
ಮುಂಬಯಿ ಭಂಡಾರಿ ಸೇವಾ ಸಮಿತಿಯ ಅರುವತ್ತಾರನೇ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 8,2019 ರ ಭಾನುವಾರ ಮುಲುಂಡ್ ಪಶ್ಚಿಮದ ಶ್ರೀ ಕುಚ್ ದೇಶಿಯ ಸಾರಸ್ವತ್ ಬ್ರಾಹ್ಮಿಣ್ ಮಹಾಸ್ಥಾನ ಟ್ರಸ್ಟ್ ಸಭಾಂಗಣದಲ್ಲಿ ನೆರವೇರಿತು.







ಈ ಸಭೆಗೆ ಭಂಡಾರಿ ಸೇವಾ ಸಮಿತಿಯ ಸರ್ವ ಸದಸ್ಯರುಗಳು, ಮುಂಬಯಿ ಭಂಡಾರಿ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಆರ್.ಎಂ.ಭಂಡಾರಿಯವರು ವಹಿಸಿದ್ದರು.ಭಂಡಾರಿ ಸೇವಾ ಸಮಿತಿಯ ಉಪಾಧ್ಯಕ್ಷರಾದ ಪ್ರಭಾಕರ್.ಪಿ.ಭಂಡಾರಿ ಥಾಣೆ, ಗೌರವ ಕೋಶಾಧಿಕಾರಿ ಕರುಣಾಕರ್.ಎಸ್.ಭಂಡಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಶಾಲಿನಿ.ಆರ್.ಭಂಡಾರಿ, ಉಪ ಕಾರ್ಯಾಧ್ಯಕ್ಷೆ ರೇಖಾ.ಎಂ.ಭಂಡಾರಿ, ಗೌರವ ಕಾರ್ಯದರ್ಶಿ ಜಯಸುಧಾ.ಟಿ.ಭಂಡಾರಿ, ನಿಕಟಪೂರ್ವ ಅಧ್ಯಕ್ಷರಾದ ನ್ಯಾಯವಾದಿ ಶೇಖರ್.ಎಸ್.ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಲದೇವರಾದ ಕಚ್ಚೂರು ಶ್ರೀ ನಾಗೇಶ್ವರ ದೇವರಿಗೆ ಪೂಜೆ ಸಮರ್ಪಿಸಿ ದೀಪವನ್ನು ಪ್ರಜ್ವಲಿಸಿ ಸಭೆಗೆ ಚಾಲನೆಯನ್ನು ನೀಡಲಾಯಿತು.ಶ್ರೀಮತಿ ಶಾಲಿನಿ ರಮೇಶ್ ಪೊವೈ ಯವರು ಪ್ರಾರ್ಥನೆ ಸಲ್ಲಿಸಿದರು. ಸಭೆಯ ಆರಂಭಕ್ಕೆ ಮುನ್ನ ಅಗಲಿದ ಸಮಾಜದ ಬಂಧುಗಳಿಗೆ ಮೌನಾಚರಣೆಯ ಮೂಲಕ ಗೌರವ ಸಮರ್ಪಿಸಲಾಯಿತು.ಭಂಡಾರಿ ಸೇವಾ ಸಮಿತಿಯ ಕಾರ್ಯದರ್ಶಿ ಶಶಿಧರ್.ಪಿ.ಭಂಡಾರಿಯವರು ಸ್ವಾಗತ ಭಾಷಣವನ್ನು ನೆರವೇರಿಸಿ,ಸಭೆಯ ನೋಟಿಸ್ ಅನ್ನು ಓದಿದರು.ವಾರ್ಷಿಕ ವರದಿಯನ್ನು ಸಹ ಕಾರ್ಯದರ್ಶಿ ರಂಜಿತ್ ಸೀತಾರಾಮ್ ಭಂಡಾರಿಯವರು ವಾಚಿಸಿದರು. ಲೆಕ್ಕಪತ್ರವನ್ನು ಕೋಶಾಧಿಕಾರಿ ಕರುಣಾಕರ್.ಎಸ್.ಭಂಡಾರಿಯವರು ಮಂಡಿಸಿದರು.

ಮುಂಬಯಿ ಭಂಡಾರಿ ಸೇವಾ ಸಮಿತಿಯ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಶಾಲಿನಿ. ಆರ್.ಭಂಡಾರಿಯವರು ಮಾತನಾಡಿ “ಭಂಡಾರಿ ಸಮಾಜದ ಯುವ ಸಮೂಹ ಸಂಘಟಿತರಾಗಬೇಕು.ತನ್ಮೂಲಕ ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕು” ಎಂದು ಕರೆ ನೀಡಿದರು.

