ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯದ ಮಾರ್ಚ್ ತಿಂಗಳ ಸಭೆಯು ಮಾರ್ಚ್ 6 ರ ಭಾನುವಾರ ಸಂಘದ ಅಧ್ಯಕ್ಷರಾದ ಪ್ರಸಾದ್ ಮುನಿಯಾಲ್ ರವರ ಅಧ್ಯಕ್ಷತೆಯಲ್ಲಿ ಗೂಗಲ್ ಮೀಟ್ ಮೂಲಕ ಆನ್ ಲೈನ್ ನಲ್ಲಿ ನಡೆಯಿತು .
ಸಂಘದ ಪ್ರಧಾನ ಕಾರ್ಯದರ್ಶಿಯವರಾದ ಕುಶಲ್ ಭಂಡಾರಿ ಯವರು ಹಾಜರಿದ್ದ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸಂಘದ ಮಾಜಿ ಅಧ್ಯಕ್ಷರು ,ಭಂಡಾರಿ ಮಹಾಮಂಡಲದ ಅಧ್ಯಕ್ಷರಾದ ಸದಾಶಿವ ಭಂಡಾರಿ ಸಕಲೇಶಪುರರವರನ್ನು ಸ್ವಾಗತಿಸಿದರು.
ಫೆಬ್ರವರಿ ತಿಂಗಳ ಮಾಸಿಕ ಸಭೆಯ ನಡಾವಳಿಯನ್ನು ಪ್ರಧಾನ ಕಾರ್ಯದರ್ಶಿಯವರು ಸಭೆಗೆ ಓದಿ ಹೇಳಿದರು.
ಅದೇ ರೀತಿ ಡಿಸೆಂಬರ್ 25 , 2021 ರಂದು ನಡೆದ ಸಂಘದ ಮಹಾಸಭೆಯ ಲೆಕ್ಕ ಪತ್ರವನ್ನುಸಭೆಯಲ್ಲಿ ಮಂಡಿಸಿ ಸಭೆಯ ಅಂಗೀಕಾರ ಪಡೆದುಕೊಂಡರು.
ಸಭೆ ಮುಂದುವರಿದು ಸಂಘದ ವಿದ್ಯಾನಿಧಿ ಯ ಮೊತ್ತವನ್ನುಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಮಿತಿಯ ನೂತನ ಯೋಜನೆಯ ಬಗ್ಗೆ ವಿಜ್ಞಾಪನ ಪತ್ರವನ್ನು ಅಧ್ಯಕ್ಷರು ಸಭೆಗೆ ಓದಿ ಹೇಳಿದರು.ಕಳೆದ ಐದು ವರ್ಷಗಳಲ್ಲಿ ಬಡ್ಡಿದರ ಕಡಿಮೆ ಆದ ಕಾರಣ, ನಮಗೆ ವಾರ್ಷಿಕ ಬಡ್ಡಿ ಹೆಚ್ಚು ಉತ್ಪತ್ತಿಯಾಗುತ್ತಿಲ್ಲ! ವರ್ಷಕ್ಕೆ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ವೇತನವನ್ನು ಕೊಡುತ್ತಿದ್ದ ನಮಗೆ ಈಗ ಕೇವಲ 60-70 ಸಾವಿರ ಕೊಡಲು ಮಾತ್ರ ಸಾಧ್ಯವಾಗುತ್ತಿದೆ!.ಹಾಗಾಗಿ ವಿದ್ಯಾನಿಧಿಯ ಈಗ ಇರುವ ನಿರಖು ಠೇವಣಿಯನ್ನು 13 ಲಕ್ಷದಿಂದ 25 ಲಕ್ಷಕ್ಕೆ ಏರಿಸಿ, ನಮ್ಮ ಸಮಾಜದ ಪ್ರತಿಭಾನ್ವಿತ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಮತ್ತು ಪೋಷಕರಿಗೆ ಇನ್ನು ಹೆಚ್ಚಿನ ರೀತಿಯ ಪ್ರೋತ್ಸಾಹ ನೀಡುವ ಹೆಬ್ಬಯಕೆ ನಮ್ಮದಾಗಿದೆ!.
ವಲಯದ ಎಲ್ಲಾ ಸದಸ್ಯರು ಉದಾರವಾಗಿ, ಈ ಯೋಜನೆಯಲ್ಲಿ ಜೊತೆಯಾಗಿ ಸಹಕರಿಸಲು ವಿನಂತಿಸುತ್ತೇನೆ! ಎಂದರು.
ಹಾಜರಿದ್ದ ಕಾರ್ತಿಕ್ ಭಂಡಾರಿ, ನಟರಾಜ್ ನಾಗಪ್ಪ ಯೋಜನೆಯನ್ನು ಬೆಂಬಲಿಸಿ ಕೆಲವು ಅಮೂಲ್ಯ ಸಲಹೆ ಸೂಚನೆಯನ್ನು ನೀಡಿದರು .
ನಂತರ ಅಧ್ಯಕ್ಷರಾದ ಪ್ರಸಾದ್ ಮುನಿಯಾಲ್ ಮತ್ತು ಪ್ರಧಾನ ಕಾರ್ಯದರ್ಶಿಯವರಾದ ಕುಶಲ್ ಭಂಡಾರಿಯವರು ತಮ್ಮ ಪಾಲಿನ ಮೊತ್ತವನ್ನು ವಿದ್ಯಾನಿಧಿಯ ಯೋಜನೆಗೆ ದೇಣಿಗೆ ರೂಪದಲ್ಲಿ ನೀಡುವುದಾಗಿ ಘೋಷಣೆ ಮಾಡಿದರು.
ಮುಂದಿನ ದಿನಗಳಲ್ಲಿ ಸದಸ್ಯರನ್ನು ಮುಖತಃ ಭೇಟಿಯಾಗಿ ದೇಣಿಗೆ ಸಂಗ್ರಹಿಸಲು ಸಭೆ ತೀರ್ಮಾನಿಸಿತು.
ಉಪಾಧ್ಯಕ್ಷರಾದ ಸುಧಾಕರ್ ಭಂಡಾರಿ ಶಿರಾಳಕೊಪ್ಪರ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯವಾಯಿತು.
-ಭಂಡಾರಿ ವಾರ್ತೆ