September 20, 2024

ಭಂಡಾರಿ ಸಮಾಜ ಸಂಘ ಮುಂಬೈ ಇದರ ಸ್ಥಾಪಕ ಸದಸ್ಯರಾದ ಗುರುದಾಸ್ ಎಮ್ ಭಂಡಾರಿ(91 ವರ್ಷ ) ತಾರೀಕು 14 ನವೆಂಬರ್ 2020 ರ ಶನಿವಾರ ಮಧ್ಯಾಹ್ನ ಉಡುಪಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ವಿಧಿವಶರಾದರು.

ಗುರುದಾಸ್ ರ ಪತ್ನಿ ಸುನಂದಾ ಭಂಡಾರಿ ಕಳೆದ ವರ್ಷ ನಿಧನರಾಗಿದ್ದಾರೆ. ಸುನಂದಾ ಭಂಡಾರಿ ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಉದ್ಯೋಗಿಯಾಗಿದ್ದರು.

ಬ್ಯಾಂಕ್ ಉದ್ಯೋಗಿಯಾಗಿದ್ದ ಗುರುದಾಸ್ ರವರು ಹೋಟೆಲ್ ಮತ್ತು ಪ್ರಿಂಟಿಂಗ್ ಪ್ರೆಸ್ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

ದಿವಂಗತರು ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿರುವ ಮಗಳು ಶೈಲಜಾ ಮತ್ತು ಅಮೆರಿಕಾದಲ್ಲಿ ಉದ್ಯೋಗದಲ್ಲಿರುವ ಮಗ ಸುಧೀರ್, ಸಂಬಂಧಿಕರು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ

Bhandary Varthe

Leave a Reply

Your email address will not be published. Required fields are marked *