ಭಂಡಾರಿ ಸಮಾಜ ಸೇವಾ ಸಂಘ ಮೂಡಬಿದಿರೆ ಇದರ ದಶಮಾನೋತ್ಸವ ಸಮಾರಂಭಕ್ಕೆ ಬೆಳಿಗ್ಗೆ 9.30 ಕ್ಕೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಆ ನಂತರ ಶ್ರೀಮತಿ ಪುಷ್ಪ ಭಂಡಾರಿ ಕಾನ ಇವರ ನೇತೃತ್ವದಲ್ಲಿ ಅರಸಿನ ಕುಂಕುಮ ಕಾರ್ಯಕ್ರಮದ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.
ರೇಖಾ , ರೇಣುಕಾ , ರೇಷ್ಮಾ ಮತ್ತು ಜೀವಿತಾ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.ಪ್ರಖ್ಯಾತ್ ಭಂಡಾರಿ ಕೆಸರಗದ್ದೆ ಸ್ವಾಗತಿಸಿದರು.
ಭಂಡಾರಿ ಮಂಡಲ(ರಿ) ಬಾರಕೂರು ಇದರ ಅಧ್ಯಕ್ಷರಾಗಿರುವ ಶ್ರೀ ಸದಾಶಿವ ಭಂಡಾರಿ ಸಕಲೇಶಪುರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘದ ಅಧ್ಯಕ್ಷರಾದ ಶ್ರೀ ಕೆ . ಎನ್ ಪ್ರಕಾಶ್ ಭಂಡಾರಿಯವರ ನೇತೃತ್ವದಲ್ಲಿ ಮೂಡಬಿದ್ರೆ ಭಂಡಾರಿ ಸಮಾಜ ಸೇವಾ ಸಂಘವು ಉತ್ತಮವಾಗಿ ಕೆಲಸ ಮಾಡುತ್ತಿದ್ದು , ಉತ್ತಮ ಸಂಘಟನೆಯನ್ನು ಹೊಂದಿದ್ದು ಸಂಘ ಎಲ್ಲರೊಂದಿಗೆ ಬೆರೆತುಕೊಂಡು ಬಲಿಷ್ಠವಾಗುತ್ತಿದೆ ಎಂದರು. ಪ್ರತಿಯೊಬ್ಬರೂ ಮುಂಬರುವ ಮೇ 8 ರ ಕಚ್ಚೂರು ಉತ್ಸವದಲ್ಲಿ ಪಾಲ್ಗೊಂಡು ಒಗ್ಗಾಟ್ಟಾಗಿ ದುಡಿದು ಉತ್ಸವವನ್ನು ಯಶಸ್ವಿಯಾಗಿಸಬೇಕೆಂದು ಮನವಿ ಮಾಡಿದರು.
ಸಂಘದ ಅಧ್ಯಕ್ಷರಾದ ಶ್ರೀ ಕೆ . ಎನ್ ಪ್ರಕಾಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು . ಬಂಧುಗಳೆಲ್ಲ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಇಂತಹ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯ ಅಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಶ್ರೀ ಉಮಾನಾಥ ಕೋಟ್ಯಾನ್ ಮಾತನಾಡಿ ಮೂಡಬಿದ್ರೆ ಯ ಭಂಡಾರಿ ಸಮಾಜ ಸೇವಾ ಸಂಘವು ವಿಭಿನ್ನವಾದ ಕಾರ್ಯಚಟುವಟಿಕೆಗಳ ಮೂಲಕ ಇತರ ಸಮುದಾಯಕ್ಕೆ ಮಾದರಿಯಾಗಿದೆ ಎಂದರು. ಜಾತಿ ಸಂಘಟನೆಗಳು ಇಂತಹ ಉತ್ತಮ ಕೆಲಸಗಳ ಮುಖಾಂತರ ಇತರ ಸಮುದಾಯಗಳಿಗೆ ಪೈಪೋಟಿಯನ್ನು ನೀಡಬೇಕಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಶ್ರೀ ಅಭಯ ಚಂದ್ರ ಜೈನ್ ಮಾತನಾಡಿ ಮೂಡಬಿದ್ರೆ ಯ ಭಂಡಾರಿ ಸಮಾಜ ಸೇವಾ ಸಂಘವು ಅತ್ಯುತ್ತಮ ಕೆಲಸಗಳ ಮೂಲಕ ಎಲ್ಲರ ಪ್ರಶಂಸೆಗಳಿಗೆ ಪಾತ್ರವಾಗಿದೆ. ಸಮಾಜವು ರಾಜಕೀಯವಾಗಿಯೂ, ವೈದ್ಯಕೀಯ ಕ್ಷೆತ್ರದಲ್ಲೂ ಮುಂಚೂಣಿಯಲ್ಲಿದ್ದು ಎಲ್ಲರ ಪ್ರೀತಿ ಪಾತ್ರರಾಗುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ/ ರಾಧಿಕಾ ಸಿ., ಫಿಸಿಶಿಯನ್, ಎಸ್ಡಿಎಂ SDM) ಆಯುರ್ವೇದ ಹಾಸ್ಪಿಟಲ್ ಉಡುಪಿ ಇವರು ಮಾತನಾಡಿ ನನಗೆ ಮತ್ತು ಮೂಡಬಿದ್ರಿ ಗೆ ವಿಶೇಷವಾದ ನಂಟು ಇದೆ ಏನೆಂದರೆ ಪುತ್ತಿಗೆ ಶ್ರೀ ಎಂ. ನಾರಾಯಣ ಭಂಡಾರಿ ನನ್ನ ತಾತ ಹುಟ್ಟಿದ ಊರು ಹಾಗೆ ನನ್ನ ಎಂ. ಡಿ. ಆದನಂತರ ಪ್ರಥಮವಾಗಿ ಮೂಡಬಿದ್ರಿ ಭಂಡಾರಿ ಸಮಾಜ ಸೇವಾ ಸಂಘ ಹತ್ತನೇ ವರ್ಷದ ಕಾರ್ಯಕ್ರಮಕ್ಕೆ ಆಹ್ವಾನದ ಅವಕಾಶ ನೀಡಿದೆ. ಈ ಸಂಘದ ಎಲ್ಲರಿಗೂ ನನ್ನ ಕೃತಜ್ಞತೆಗಳು ಹಾಗೆ ವಿದ್ಯೆ ಎನ್ನುವುದು ಒಂದು ಅಮೂಲ್ಯವಾದ ಆಸ್ತಿ. ಇಲ್ಲಿ ಸೇರಿದ ಎಲ್ಲಾ ಮಕ್ಕಳು ಒಳ್ಳೆ ಪರಿಶ್ರಮದಿಂದ ಓದಬೇಕು. ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕು. ನಮ್ಮ ಜೀವನದಲ್ಲಿ ಸಾಧನೆ ಮಾಡಿದರೆ ಅದೊಂದು ಎಲ್ಲರಿಗೂ ಸಂತೋಷ ತರುವ ವಿಷಯ ಹಾಗೆಯೇ ಪ್ರಕೃತಿಗೆ ನಾವು ಕೊಡುವ ಒಂದು ಅರ್ಪಣೆ. ಕಲಿತ ನಂತರ ಯಾವುದೇ ರೀತಿ ಆಗಲಿ ಅದರಿಂದ ಜನರಿಗೆ ಉಪಕಾರ ಆಗುತ್ತದೆ. ಅಂತಹ ಒಂದು ಸಾಧನೆಗೆ ಸಾಧಕರನ್ನು ಹುಡುಕಿ ಭಂಡಾರಿ ಸಮಾಜ ಸೇವಾ ಸಂಘ ಮೂಡುಬಿದಿರೆ ಸನ್ಮಾನ ಮಾಡುವುದು ಒಂದು ಖುಷಿಯ ವಿಷಯ ಹಾಗೆ ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯ ಪ್ರೋತ್ಸಾಹಗಳನ್ನು ಮಾಡುತ್ತಿರುವುದು ಬಾರಿ ಒಳ್ಳೆಯ ವಿಚಾರ. ಹಾಗೆ ನಾನು ಕಲಿತ ವಿದ್ಯೆಯ ಬಗ್ಗೆ ನನ್ನಿಂದ ಯಾರಿಗಾದರೂ ಸಲಹೆ ಸೂಚನೆಗಳು ಬೇಕೆಂದಿದ್ದರೆ ನಾನು ಖಂಡಿತವಾಗಿಯೂ ಸಹಕರಿಸುತ್ತೇನೆ ಎಂದು ನುಡಿದರು.
