂರಿನ ಶ್ರೀಮತಿ ಮತ್ತು ಶ್ರೀ ಮೋಹನ ಭಂಡಾರಿ ದಂಪತಿಗಳು, ಮೈಸೂರಿನ ನಾಗರತ್ನ ಪ್ರಕಾಶ್ ರವರಿಗೆ ವಿಶೇಷವಾಗಿ ಗೌರವ ಸಲ್ಲಿಸಲಾಯಿತು. 
 
 
ನೆಸ್ಲೆ ಸಂಜೀವ ಭಂಡಾರಿ ಕುಟುಂಬದವರ ವಿದ್ಯಾನಿಧಿಗೆ, ಸಮಾಜದ ಸಂಘಟನೆಗೆ ನಿರಂತರ ಸಹಾಯ ಪ್ರೋತ್ಸಾಹ… 
 
ಕಚ್ಚೂರಿನ ಉತ್ಸವಕ್ಕೆ ಅನ್ನ ಸಂತರ್ಪಣಾ ನಿಧಿ ಕೊಡುಗೆಯ ಶ್ರೀಯುತ ವಿ. ಸಿ. ಶೇಖರ್ ಅವರ ಕುಟುಂಬ 
 
ವಿದ್ಯಾನಿಧಿ, ಉತ್ಸವ ನಿಧಿಗೆ, ಸಂಘಟನೆಗೆ ದೇಣಿಗೆ, ಪ್ರೋತ್ಸಾಹ ಸಹಾಯ ನೀಡುತ್ತಿರುವ ಸಮಾಜದ ಎಲ್ಲಾ ಗೌರವಾನ್ವಿತರಿಗೆ ಕೃತಜ್ಞತಾ ಪೂರ್ವಕ ವಂದನೆಗಳೊಂದಿಗೆ ಸಮಾಜದ ಸಂಘಟನೆಯ ತನ್ನ ನೀತಿ ಬದ್ದತೆಯ ಭರವಸೆಯನ್ನು ನೀಡಲಾಯಿತು. 
 
 
 
ಬೆಂಗಳೂರಿನ ವಿವಿಧ ಭಾಗಗಳಿಂದ ಮೆಟ್ರೋದಲ್ಲಿ ಪ್ರಯಾಣಿಸಿ ಬಂದ ಬಂಧುಗಳನ್ನು ಮೆಟ್ರೋದಿಂದ ಸಭೆಯ ಸ್ಥಳಕ್ಕೆ ಕರೆತಂದು ಮತ್ತೆ ಅವರು ಮರಳಿ ಹೋಗುವಾಗ ಮೆಟ್ರೋ ನಿಲ್ದಾಣಕ್ಕೆ ಬಿಟ್ಟು ಬರುವ ಸೇವೆ ಮಾಡಿದ ಕಾರ್ಯಕಾರಿ ಮಂಡಳಿಯ ಶ್ರೀ ಕರಣ್ ಸುಧಾಕರ ರವರ ಸೇವೆಯನ್ನು ತುಂಬು ಹೃದಯದಿಂದ ಪ್ರಶಂಸಿಲಾಯಿತು. 
 
 
ಬಂದಂತಹ ಎಲ್ಲಾ ಬಂಧುಗಳನ್ನು ಹೃತ್ಪೂರ್ವಕವಾಗಿ ವಂದಿಸಲಾಯಿತು. 
 
ಮದ್ಯಾಹ್ನದ ಭೊಜನ ವ್ಯವಸ್ಥೆಯನ್ನು ರತ್ನಾಕರ ಭಂಡಾರಿ ಬಸ್ರೂರು , ರಾಘವೇಂದ್ರ ಭಂಡಾರಿ ಬಸ್ರೂರು ಇವರ ಮೇಲುಸ್ಥುವಾರಿಯಲ್ಲಿ  ಕಮಿಟಿಯ ಸದಸ್ಯರು ಮಾಡಿದ್ದರು. ಭೋಜನದ ನಂತರ ಎಲ್ಲಾ ಬಂಧುಗಳು ಸಂತೊಷದಿಂದ ಭಸಸ ಬೆಂಗಳೂರ ಕಮಿಟಿಯ ಸದಸ್ಯರಿಗೆ ಶುಭ ಹಾರೈಸಿ ಸಭೆಯನ್ನು ಕೊನೆಗೊಳಿಸಲಾಯಿತು.
 
 
ಧನ್ಯವಾದಗಳು

2 thoughts on “ಭಂಡಾರಿ ಸಮಾಜ ಸಂಘ ಬೆಂಗಳೂರು ಮಾಸಿಕ ಸಭೆಯ ವರದಿ

  1. ವಿವರ ಮಾಹಿತಿಗಾಗಿ ಧನ್ಯವಾದಗಳು

Leave a Reply

Your email address will not be published. Required fields are marked *