September 20, 2024

        ೧೯೫೬ನೇ ಇಸವಿಯಲ್ಲಿ ಭಂಡಾರಿ ಸುಧಾರಕ ಸಂಘವನ್ನು ಮೂಲ್ಕಿ ಕೊರಗಪ್ಪ ಮಾಸ್ಟರ್ ರವರು ಸ್ಥಾಪಿಸಿದರು. ಒಂಭತ್ತು ಮಾಗಣೆಯ ಹಂತದಲ್ಲಿ ಸ್ಥಾಪನೆಗೊಂಡ ಈ ಸಂಘಕ್ಕೆ ಸ್ಥಾಪನಾ ಅಧ್ಯಕ್ಷರಾಗಿ ಮೂಲ್ಕಿ ಕೊರಗಪ್ಪ ಮಾಸ್ಟರ್, ಸಂಘವನ್ನು ಮುನ್ನಡೆಸಿಕೊಂಡು ಬಂದರು. ಕದ್ರಿ ಸಂಜೀವ ಭಂದಾರಿಯವರು ಕಾರ್ಯದರ್ಶಿಯಾಗಿ, ಕುಳಾಯಿ ವಿಠಲ ಭಂಡಾರಿಯವರು ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.  

ಭಂಡಾರಿ ಸಮಾಜಕ್ಕೆ ಮೂಲ ದೇವಾಲಯವೊಂದು ಬಾರ್ಕೂರು ಸಂಸ್ಥಾನದಲ್ಲಿ ಇರುವ ಬಗ್ಗೆ ಕಾಪು ಪಾಂಡು ಭಂಡಾರಿಯವರಿಗೆ ತಿಳಿದು ೧೯೮೮ನೇ ಇಸವಿಯಲ್ಲಿ ದೇವಸ್ಥಾನದ ಬಗ್ಗೆ ಅಷ್ಟಮಂಗಲ ಪ್ರಶ್ನೆಯಿಟ್ಟು ಸಮಾಜದ ಈ ಶಿವಾಲಯದ ಜೀರ್ಣೋದ್ಧಾರ, ನಿತ್ಯ ಪೂಜಾ ವಿಚಾರಕ್ಕೆ ಸಮಾಜ ಬಾಂಧವರನ್ನು ಸಂಘಟಿಸಿದರು. ನಂತರ ದೇವಾಲಯ ಜೀರ್ಣೋದ್ಧಾರ ಸಮಿತಿ ಮತ್ತು ಆಡಳಿತ ಸಮಿತಿಯನ್ನು ಸ್ಥಾಪಿಸಿದರು. ಜೀರ್ಣೋದ್ಧಾರ ಸಮಿತಿಗೆ ಕದ್ರಿ ಸಂಜೀವ ಭಂಡಾರಿಯವರು ಅಧ್ಯಕ್ಷರಾಗಿ ಅವಿರತ ಶ್ರಮಿಸಿದರು. ಕಾಡಬೆಟ್ಟು ಕೆ.ವಿಶ್ವನಾಥ ಭಂಡಾರಿಯವರು ವ್ಯವಸ್ಥಾಪನ ಅಧ್ಯಕ್ಷರಾಗಿ, ಕುಳಾಯಿ ವಿಠಲ ಭಂಡಾರಿಯವರು ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸಿಕೊಂಡು ಬಂದರು.
         ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಈಗಿನ ಉಡುಪಿ ಜಿಲ್ಲೆಯಾದ್ಯಂತ ತಾಲೂಕುವಾರು ಸಮಿತಿಗಳನ್ನು ರಚಿಸಿ ಕದ್ರಿ ಸಂಜೀವ ಭಂಡಾರಿಯವರು ಕಚ್ಚೂರು ‘ನಾಗೇಶ್ವರ’ ದೇವರ ಐತಿಹ್ಯ ಹಾಗೂ ಭಂಡಾರಿ ಸಮಾಜದವರ ವಿಳಾಸದ ಸರ್ವೇಸಹಿತ ‘ನಾಗೇಶ್ವರ’ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿಸಿದರು. ಆ ಸಮಯದಲ್ಲಿ ಮುಖ್ಯ ಸಂಪಾದಕರಾಗಿ ಕೆ.ಅನಂತರಾಮ ಬಂಗಾಡಿ, ಸಹ ಸಂಪಾದಕರಾಗಿ ಪ್ರಕಾಶ್ ಭಂಡಾರಿ ಕಟ್ಲ, ಸುರೇಶ್ ಮರೊಳಿ, ಸುಧಾಕರ ಕಲ್ಬಾವಿ, ನಿಟ್ಟೂರು ಸಂಜೀವ ಭಂಡಾರಿ, ಉದಯಾನಂದ ಭಂಡಾರಿ ಇವರೆಲ್ಲ ಕೈ ಜೋಡಿಸಿ ಈ ಕಾರ್ಯದಲ್ಲಿ ಸಹಕರಿಸಿದರು. ನಂತರ ತಾಲೂಕು ಮಟ್ಟದ ಕಮಿಟಿಯೊಂದಿಗೆ ಸೇರಿ, ದೇವಾಲಯದ ದೇಣಿಗೆಗಾಗಿ ಹಗಲು ಇರುಳು ಅಲೆದಾಡಿ ಒಂದು ಹಂತಕ್ಕೆ ಬಂದು ದೇವಾಲಯಕ್ಕೆ ಶಿಲಾನ್ಯಾಸವಾಗಿ, ಕಚ್ಚೂರು ನಾಗೇಶ್ವರ ದೇವಾಲಯದ ನಿರ್ಮಾಣ ಬ್ರಹ್ಮಕಲಶವಾಯಿತು.
       

