January 19, 2025
bhandary-sangha-bangalore

ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯ

ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯದ ವಾರ್ಷಿಕ ಮಹಾಸಭೆ ಮತ್ತು ಕೌಟುಂಬಿಕ ಸ್ನೇಹ ಕೂಟ ಇದೇ ಬರುವ ಡಿಸೆಂಬರ್ 25 ರಂದು ಜರಗಲಿದೆ . ಇದರ ಪೂರ್ವಭಾವಿಯಾಗಿ ಇದೇ ಮೊದಲ ಬಾರಿಗೆ ಹೊರಾಂಗಣ ಆಟೋಟ ಸ್ಪರ್ಧೆಯನ್ನು ಆಯೋಜಿಸಲು ಸೆಪ್ಟೆಂಬರ್ 2 ರಂದು ನಡೆದ ಸಂಘದ ಮಾಸಿಕ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪುರುಷರಿಗೆ ಚುಟುಕು ಕ್ರಿಕೆಟ್ ಹಾಗೂ ಮಹಿಳೆಯರಿಗೆ ಚೆಂಡು ಎಸೆಯುವ (Throw ball) ಸ್ಪರ್ಧೆ  ನಡೆಸುವ ಬಗ್ಗೆ ನಿರ್ಧರಿಸಿದ್ದು ನಿಯಮಾವಳಿಗಳು ಈ ಕೆಳಗಿನಂತಿದೆ .
1. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡದ ಸದಸ್ಯರು ಕಡ್ಡಾಯವಾಗಿ ಬೆಂಗಳೂರು ವಲಯದ ಭಂಡಾರಿ ಸಮಾಜದವರಾಗಿರಬೇಕು .
2. ಸ್ಪರ್ಧೆಗೆ ವಯಸ್ಸಿನ ಮಿತಿಯಿರುವುದಿಲ್ಲ .
3. ಕ್ರಿಕೆಟ್ ಮತ್ತು ತ್ರೋ ಬಾಲ್ ತಂಡದಲ್ಲಿ 7 ಜನರಿಗೆ ಮಾತ್ರ ಅವಕಾಶವಿರುತ್ತದೆ .
4. ತಂಡದ ಸದಸ್ಯರ ಹೆಸರನ್ನೊಳಗೊಂಡ ಅರ್ಜಿಯು  ಭಂಡಾರಿ ಸಂಘ ದ ಸ್ಥಳೀಯ ಘಟಕದ ಅಧ್ಯಕ್ಷರಿಂದ ಸಹಿ ಪಡೆದು ಅನುಮತಿ ಹೊಂದಿರಬೇಕು .
5. ಸ್ಪರ್ಧೆಯಲ್ಲಿ ಭಾಗವಹಿಸುವ ಬಗ್ಗೆ ತಂಡ ಅಥವಾ ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಸ್ಥಳೀಯ ಘಟಕಗಳು ಇದೇ ಸೆಪ್ಟೆಂಬರ್ 30 ರ ಒಳಗಾಗಿ ಈ ಕೆಳಗಿನ ಪ್ರತಿನಿಧಿಗಳಿಗೆ ತಿಳಿಸತಕ್ಕದ್ದು . 
                                      
ಪ್ರಸಾದ್ ಮುನಿಯಾಲ್
9886747707
ಪ್ರದೀಪ್ ಪಲಿಮಾರ್
9739746613
ಅರುಣ್ ಕುಮಾರ್
9035335672 
ಕುಶಲ್ ಕುಮಾರ್ 
9986408888             
                                                         
ಸ್ಪರ್ಧೆಯ ಸ್ಥಳ ಮತ್ತು ದಿನಾಂಕವನ್ನು ಅಕ್ಟೋಬರ್ 8 ರ ನಂತರ ಸೂಚಿಸಲಾಗುವುದು .
ಅಂತಿಮ ನಿರ್ಧಾರವನ್ನು ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯ ಕಾದಿರಿಸಿದೆ.
ಬೆಂಗಳೂರು ನಗರ ಮತ್ತು ವಲಯದ ಇತರ ಕಡೆ ವಾಸಿಸುತ್ತಿರುವ ಎಲ್ಲಾ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುವ                                                                                                                            
ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು
ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯ.

Leave a Reply

Your email address will not be published. Required fields are marked *