
ಭಂಡಾರಿ ಸಮಾಜ ಸಂಘ ಮಂಗಳೂರು(ರಿ) ಇವರ ವಾರ್ಷಿಕ ಮಹಾಸಭೆ, ಸನ್ಮಾನ ಸಮಾರಂಭ ಮತ್ತು ಸಹಾಯಧನ ವಿತರಣಾ ಕಾರ್ಯಕ್ರಮ ನವೆಂಬರ್ 25, 2018 ರ ಭಾನುವಾರ ಬೆಳಿಗ್ಗೆ 10:30 ಕ್ಕೆ ಮಂಗಳೂರಿನ ಮಲ್ಲಿಕಟ್ಟೆ ಲಯನ್ಸ್ ಕ್ಲಬ್ ಎದುರು ಇರುವ “ಸುಮ ಸದನ” ದಲ್ಲಿ ನೆರವೇರಿಸಲು ತೀರ್ಮಾನಿಸಲಾಗಿದೆ.

ವಾರ್ಷಿಕ ಮಹಾಸಭೆಯಲ್ಲಿ 2017-18 ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ನಾಲ್ಕು ವಿದ್ಯಾರ್ಥಿಗಳಿಗೆ ಸಹಾಯಧನವನ್ನು ವಿತರಿಸಲಾಗುವುದು ಮತ್ತು ವಿವಿಧ ರಂಗಗಳಲ್ಲಿ ಗುರುತಿಸಲ್ಪಟ್ಟ ಸಮಾಜ ಬಾಂಧವರನ್ನು ಸನ್ಮಾನಿಸಲಾಗುವುದು.

ಕಚ್ಚೂರು ವಾಣಿಯ ನಿವೃತ್ತ ಸಂಪಾದಕರಾದ ಶ್ರೀ ಎ.ಕೆ.ಭಂಡಾರಿ, ಮಂಗಳೂರು ಅಂಚೆ ಇಲಾಖೆಯಲ್ಲಿ ಸೂಪರಿಂಡೆಂಟ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ವೀರನಗರದ ಶ್ರೀ ಗೋಪಾಲ್.ಎಸ್.ಭಂಡಾರಿ ಮತ್ತು ಪ್ರಾಸ ಕವಿ, ಚುಟುಕು ಸಾಹಿತಿ, ಚಲನಚಿತ್ರ ನಟ ಕಾರ್ಕಳ ಶ್ರೀ ಶೇಖರ ಭಂಡಾರಿ ಇವರನ್ನು ಸನ್ಮಾನಿಸಲಾಗುವುದು ಎಂದು ಮಂಗಳೂರು ಭಂಡಾರಿ ಸಮಾಜದ ಅಧ್ಯಕ್ಷರಾದ ಶ್ರೀ ನಾಗೇಶ್ ಭಂಡಾರಿ ಮಣ್ಣುಗುಡ್ಡೆಯವರು ಭಂಡಾರಿವಾರ್ತೆಗೆ ಮಾಹಿತಿ ನೀಡಿದರು.