ನ್ಯಾಯವಾದಿ ಆರ್.ಎಂ.ಭಂಡಾರಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಸ್ವಸಮಾಜದ ಸರ್ವೋನ್ನತ ಅಭಿವೃದ್ಧಿಗೆ ಸಮುದಾಯದ ಸಂಸ್ಥೆಗಳು ಬೆನ್ನೆಲುಬು ಇದ್ದಂತೆ. ಇಂತಹ ಸಂಸ್ಥೆಗಳು ಸದೃಢವಾಗಿ ಬೆಳೆದಾಗ ಸಮಾಜವು ಸದೃಢಗೊಳ್ಳುತ್ತದೆ.ಸ್ವಜಾತಿಯ ಸಂಸ್ಕೃತಿಗಳು, ಸಂಪ್ರದಾಯಗಳು ಜೀವಂತವಾಗಿ ಉಳಿಯಲು ಸಮುದಾಯದ ಸಂಸ್ಥೆಗಳು ಸಹಕಾರಿಯಾಗಿರುತ್ತವೆ. ಸಮಾಜದ ಅಭಿವೃದ್ಧಿ ಆರ್ಥಿಕವಾಗಿ ಹಿಂದುಳಿದ ಸಮಾಜದ ಕುಟುಂಬಗಳ ಅಭಿವೃದ್ಧಿ ಹೊಂದಿದಾಗ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ಆರೋಗ್ಯ ನಿಧಿ ಮತ್ತು ವಿದ್ಯಾನಿಧಿಯ ಸಂಗ್ರಹಣಾ ಕೆಲಸ ಅಭಿವೃದ್ಧಿಯಲ್ಲಿದೆ.ಭಂಡಾರಿ ಸೇವಾ ಸಮಿತಿಯ ಸದಸ್ಯರುಗಳು ಭಂಡಾರಿ ಸಮಾಜದ ಮನೆಮನೆಗೆ ಧನ ಸಂಗ್ರಹಿಸಲು ಭೇಟಿ ನೀಡಲಿದ್ದಾರೆ.ಭಂಡಾರಿ ಸಮಾಜದ ಪ್ರತಿಯೊಬ್ಬರೂ ಈ ಪವಿತ್ರ ಕಾರ್ಯದಲ್ಲಿ ನಮ್ಮೊಂದಿಗೆ ಸಹಕರಿಸಬೇಕು” ಎಂದು ನುಡಿದರು.

ಸಭೆಯಲ್ಲಿ ಸಹ ಕೋಶಾಧಿಕಾರಿ ಪ್ರಕಾಶ್ ಭಂಡಾರಿ ಮತ್ತು ಸುಭಾಷ್ ಭಂಡಾರಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ನಾರಾಯಣ್.ಆರ್.ಭಂಡಾರಿ, ಜಯಶೀಲ.ಯು.ಭಂಡಾರಿ, ಕೇಶವ.ಟಿ.ಭಂಡಾರಿ, ರಾಕೇಶ್.ಎಸ್.ಭಂಡಾರಿ ಜಯಾ.ಪಿ.ಭಂಡಾರಿ, ವಿಶ್ವನಾಥ್.ಬಿ.ಭಂಡಾರಿ, ರುಕ್ಮಯ ಭಂಡಾರಿ, ಸಂತೋಷ್ ಭಂಡಾರಿ, ಕರುಣಾಕರ ಭಂಡಾರಿ, ಪ್ರಕಾಶ್.ಎಸ್.ಭಂಡಾರಿ, ಮಾಜಿ ಅಧ್ಯಕ್ಷರುಗಳಾದ ನ್ಯಾಯವಾದಿ ಸುಂದರ್.ಜಿ.ಭಂಡಾರಿ, ಬಾಲಕೃಷ್ಣ.ಪಿ.ಭಂಡಾರಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲಲಿತಾ.ವಿ.ಭಂಡಾರಿ ಒಳಗೊಂಡಂತೆ ಭಂಡಾರಿ ಸಮಾಜದ ಅನೇಕ ಬಂಧುಗಳು ಉಪಸ್ಥಿತರಿದ್ದರು.

ಉಪಾಧ್ಯಕ್ಷರಾದ ಪುರುಷೋತ್ತಮ.ಜಿ.ಭಂಡಾರಿಯವರು ವಂದನಾರ್ಪಣೆ ನೆರವೇರಿಸಿದರು.ಈ ದಿನದ ಕಾರ್ಯಕ್ರಮದ ಪ್ರಚಾರಕ್ಕಾಗಿ ಬ್ಯಾನರ್ ಮತ್ತು ಫೋಟೋಗ್ರಫಿ ವ್ಯವಸ್ಥೆ ಮಾಡಿಕೊಟ್ಟ ಪ್ರಭಾಕರ್ ಭಂಡಾರಿಯವರಿಗೆ, ಟೀ ಮತ್ತು ಉಪಾಹಾರದ ವ್ಯವಸ್ಥೆ ಮಾಡಿಕೊಟ್ಟ ಕೇಶವ ಭಂಡಾರಿಯವರಿಗೆ, ಪ್ರಾರಂಭದ ಪೂಜಾ ವ್ಯವಸ್ಥೆಯನ್ನು ಮಾಡಿಕೊಟ್ಟ ನಾರಾಯಣ ಭಂಡಾರಿಯವರಿಗೆ,ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ರಾಕೇಶ್ ಭಂಡಾರಿ, ರುಕ್ಮಯ್ಯ ಭಂಡಾರಿ ಮುಂತಾದವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಅಂತಿಮವಾಗಿ ರಾಷ್ಟ್ರಗೀತೆಯೊಂದಿಗೆ ಮಹಾಸಭೆಗೆ ಮಂಗಳ ಹಾಡಲಾಯಿತು.
ವರದಿ : ಭಾಸ್ಕರ ಭಂಡಾರಿ ಶಿರಾಳಕೊಪ್ಪ. (ಭಂಡಾರಿ ವಾರ್ತೆ)