January 19, 2025
BSS kundapura
ಕುಂದಾಪುರ ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆ,ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಮೇ ತಿಂಗಳ 28,2019 ರ ಮಂಗಳವಾರದಂದು ಕುಂದಾಪುರದ ಆರ್.ಎನ್. ಶೆಟ್ಟಿ ಮಿನಿ ಸಭಾಂಗಣದಲ್ಲಿ ಹಂಗ್ಳೂರು ಶ್ರೀ ಸುಭಾಷ್ ಭಂಡಾರಿಯವರ ಅಧ್ಯಕ್ಷತೆಯಲ್ಲಿ ಸಂಘಟಿತಗೊಂಡು ಸಾಂಗವಾಗಿ ನೆರವೇರಿತು.
ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ನ ಆಡಳಿತ ಮೊಕ್ತೇಸರರು ಹಾಗೂ ಅಧ್ಯಕ್ಷರಾದ ಶ್ರೀ ಸುರೇಶ್ ಭಂಡಾರಿ ಕಡಂದಲೆ, ಭಂಡಾರಿ ಮಹಾಮಂಡಲದ ಅಧ್ಯಕ್ಷರಾದ ಶ್ರೀ ಸದಾಶಿವ ಭಂಡಾರಿ ಸಕಲೇಶಪುರ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸೋಮಶೇಖರ್.ಎಂ.ಭಂಡಾರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
 
 
ಈ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇಕಡ ಎಪ್ಪತ್ತಕ್ಕಿಂತ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 83,000/- ರೂಪಾಯಿಗಳಷ್ಟು ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ 96.5% ಅಂಕ ಗಳಿಸಿದ ಉದಯ ಭಂಡಾರಿ ಮತ್ತು ಸುಮಲತಾ ಭಂಡಾರಿ ದಂಪತಿಯ ಪುತ್ರಿ ಕುಮಾರಿ ಮೋನಿಷಾ ಭಂಡಾರಿ ಹಾಗೂ 93% ಅಂಕ ಗಳಿಸಿದ ನಾಗರಾಜ್ ಭಂಡಾರಿ ಮತ್ತು ಮಾಲತಿ ಭಂಡಾರಿ ದಂಪತಿಯ ಪುತ್ರ ಶಶಾಂಕ್ ಭಂಡಾರಿ ಇವರಿಗೆ ಹಾಗೂ ಪಿಯುಸಿಯಲ್ಲಿ 91% ಅಂಕ ಗಳಿಸಿದ ಈಶ್ವರ ಭಂಡಾರಿ ಮತ್ತು ವಾಣಿ ಭಂಡಾರಿ ದಂಪತಿಯ ಪುತ್ರ ಮಿಥಿಲೇಶ್ ಭಂಡಾರಿ ಹಾಗೂ 80% ಅಂಕ ಗಳಿಸಿದ ಅಶೋಕ್ ಭಂಡಾರಿ ಮತ್ತು ಶಶಿಕಲಾ ಭಂಡಾರಿ ದಂಪತಿಯ ಪುತ್ರಿ ಸ್ವಾತಿ ಭಂಡಾರಿ ಇವರಿಗೆ ಪ್ರತಿಭಾ ಸನ್ಮಾನ ನೆರವೇರಿಸಲಾಯಿತು ಹಾಗೂ ಸಮಾಜದ ಗಣ್ಯರಾದ ರಕ್ಷಣಾ ಕ್ಷೇತ್ರದಲ್ಲಿ ದೇಶಕ್ಕಾಗಿ ದುಡಿದ ಬಿಎಸ್ಎಫ್ ಯೋಧ ಶ್ರೀ ಸುಬ್ರಹ್ಮಣ್ಯ ಭಂಡಾರಿ ಹಂಗ್ಳೂರು ಹಾಗೂ ಸಿಆರ್ ಪಿಎಫ್ ಯೋಧ ಶ್ರೀ ರವಿ ಭಂಡಾರಿ ನಾರ್ಕಳಿಯವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. 
 
