January 18, 2025
mumbai bhandary seva samithi1

               

 

               ಮುಂಬಯಿಯ ಭಂಡಾರಿ ಸೇವಾ ಸಮಿತಿಯು ಭಂಡಾರಿ ಬಂಧುಗಳಿಗಾಗಿ                    

ಉಚಿತ ಆರೋಗ್ಯ ಮಾಹಿತಿ ಮತ್ತು ಆಪ್ತ ಸಮಾಲೋಚನಾ ಶಿಬಿರ

ಸೆಪ್ಟೆಂಬರ್ 8 ರ ಶನಿವಾರ ಮದ್ಯಾಹ್ನ 3:30 ರಿಂದ ಪೂರ್ವ ಡೊಂಬಿವಿಲಿಯ ರಘುವೀರ ನಗರದ ರೋಟರಿ ಸೇವಾಕೇಂದ್ರದಲ್ಲಿ ಏರ್ಪಡಿಸಿತ್ತು.

ಈ ಶಿಬಿರದಲ್ಲಿ ಮುಂಬಯಿಯ ಭಂಡಾರಿ ಬಂಧುಗಳಿಗೆ  ಹೆಸರಾಂತ ಆರೋಗ್ಯ ತಜ್ಞರು, ಸಮಾಲೋಚಕರಾದ ಪ್ರೊಫೆಸರ್ ಶ್ರೀ ಆರ್.ವಿಜಯನ್ ಮತ್ತು  ಡಾ|| ಸುಜಾತ. ಕೆ. ಭಂಡಾರೆ ಯವರು ಆರೋಗ್ಯ ಸಂರಕ್ಷಣೆ, ಆರೋಗ್ಯ ನಿರ್ವಹಣೆ ಮತ್ತು ಆರೋಗ್ಯ ನಿರ್ವಹಣೆಯಲ್ಲಿ ಸತ್ವಯುತ, ಸಮತೋಲಿತ  ಆಹಾರದ ಪಾತ್ರಗಳ ಬಗ್ಗೆ ಉಪಯುಕ್ತ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮ ಆರಂಭದಲ್ಲಿ ಶ್ರೀಮತಿ ಕ್ಷಮಾ.ಆರ್‌.ಭಂಡಾರಿಯವರು ಪ್ರೊಫೆಸರ್ ವಿಜಯನ್ ಅವರನ್ನು, ಶ್ರೀಮತಿ ಅಂಕಿತಾ ತುಕಾರಾಮ್ ಭಂಡಾರಿಯವರು ಡಾ|| ಸುಜಾತ.ಕೆ.ಭಂಡಾರೆಯವರನ್ನು ಪರಿಚಯಿಸಿದರು. ಸಭೆಯಲ್ಲಿ ಶಿಬಿರದ ಆಯೋಜನೆಗೆ ಸ್ಥಳಾವಕಾಶ ಒದಗಿಸಿಕೊಟ್ಟ ಡೊಂಬಿವಿಲಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ಶ್ರೀ ಭುಜಂಗ ಭಂಡಾರಿ ಡೊಂಬಿವಿಲಿಯವರು, ಭಂಡಾರಿ ಸೇವಾ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಶೇಖರ್.ಎಸ್.ಭಂಡಾರಿಯವರು, ಸಹ ಕಾರ್ಯದರ್ಶಿ ಶ್ರೀ ರಂಜಿತ್ ಮುಂತಾದವರು ಉಪಸ್ಥಿತರಿದ್ದರು.


ಮುಂಬಯಿಯಲ್ಲಿ ನೆಲೆಸಿರುವ ನೂರಾರು ಭಂಡಾರಿ ಬಂಧುಗಳು ಮತ್ತು ಮುಂಬಯಿ ಭಂಡಾರಿ ಸೇವಾ ಸಮಿತಿಯ ಎಲ್ಲಾ ಸದಸ್ಯರು,ಪದಾಧಿಕಾರಿಗಳು ಈ ಶಿಬಿರದಲ್ಲಿ ಅತೀ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮುಂಬಯಿ ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಆರ್.ಎಂ.ಭಂಡಾರಿಯವರು ಪ್ರೊಫೆಸರ್ ಆರ್. ವಿಜಯನ್ ಅವರನ್ನು ಸನ್ಮಾನಿಸಿದರು‌. ಮತ್ತು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶಾಲಿನಿ ರಮೇಶ್ ಭಂಡಾರಿ ಪೊವೈ ಯವರು ಡಾ||ಸುಜಾತಾರವರನ್ನು ಸನ್ಮಾನಿಸಿದರು. ಗೌರವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಶಿಧರ್.ಡಿ.ಭಂಡಾರಿಯವರು ಕಾರ್ಯಕ್ರಮ ನಿರೂಪಿಸಿದರು. ಮಿಮಿಕ್ರಿ ಕಲಾವಿದರಾದ ಶ್ರೀ ಭರತ್ ಠಾಕೂರ್ ಮತ್ತು ಹಿಂದಿ ಧಾರಾವಾಹಿ ನಟ ಶ್ರೀ ತೇಜಸ್ ರಜಪೂತ್ ಅರ್ಧ ಗಂಟೆಗಳ ಕಾಲ ಸಭಿಕರನ್ನು ರಂಜಿಸಿದರು.

