January 18, 2025
bengaluru-sangha-150x125

 ದಿನಾಂಕ: 10-01-2021 ರಂದು ಬೆಂಗಳೂರಿನ ಹೋಟೆಲ್ ಕದಂಬದಲ್ಲಿ ನಡೆದ ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ  ಜನವರಿ ಯ ಮಾಸಿಕ ಸಭೆ ಪ್ರಸಾದ ಭಂಡಾರಿ ಮುನಿಯಾಲು  ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಕೋವಿಡ್‌ ತರುವಾಯ ಅಂದರೆ ಮಾರ್ಚ್ 2020ರ ನಂತರ ಪ್ರಪ್ರಥಮವಾಗಿ ಕಾಯ೯ಕಾರಿ ಸಮಿತಿ ಸಭೆ ಕರೆಯಲಾಗಿತ್ತು.

ಮಾಧವ ಭಂಡಾರಿ ಸಾಗರ ರವರ ರಾಜಿನಾಮೆಯ ನಂತರ ಮುಂದಿನ ಡಿಸೆಂಬರ್‌ 2021ರ ವರೆಗೆ ಸಂಘದ ಕಾಯ೯ಕಲಾಪಗಳನ್ನು ನೆರವೇರಿಸಿಕೊಂಡು ಹೋಗುವ ಸಲುವಾಗಿ ಸಮಥ೯ ನಾಯಕತ್ವದ ಅವಶ್ಯಕತೆ  ಇರುವ ಕಾರಣದಿಂದಾಗಿ ಈ ಸಭೆ ತುಂಬಾ ಮಹತ್ವದ್ದಾಗಿತ್ತು.

ಮಾಜಿ ಅಧ್ಯಕ್ಷರಾಗಿದ್ದು, ಸಂಘ ಪ್ರಾರಂಭವಾಗಿ ಇದುವರೆಗೂ ಅಧಿಕಾರ, ಹುದ್ದೆ ಇರಲಿ, ಇಲ್ಲದೆ ಇರಲಿ…ಸಂಘದ ಆಗು ಹೋಗುಗಳಿಗೆ ಸಂಘದ ಪ್ರತೀ ಕಮಿಟಿಯ ಜೊತೆಗಿದ್ದು , ನಿರಂತರವಾಗಿ ಮಾರ್ಗದರ್ಶನ ನೀಡುತ್ತಿರುವ, ಸಂಘದ ಪ್ರತೀ ಸಭೆಗೆ ಹಾಜರಾಗಿ ಹೊಸ ಸದಸ್ಯರಿಗೆ ಮಾರ್ಗದರ್ಶನ ನೀಡುತ್ತಾ ಸಂಘದ ಸರ್ವತೋಮುಖ ಬೆಳವಣಿಗೆಗೆ ತನು-ಮನ-ಧನ ಸಹಕಾರ ನೀಡುತ್ತಿರುವ ಶ್ರೀಯುತ ಲಕ್ಷ್ಮಣ ಭಂಡಾರಿ ಕರಾವಳಿ ಯವರು ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಗೌರವಾಧ್ಯಕ್ಷರಾಗಬೇಕಾಗಿ ಸಭೆಯಲ್ಲಿ ಇದ್ದ ಎಲ್ಲಾ ಸದಸ್ಯರು  ಒಕ್ಕೊರಲಿನಿಂದ ವಿನಂತಿಸಿದಾಗ, ಕರಾವಳಿಯವರು ಈ ಸಂಧಿಗ್ದ ಪರಿಸ್ಥಿತಿಯಲ್ಲಿ ಸಂಘದ ನೇತ್ರತ್ವ ವಹಿಸಲು ಒಪ್ಪಿಕೊಂಡರು.

ಬಳಿಕ ಪ್ರಸಾದ ಭಂಡಾರಿ ಅವರು  ಶ್ರೀಯುತ ಲಕ್ಷ್ಮಣ ಭಂಡಾರಿ ಕರಾವಳಿ ಯವರು ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಗೌರವಾಧ್ಯಕ್ಷರಾಗಬೇಕಾಗಿ ಸೂಚಿಸಿ, ಕುಶಲ್‌  ಅನುಮೋದಿಸಿದರು.

ಸಭೆಯಲ್ಲಿ ಭಾಗವಹಿಸಿದ ಸವ೯ ಸದಸ್ಯರು ನೂತನ ಗೌರವಾಧ್ಯಕ್ಷರನ್ನು ಅಭಿನಂದಿಸಿದರು. ಮುಂದೆ ಕಮಿಟಿಯು ಕರಾವಳಿಯವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಅವಶ್ಯಕವಾಗಿ ಸಂಘದ ಕೆಲಸ ಕಾರ್ಯಗಳನ್ನು ಮಾಡುವುದೆಂದು ತೀರ್ಮಾನಿಸಲಾಯಿತು.

ವರದಿ : ಸುಧಾಕರ್ ಆರ್ ಭಂಡಾರಿ ಶಿರಾಳಕೊಪ್ಪ 

Leave a Reply

Your email address will not be published. Required fields are marked *