
ಮೇ 4 ರಿಂದ ಮೇ 9 ರ ವರೆಗೆ ಬಾರ್ಕೂರಿನ ಕಚ್ಚೂರು ಶ್ರೀ ನಾಗೇಶ್ವರ ದೇವಾಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಪೂರ್ವಕ ಬ್ರಹ್ಮಕಲಶೋತ್ಸವ ಮತ್ತು ಮೇ 8 ರಂದು ಜರಗುವ ಷೋಡಶ ಪವಿತ್ರಾತ್ಮಕ ಸಂಪೂರ್ಣ ನಾಗಮಂಡಲ ವೈಭವೋತ್ಸವಕ್ಕೆ ಬೆಳ್ತಂಗಡಿಯ ಭಂಡಾರಿ ಸಮಾಜ ಬಾಂಧವರು ಹೊರೆ ಕಾಣಿಕೆ ಸಂಗ್ರಹಿಸಿದ್ದಾರೆ .
ಮೇ 5 ರಂದು ಸಮಾಜ ಬಾಂಧವರಿಂದ ಸಂಗ್ರಹಗೊಂಡ ಹೊರೆ ಕಾಣಿಕೆಗಳನ್ನು ವಿಜೃಂಭಣೆಯಿಂದ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು .
ಈ ಸಂದರ್ಭದಲ್ಲಿ ಭಂಡಾರಿ ಸಂಘ ಬೆಳ್ತಂಗಡಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಸದಸ್ಯರು ಮತ್ತು ಯುವ ವೇದಿಕೆ ಬೆಳ್ತಂಗಡಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸರ್ವ ಸದಸ್ಯರು ಮತ್ತು ಅನೇಕ ಹಿರಿಯ ಸಮಾಜ ಬಾಂಧವರು ಉಪಸ್ಥಿತರಿದ್ದರು .
ವರದಿ :ಪುನೀತ್ ಭಂಡಾರಿ ಉಜಿರೆ