ನಂತರ ಶ್ರೀ ಭರತ್ ಠಾಕೂರ್ ರವರನ್ನು  ಶ್ರೀ ಪ್ರಭಾಕರ್ ಭಂಡಾರಿ ಥಾಣೆ ಗೌರವಿಸಿದರು ಮತ್ತು ಶ್ರೀ ತೇಜಸ್ ರಜಪೂತ್ ರವರನ್ನು ಶ್ರೀ ಕರುಣಾಕರ. ಎಸ್. ಭಂಡಾರಿ ಕಂಡೀವಳಿಯವರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆಲ್ಲಾ ಉಡುಗೊರೆಗಳನ್ನು ನೀಡಲಾಯಿತು.


ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಮುಂಬಯಿ ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷರಾದ ಅಡ್ವೊಕೇಟ್ ಶ್ರೀ ಆರ್.ಎಂ.ಭಂಡಾರಿಯವರು  “ಈ ಆರೋಗ್ಯ ಶಿಬಿರದ ಯಶಸ್ಸಿನ ಶ್ರೇಯಸ್ಸು ಕಾರ್ಯಕ್ರಮದ ಆಯೋಜನೆಗೆ ಶ್ರಮಿಸಿದ ಭಂಡಾರಿ ಬಂಧುಗಳು, ಭಂಡಾರಿ ಸೇವಾ ಸಮಿತಿಯ ಸರ್ವ ಸದಸ್ಯರು ಮತ್ತು ಪದಾಧಿಕಾರಿಗಳಿಗೆ ಸಲ್ಲುತ್ತದೆ. ಸಹ ಕಾರ್ಯದರ್ಶಿ ರಂಜಿತ್ ರ ಶ್ರಮ ಮತ್ತು ಉತ್ಸಾಹವನ್ನು ಈ ಸಮಯದಲ್ಲಿ ಸ್ಮರಿಸಲೇಬೇಕು” ಎಂದು ನುಡಿದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಶ್ರೀ ಪುರುಷೋತ್ತಮ ಭಂಡಾರಿಯವರ ವಂದನಾರ್ಪಣೆಯೊಂದಿಗೆ ಸಭೆಗೆ ಮಂಗಳ ಹಾಡಲಾಯಿತು.                                                                                                                   

ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.                                                                                                       

Professor Vijan R is the councilor. Doctor Sujata K bandare is nutrition and health information given. Vijayan felicated by president Advocate RMBhandary and DrSujata KBhandare felicitated by Ladies wing chairperson Shalini Ramesh Bhandary Powai. Hall Rotary seva Kendra sponsored by Bhujang Bhandary Dombivli (president of Rotary club Dombivali).  Kshama R bhandary given introduction of vijan R.  And Ankita Tukaram Bhandary given introduction of Dr. Sujata K Bhandary.  All committee members there and due to their support this programme was sucessed.  Gift distributed for children’s.  Programmes hosted    by secretary shashidhar Bhandary.   Ex president shekar bhandary also there.    This programme sponsored by all committee members of Bhandary seva samiti Mumbai.  Very good crowd and thankful to our family members supported for success this programme. Joint secretary Ranjit given good support and sponsored refreshments. Half hour mimicry there through Bharat thakur and tejas rajput serial artist. Bharat felicitated by Prabhakar Bhandary Thane and tejas felicitated by Karunakar S Bhandary Kandivali. Vote of thanks given by Purushottam Bhandary

Leave a Reply

Your email address will not be published. Required fields are marked *