January 18, 2025
BSS-bengaluru
ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ವಾರ್ಷಿಕ ಮಹಾಸಭಾ ಕೂಟವು ಈ ಬಾರಿ “ಭಂಡಾರಿ ಸಮಾಜ ಸಂಘ ಸೊರಬ ಶಿರಾಳಕೊಪ್ಪ ಘಟಕ” ದ ಆತಿಥ್ಯದಲ್ಲಿ ಶಿರಾಳಕೊಪ್ಪದಲ್ಲಿ ಡಿಸೆಂಬರ್ 25,2019 ರ ಬುಧವಾರದಂದು ಜರುಗಲಿದೆ. ಆ ದಿನದ ವಾರ್ಷಿಕ ಮಹಾಸಭಾ ಕೂಟ, ಕೌಟುಂಬಿಕ ಸ್ನೇಹ ಸಮ್ಮಿಲನದಲ್ಲಿ ಸುಮಾರು 300 ರಿಂದ 350 ರಷ್ಟು ಸಂಖ್ಯೆಯಲ್ಲಿ ಸಮಾಜ ಬಾಂಧವರು,ಆಯುಷ್ಕರ್ಮ ವೃತ್ತಿಯ ಭಂಡಾರಿ ಬಂಧುಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಸುಸಂದರ್ಭದಲ್ಲಿ ಭಂಡಾರಿ ಸಮುದಾಯದ ಎಲೆಮರೆಯ ಕಾಯಿಯಂತಿರುವ ಪ್ರತಿಭಾವಂತರಿಗೆ ತಮ್ಮ ಸುಪ್ತ ಕಲೆಯ,ಪ್ರತಿಭೆಯ ಅನಾವರಣಕ್ಕಾಗಿ ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘ ಸಭಾಂಗಣದಲ್ಲಿ ಸ್ಥಳಾವಕಾಶ ಮಾಡಿಕೊಡಲಿದೆ.ನಿಮ್ಮಲ್ಲಿರುವ ಚಿತ್ರಕಲೆ,ವ್ಯಂಗ್ಯಚಿತ್ರ, ಟ್ಯಾಟ್ಯೂ ಕಲೆ,ಪುರಾತನ ನಾಣ್ಯ ಸಂಗ್ರಹ,ಅಂಚೆ ಚೀಟಿ ಸಂಗ್ರಹ, ಪುರಾತನ ವಸ್ತುಗಳ ಸಂಗ್ರಹ, ಅಪರೂಪದ ಸಂಗೀತ ವಾದ್ಯಗಳ ಸಂಗ್ರಹ, ನಿಮ್ಮ ಸ್ವ-ರಚಿತ ಕವಿತೆ,ಕವನಗಳ ಪ್ರದರ್ಶನ….ಹೀಗೆ ಹಲವಾರು ಪ್ರಕಾರಗಳ ಕಲೆ ಅಥವಾ ಹವ್ಯಾಸಗಳಿಗೆ ಸೂಕ್ತ ಸ್ಥಳಾವಕಾಶ ವ್ಯವಸ್ಥೆ ಮಾಡಿಕೊಡಲಾಗುವುದು.ಜೊತೆಗೆ ಭಂಡಾರಿ ಸಮುದಾಯದ ಬರಹಗಾರರ ಪ್ರಕಟಿತ ಕೃತಿಗಳ ಪ್ರದರ್ಶನಕ್ಕೂ ಸ್ಥಳಾವಕಾಶದ ವ್ಯವಸ್ಥೆ ಮಾಡಿಕೊಡಲಾಗುವುದು.ಆಸಕ್ತರು ತಮ್ಮ ಹೆಸರನ್ನು ಮೊದಲೇ ನೋಂದಾಯಿಸಿಕೊಳ್ಳಬೇಕು. ನಿಮ್ಮ ಪ್ರಕಟಿತ ಕೃತಿಗಳ ಪ್ರದರ್ಶನಕ್ಕಾಗಿ  ನಿಮ್ಮ ಕೃತಿಗಳನ್ನು ಮುಂಗಡವಾಗಿ ಕಳುಹಿಸಿಕೊಡಬೇಕು.ನಿಮ್ಮ ಮತ್ತು ನಿಮ್ಮ ಕೃತಿಗಳ ಸಂಪೂರ್ಣ ಮಾಹಿತಿಯೊಂದಿಗೆ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗುವುದು.
 