ಮುಖ್ಯ ಅತಿಥಿಗಳಾದ ಶ್ರೀಯುತ ಪ್ರಸಾದ್ ಕುಮಾರ್ ಮಾತನಾಡಿ ಭಂಡಾರಿ ಸಮಾಜ ಸೇವಾ ಸಂಘ ಮೂಡಬಿದಿರೆ ವರ್ಷಂಪ್ರತಿ ವಿವಿಧ ರೀತಿಯ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಮಾಡುತ್ತಾ ಬಂದಿರುತ್ತದೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪುಸ್ತಕ ವಿತರಣೆ ಕ್ರೀಡೆಗೆ ಪ್ರೋತ್ಸಾಹ ಬೇಕಿದ್ದ ರೀತಿಯಲ್ಲಿ ಸಹಕಾರ ಪ್ರತಿಭೆಗಳನ್ನು ಗುರುತಿಸಿ ಸನ್ಮಾನ ಕಾರ್ಯಕ್ರಮ ಮಾಡುತ್ತಿರುವುದು ಬಾರಿ ಒಳ್ಳೆಯ ವಿಚಾರ ಹಿಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸವಲತ್ತುಗಳು ಕಡಿಮೆಯಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಓದಲು ಎಲ್ಲಾ ರೀತಿಯ ಸವಲತ್ತುಗಳಿವೆ ಇದನ್ನು ಸದುಪಯೋಗ ಪಡಿಸಿ. ಮಕ್ಕಳು ಕಲಿಕೆಯಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಬೇಕು ಎಂದು ನುಡಿದರು.
[ngg src=”galleries” ids=”1″ display=”basic_thumbnail”]ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಮಾಜದ ನ್ಯಾಯಾಧೀಶರಾದ ಕುಮಾರಿ ಸುನೀತಾ ಭಂಡಾರಿ ವಾಲ್ಪಾಡಿ , ಮಾಜಿ ಸೈನಿಕರಾದ ಶ್ರೀ ಗಣೇಶ್ ಭಂಡಾರಿ ಬೆಳುವಾಯಿ,ನಿವೃತ್ತ ಶಿಕ್ಷಕರಾದ ಮಹಾಬಲ ಭಂಡಾರಿ ಮೂಡಬಿದ್ರೆ ,ಶ್ರೀಮತಿ ಮೀನಾಕ್ಷಿ ಭಂಡಾರಿ ವಾಲ್ಪಾಡಿ ,ಉಪನ್ಯಾಸಕರಾದ ಶ್ರೀ ಸುರೇಶ ಭಂಡಾರಿ ಅಲಂಗಾರು, ಡಾI ಶ್ರೀಶಾ ಎಸ್ ರಾಜ್ ಪುತ್ತಿಗೆ ,ಕ್ಷೌರಿಕರಾದ ಶ್ರೀ ಗಂಗಾಧರ ಭಂಡಾರಿ ಗಂಟಾಲಕಟ್ಟೆ , ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಯಶೋಧ ಭಂಡಾರಿ ಕೊಪ್ಪದ ಕುಮೇರು , ರಂಗ ಕಲಾವಿದರಾದ ಶ್ರೀ ಪ್ರವೀಣ್ ಭಂಡಾರಿ ಕೆಸರುಗದ್ದೆ ಹಾಗೂ ಭೋಜ ಭಂಡಾರಿ ಕಲ್ಲಬೆಟ್ಟು ಅವರನ್ನು ಸನ್ಮಾನಿಸಲಾಯಿತು.
ಮೂಡಬಿದ್ರೆ ಪುರಸಭೆಯ ಹತ್ತು ಮಂದಿ ಪೌರಕಾರ್ಮಿಕರಿಗೆ ಗೌರವ ಅರ್ಪಣೆ ಮಾಡಲಾಯಿತು. ಅನಾರೋಗ್ಯದ ಚಿಕಿತ್ಸೆಗಾಗಿ ಮಮತಾ ಭಂಡಾರಿ ದರೆಗುಡ್ಡೆ ,ಗೋಪಾಲ ಭಂಡಾರಿ ಕರಿಂಜೆ ಮತ್ತು ಸುಭಾಷ್ ಭಂಡಾರಿ ಕಾನ ಇವರಿಗೆ ಸಹಾಯಧನ ವಿತರಿಸಲಾಯಿತು.