 
ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹೆಮ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಹರೀಶ್ ಭಂಡಾರಿ, ಹಕ್ಲಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸುಭಾಷ್ ಭಂಡಾರಿ, ತೆಕ್ಕಟ್ಟೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ವಿಜಯ ಭಂಡಾರಿ ಮುಂತಾದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. 
ಸಮಾಜಕ್ಕಾಗಿ ದುಡಿದ ಮಾಜಿ ಅಧ್ಯಕ್ಷರುಗಳಾದ ಶ್ರೀ ಮಧುಕರ ಭಂಡಾರಿ ಕೋಟೇಶ್ವರ, ಶ್ರೀ ಸಂಜೀವ ಭಂಡಾರಿ ಕೋಣಿ, ಶ್ರೀ ಶಶಿಕಾಂತ್ ಭಂಡಾರಿ ಬಸ್ರೂರು ಇವರುಗಳನ್ನು ಸಹ ಈ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 
 
 
ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಸುರೇಶ್ ಭಂಡಾರಿ ಕಡಂದಲೆಯವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
 
 
ಸಮಾರಂಭದಲ್ಲಿ ಅತಿಥಿಗಳಾಗಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ನ ಕಾರ್ಯದರ್ಶಿಗಳು, ಕುಂದಾಪುರ ಭಂಡಾರಿ ಸಮಾಜ ಸಂಘದ ಕಾರ್ಯದರ್ಶಿಗಳಾದ ಶ್ರೀ ಅನಿಲ್ ಭಂಡಾರಿ ಕೋಣಿ, ಹಾಲಾಡಿ ವಲಯ ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಭಂಡಾರಿ ಹುಣ್ಸೆಮಕ್ಕಿ, ತೆಕ್ಕಟ್ಟೆ ವಲಯದ ಅಧ್ಯಕ್ಷರಾದ ಶ್ರೀ ಸುರೇಂದ್ರ ಭಂಡಾರಿ ಶಾನಾಡಿ, ಬಸ್ರೂರು ವಲಯದ ಅಧ್ಯಕ್ಷರಾದ ಶ್ರೀ ಅಶೋಕ್ ಭಂಡಾರಿ ಕೋಣಿ, ವಂಡ್ಸೆ ವಲಯದ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಭಂಡಾರಿ ಶೆಟ್ರಕಟ್ಟೆ, ಸಿದ್ದಾಪುರ ವಲಯದ ಅಧ್ಯಕ್ಷರಾದ ಶ್ರೀ ಗಣೇಶ್ ಭಂಡಾರಿ ಸಿದ್ದಾಪುರ, ಕುಂದಾಪುರ ಸಂಗಮ ಭಂಡಾರಿ ಬಳಗದ ಅಧ್ಯಕ್ಷರಾದ ಶ್ರೀ ಹರೀಶ್ ಭಂಡಾರಿ ಹೆಮ್ಮಾಡಿ,ಕುಂದಾಪುರ ಸ್ಫೂರ್ತಿ ಭಂಡಾರಿ ಬಳಗದ ಅಧ್ಯಕ್ಷರಾದ ಶ್ರೀ ನವೀನ್ ಭಂಡಾರಿ ಬಸ್ರೂರು,ಕುಂದಾಪುರ ಭಂಡಾರಿ ಯುವ ವೇದಿಕೆಯ ಅಧ್ಯಕ್ಷರಾದ ಶ್ರೀ ಹರೀಶ್ ಭಂಡಾರಿ ಮೊಳಹಳ್ಳಿ,ಕುಂದಾಪುರ ಈಶ್ವರಿ ಮಹಿಳಾ ಭಂಡಾರಿ ಬಳಗದ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಭಂಡಾರಿ ಹೆಮ್ಮಾಡಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
 
  
ಕಾರ್ಯಕ್ರಮದ ನಿರೂಪಣೆಯನ್ನು ಶ್ವೇತಾ ನವೀನ್ ಭಂಡಾರಿಯವರು ಹಾಗೂ ಪ್ರಾಸ್ತಾವಿಕ ಭಾಷಣವನ್ನು ರಮೇಶ್ ಭಂಡಾರಿ.ಬಿ.ಎಚ್ ನೆರವೇರಿಸಿದರು. ಮಧುಕರ್ ಭಂಡಾರಿ ಕೋಟೇಶ್ವರ ಇವರು ವರದಿ ವಾಚನ ಮಾಡಿದರು. ಧನ್ಯವಾದ ಸಮರ್ಪಣೆಯನ್ನು ರಾಘು ಭಂಡಾರಿಯವರು ನೆರವೇರಿಸಿದರು.
 
 
ವರದಿ : ಶ್ರೀ ವೆಂಕಟೇಶ್ ಭಂಡಾರಿ ಕುಂದಾಪುರ.

Leave a Reply

Your email address will not be published. Required fields are marked *