 
ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಶ್ರೀಯುತ ಮಾಧವ ಭಂಡಾರಿಯವರು ಈ ವಿಷಯವಾಗಿ ಮಾತನಾಡುತ್ತ….”ಹವ್ಯಾಸಿ ಸಂಗ್ರಹ, ಚಿಂತನೆ ಬರಹ ಮತ್ತು ವಾಚನ ಮಾನವನ ಸೃಜನಶೀಲತೆಯ ಲಕ್ಷಣ.ಸೃಜನಶೀಲತೆ ಸಮಾಜದ, ಸಮುದಾಯದ ಸ್ವಾಸ್ಥತೆಯ ಸಂಕೇತ. ಈ ದೃಷ್ಟಿಯಲ್ಲಿ ಆಯುಷ್ಕರ್ಮ ಭಂಡಾರಿ ಸಮುದಾಯದ ಸ್ವಾಸ್ಥ ಮುಖದ ಪರಿಚಯದೊಂದಿಗೆ, ಸಾಧಕರ ಸಾಧನೆ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಲಿ ಎಂಬ ಆಶಯದೊಂದಿಗೆ ಈ ಚಿಂತನೆ.ಸಮಾಜದ ಗೌರವಾನ್ವಿತ ಬಂಧುಗಳು ತಮ್ಮ ಪ್ರಕಟಿತ ಕಲೆ,ಸಾಹಿತ್ಯ, ಸಂಗೀತ, ಬರಹ,ಕಥೆ,ಕವನ ಮುಂತಾದವುಗಳ ಕೃತಿ ಸಾಧನೆಗಳೊಂದಿಗೆ ಸಹಕರಿಸಿ,ಸಮಾಜದ ಹೆಮ್ಮೆಯನ್ನು ಎತ್ತರಿಸುವತ್ತ ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಚಿಂತನೆಯೊಂದಿಗೆ ಕೈ ಜೋಡಿಸಬೇಕು.”  ಎಂದು ಮನವಿ ಮಾಡಿಕೊಂಡರು.
 
ಹೆಚ್ಚಿನ ಮಾಹಿತಿಗಾಗಿ…
 
ಶ್ರೀ ಸುಧಾಕರ. ಆರ್.ಭಂಡಾರಿ.
ಪ್ರಧಾನ ಕಾರ್ಯದರ್ಶಿ.
ಭಸಸ-ಬೆಂಗಳೂರು ವಲಯ.
ಮೋ : 9916448652
 
ಶ್ರೀ ಕುಶಲ್ ಕುಮಾರ್.
ಕೋಶಾಧಿಕಾರಿಗಳು.
ಭಸಸ-ಬೆಂಗಳೂರು ವಲಯ.
ಮೋ : 9986408888
 
ನಿಮ್ಮ ಕೃತಿಗಳನ್ನು/ಪುಸ್ತಕಗಳನ್ನು ಕಳುಹಿಸಲು…
 
ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.
ನ್ಯೂ ಪುಷ್ಪಕ್ ಜಂಟ್ಸ್ ಬ್ಯೂಟಿಪಾರ್ಲರ್.
ಶ್ರೀ ಗಜಾನನ ಕಾಂಪ್ಲೆಕ್ಸ್.
ಶಿರಾಳಕೊಪ್ಪ.
ಶಿಕಾರಿಪುರ. ತಾ.
ಶಿವಮೊಗ್ಗ. ಡಿ.
Pin : 577428
ಮೋ : 9964275012
 
 
 
 
ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಈ ವಿನೂತನ ಪ್ರಯತ್ನವನ್ನು “ಭಂಡಾರಿವಾರ್ತೆ” ಹೃದಯಪೂರ್ವಕವಾಗಿ ಸ್ವಾಗತಿಸುತ್ತದೆ. 
 
ಭಂಡಾರಿ ಸಮಾಜ ಸಂಘ,ಬೆಂಗಳೂರು ವಲಯದ ವಾರ್ಷಿಕ ಮಹಾಸಭೆಯ ಆತಿಥ್ಯ ವಹಿಸಿರುವ ಸೊರಬ ಶಿರಾಳಕೊಪ್ಪ ಘಟಕದ ಸರ್ವ ಬಾಂಧವರಿಗೂ ಅಭಿನಂದನೆ ಸಲ್ಲಿಸುತ್ತಾ,ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಗಳಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
 
“ಭಂಡಾರಿವಾರ್ತೆ.”

Leave a Reply

Your email address will not be published. Required fields are marked *