      ಪ್ರಕಾಶ್ ಭಂಡಾರಿ ಕಟ್ಲ ರವರ ಸಾರಥ್ಯದಲ್ಲಿ, ಉದಯಾನಂದ ಭಂಡಾರಿ ಸಂಪಧಕರಾಗಿ, ಸುಧಾಕರ ಕಲ್ಬಾವಿಯವರು ಮುದ್ರಕರಾಗಿ “ಶ್ರೀ ನಾಗೇಶ್ವರ” ಭಂಡಾರಿ ವಾರ್ತ ಸಂಚಯ (ಈಗಿನ ಕಚ್ಚೂರುವಾಣಿ ) ಎಂಬ ಮಾಸ ಪತ್ರಿಕೆ ೧೯೯೧ ರಲ್ಲಿ ಆರಂಭಿಸಿದರು.

        ೧೯೯೫ ರಲ್ಲಿ ಭಂಡಾರಿ ಮಹಿಳಾ ಸ್ವಯಂ ಸ್ವೇವಕ ಸಂಘ ಪ್ರಾರಂಭವಾಯಿತು. ಇದರ ಮೊದಲ ಮಹಿಳಾ ಅಧ್ಯಕ್ಷರಾಗಿ ವಿದ್ಯಾಪ್ರಕಾಶ್ ಭಂಡಾರಿಯವರು  ಕಾರ್ಯನಿರ್ವಹಿಸಿಕೊಂಡು ಬಂದರು.         ಪ್ರಕಾಶ್ ಭಂಡಾರಿ ಕಟ್ಲ ಇವರು ಕಚ್ಚೂರಿನ ಕ್ಷೇತ್ರದ ಹೆಸರಿನಲ್ಲಿ ಸೊಸೈಟಿ ಆರಂಭವಾಗಲು ಶ್ರಮಿಸಿ ಯಶಸ್ಸು ಕಂಡರು. ಭಂಡಾರಿ ಸಮಾಜದ ಒಂದು ಶ್ರದ್ಧಾ ಕೇಂದ್ರವಾಗಿ ನಾಗೇಶ್ವರ ಸ್ವಾಮಿಯ ಸಾನಿಧ್ಯ ನಿರ್ಮಾಣದ ಕನಸು ನನಸಾಯಿತು. ಈ ನಿಟ್ಟಿನಲ್ಲಿ ಬೆಂಗಳೂರು, ಮುಂಬೈ ಹೀಗೆ ಹೊರ ತಾಲೂಕು, ಹೊರ ರಾಜದಲ್ಲಿ ಸಂಚರಿಸಿ ಸಮಾಜದ ಉನ್ನತಿಗಾಗಿ ಶ್ರಮಿಸಿದ ಕದ್ರಿ ಸಂಜೀವ ಭಂಡಾರಿಯವರ ಕಾರ್ಯ ವೈಖರಿ ಶ್ಲಾಘನೀಯ. ಸಮಾಜದಲ್ಲಿ ಆಡಳಿತ ಸೂತ್ರದ ಮಾಹಾಮೇರು ಪಂಡಿತರೆನಿಸಿದ ಸಂಜೀವ ಭಂಡಾರಿಯವರು ಅವಿರತಶ್ರಮದಿಂದ ಇಂದು ಸಹಸ್ರ ಸಂಖ್ಯೆಯಲ್ಲಿ ಸಮಾಜ ಬಾಂಧವರನ್ನು ಒಗ್ಗೂಡಿಸುತ್ತಿರುವ ಕಚ್ಚೂರು ನಾಗೇಶ್ವರ ವಾರ್ಷಿಕ ಉತ್ಸವ, ಅವರ ಹಾಗೂ ಅವರ ಬಳಗದ ಕನಸು ನನಸಾಗಿರುವುದು ಸತ್ಯ. ಸಮಾಜಕ್ಕಾಗಿ ಏನು ಕೊಟ್ಟಿದ್ದಿ ಎಂದಾಗ ದೈವೀ ಸಾನಿಧ್ಯದಲ್ಲಿ ಸಮಾಜ ಬಾಂಧವರ ಮಿಲನದ ಕ್ಷಣವನ್ನು ಕೊಟ್ಟಿದ್ದೇನೆಂದು ಹೇಳುವ ಯೋಗ ಭಂಡಾರಿ ಸಮಾಜಕ್ಕಿದೆ. ಈ ನಿಟ್ಟಿನಲ್ಲಿ ಭಂಡಾರಿ ವಾರ್ತೆ ಶ್ರಮಿಸುತ್ತಿದೆ.

3 thoughts on “ಭಂಡಾರಿ ಸಮಾಜಕ್ಕೆ ಕೊಡುಗೆ ನೀಡಿದ ಸಮಾಜ ಬಾಂಧವರು

  1. ನಾವೇಕೊ ತರಾತುರಿಯಲ್ಲಿ ಅಪೂರ್ಣ ಬೆಂದ , ಬೋಜನವೊಂದನ್ನು ನೀಡಿದಂತಿದೆ.
    ಲೇಖನದಲ್ಲಿ ಅನೇಕ ಮಾನ್ಯರನ್ನು ಹೆಸರಿಸಬಹುದಿತ್ತು ಮತ್ತು ಹೆಸರಿಸಬೇಕಿತ್ತು ಎಂಬುದು ನನ್ನ ಅಭಿಪ್ರಾಯ.

    ಲೇಖನವನ್ನು ಮತ್ತೊಮ್ಮೆ ಪರಿಷ್ಕರಿಸಿ ಪ್ರಕಟಿಸ ಬಹುದೇನೋ ಅನ್ನಿಸುತ್ತದೆ.

    ತಮಗಿಂತ ತಿಳಿದವನಲ್ಲ, ಕ್ಷಮೆ ಇರಲಿ.

  2. ತಂತ್ರಜ್ಞಾನ ದಲ್ಲಿ ನಮ್ಮವರು ಇಷ್ಟೊಂದು ಮುಂದುವರೆದಿದ್ದಾರೆ ಎಂಬುದು ಹೆಮ್ಮೆ ವಿಚಾರವೇ ಸರಿ…..ಬೇರೆಯವರಿಗೆ ಹೋಲಿಕೆ ಮಾಡಿದಲ್ಲಿ ಖಂಡಿತಾ ನಮ್ಮವರೆ ಮುಂದಿದ್ದಾರೆ….. ಇದು ಅಭಿವೃದ್ದಿಯ ಗುರುತು ……ಮಹೇಂದ್ರ ಕುಮಾರ್ ಫಲ್ಗುಣಿ ~
    ರಾಜ್ಯಾದ್ಯಕ್ಷ ~ಯುವ ಜಾಗೃತಿ ಮತದಾರರ ವೇದಿಕೆ

Leave a Reply

Your email address will not be published. Required fields are marked *