ದಿವಂಗತ ಜಯ ಭಂಡಾರಿಯವರ ಸ್ಮರಣಾರ್ಥ ಅವರ ಪತ್ನಿ ಮತ್ತು ಮಕ್ಕಳು ಸುಮಾರು 180 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿದರು.
ಈ ವರೆಗೆ ಸಂಘದಲ್ಲಿ ಪದಾಧಿಕಾರಿಗಳಾಗಿ ಸೇವೆಗೈದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮಧ್ಯಾಹ್ನದ ಭೋಜನದ ಪ್ರಾಯೋಜಕತ್ವವನ್ನು ಶ್ರೀಮತಿ ಶಾಂತ ಕೆ ಭಂಡಾರಿ ಮತ್ತು ಮಕ್ಕಳು ಬಸವನಕಜೆ ವಹಿಸಿದ್ದರು. ಕ್ರೀಡಾ ಕೂಟ ಮತ್ತು ಕ್ರಿಕೆಟ್ ಟೂರ್ನಮೆಂಟ್ ನ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಬಂಧುಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಜನರನ್ನು ಮನರಂಜಿಸಿದರು.
ಶ್ರೀ ವಿಶ್ವನಾಥ್ ಭಂಡಾರಿ ಕೆಸರುಗದ್ದೆ ರಚಿಸಿರುವ ಶ್ರೀ ಸತೀಶ್ ಭಂಡಾರಿ ಕರಿಂಜೆ ನಿರ್ದೇಶನದ ತುಳು ನಾಟಕ “ಬರೆತಿನಾರೆನ್ ತೂತರೆ” ಶ್ರೀ ಕೆ . ಎನ್ ಪ್ರಕಾಶ್ ಭಂಡಾರಿಯವರ ಸಹಯೋಗದೊಂದಿಗೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ,ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷರಾದ ಶ್ರೀ ಸುದರ್ಶನ್ ಎಂ. , ಉದ್ಯಮಿ ಶ್ರೀ ದಿವಾಕರ ಶೆಟ್ಟಿ ತೋಡಾರು ,ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ (ರಿ) ನ ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀಧರ ಭಂಡಾರಿ ಬಿರ್ತಿ , ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಭಂಡಾರಿ ಕುಳಾಯಿ , ಡಾ ರಾಧಿಕಾ ವಿ, ಡಾ ಮಹಿಮಾ ಸಾಗರ್ ಭಂಡಾರಿ ,ಭಂಡಾರಿ ಸಮಾಜ ಸಂಘ (ರಿ ) ಕಾರ್ಕಳ ಇದರ ಅಧ್ಯಕ್ಷರಾದ ಶ್ರೀ ಶೇಖರ ಭಂಡಾರಿ, ಭಂಡಾರಿ ಸಮಾಜ ಸಂಘ (ರಿ ) ಬೆಳ್ತಂಗಡಿ ಇದರ ಅಧ್ಯಕ್ಷರಾದ ಶ್ರೀ ಉಮೇಶ್ ಭಂಡಾರಿ ಉಜಿರೆ ,ಭಂಡಾರಿ ಸಮಾಜ ಸಂಘ (ರಿ ) ಪುತ್ತೂರು ಇದರ ಅಧ್ಯಕ್ಷರಾದ ಶ್ರೀ ಗಿರೀಶ್ ಭಂಡಾರಿ, ಭಂಡಾರಿ ಸಮಾಜ ಸೇವಾ ಸಂಘ ಮೂಡಬಿದ್ರೆ ಯ ಗೌರವಾಧ್ಯಕ್ಷರಾದ ಶ್ರೀಮತಿ ಶಾಂತ ಕೆ ಭಂಡಾರಿ ,ಶ್ರೀಮತಿ ಸುಮಿತ್ರಾ ಭಂಡಾರಿ ಕಾನ ,ಶ್ರೀಮತಿ ವಸಂತಿ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು .
,ಶ್ರೀ ಗುರುಪ್ರಸಾದ್ ಭಂಡಾರಿ ವಂದಿಸಿದರು ,ಶ್ರೀ ಸತೀಶ್ ಭಂಡಾರಿ ಕರಿಂಜೆ ಕಾರ್ಯಕ್ರಮ ನಿರೂಪಿಸಿದರು.